
ಯಾದಗಿರಿ (ಮೇ.11): ಬೆಂಗಳೂರಿಗೆ ಗುಳೆ ಹೋದ 8 ನೇ ತರಗತಿ ಬಾಲಕಿ ಕಿಡ್ನಾಪ್ ಆಗಿರುಬ ದಾರುಣ ಘಟನೆ ನಡೆದಿದೆ. ಬಾಲಕಿ ಕಿಡ್ನಾಪ್ ಆಗಿ ತಿಂಗಳು ಕಳೆದ್ರೂ ಈವರೆಗೆ ಆಕೆಯ ಸುಳಿವು ಪತ್ತೆಯಾಗಿಲ್ಲ.
ಕೂಲಿ ಕೆಲಸ ಮಾಡಿಯಾದ್ರು ಮಗಳನ್ನ ಓದಿಸುವ ಕನಸು ಕಂಡಿದ್ದ ಪೋಷಕರಿಗೆ ಮಗಳು ಕಾಣೆಯಾಗಿರುವುದು ಆಘಾತ ತಂದಿದೆ. ಮಗಳು ನಾಪತ್ತೆಯಾಗಿರುವುದರಿಂದ ನಿತ್ಯವು ಪೋಷಕರು ಕಣ್ಣೀರಲ್ಲಿ ಕೈ ತೊಳೆತ್ತಿದ್ದಾರೆ.
ಕೊಡಗು ಅಪ್ತಾಪ್ತೆಯ ಭೀಕರ ಹತ್ಯೆ ಪ್ರಕರಣ, ಮೃತ ವಿದ್ಯಾರ್ಥಿನಿಯ ರುಂಡ ಪತ್ತೆ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಭ್ಯಾಗ್ಯಶ್ರೀ ಕಿಡ್ನಾಪ್ ಆಗಿರುವ ಬಾಲಕಿಯಾಗಿದ್ದು, ಮಾಟ-ಮಂತ್ರ ಮಾಡಿ ಮಗಳನ್ನ ಕಿಡ್ನಾಪ್ ಮಾಡಿರೋದಾಗಿ ಪೋಷಕರು ಆರೋಪಿಸಿದ್ದಾಎಡ.
ಸಿದ್ಧಲಿಂಗ ಹಾಗೂ ಮಾಳಮ್ಮ ಅನ್ನೋ ದಂಪತಿಗಳು ಮಗಳನ್ನು ಕಿಡ್ನಾಪ್ ಮಾಡಿರುವ ಆರೋಪ ಇದೆ. ಏಪ್ರೀಲ್ 3ರಂದು ಯುಗಾದಿ ಹಬ್ಬದ ಮುನ್ನಾ ದಿನ ಭಾಗ್ಯಶ್ರೀ ಕಿಡ್ನಾಪ್ ಆಗಿದ್ದಾಳೆ. ತಲೆಗೆ ಪೌಡರ್ ಸವರಿ ಮಗಳಿಗೆ ಮಾಟ ಮಂತ್ರ ಮಾಡಿಸಿ ಬಳ್ಳಾರಿ ಮೂಲದ ಸಿದ್ದಲಿಂಗ ಹಾಗೂ ಮಾಳಮ್ಮ ಕಿಡ್ನಾಪ್ ಮಾಡಿದ್ದಾಗಿ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಹಾಸನದಲ್ಲಿ ಮೂವರು ಅರೆಸ್ಟ್
ಭಾಗ್ಯಶ್ರೀ ಪೋಷಕರು ಹಾಗೂ ಕಿಡ್ನಾಪ್ ಮಾಡಿರುವ ಆರೋಪಿಗಳು ಎರಡು ವರ್ಷದಿಂದ ಪರಿಚಯಸ್ಥರಾಗಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಹೀರನಪಾಳ್ಯ ಗಣೇಶ ದೇವಸ್ಥಾನ ಬಳಿಯ ಅಕ್ಕಪಕ್ಕದಲ್ಲೇ ವಾಸ ಮಾಡ್ತಿದ್ದರು.
ಅಪ್ರಾಪ್ತ ಬಾಲಕಿ ನಾಪತ್ತೆ ಆಗಿರೋದ್ರಿಂದ ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದೆ. ಮಗಳನ್ನು ಕಿಡ್ನಾಪ್ ಮಾಡಿದ್ದಾರೆ. ಏನಾಗಿದ್ದಾಳೋ ಗೊತ್ತಿಲ್ಲ. ಹಣಕ್ಕಾಗಿ ಮಗಳನ್ನ ಮಾರಾಟ ಮಾಡಿದ್ದಾರೋ? ಇನ್ನೇನಾದ್ರೂ ಮಾಡಿದ್ದಾರೋ ಎಂದು ಪೋಷಕರ ಕಣ್ಣೀರು ಹಾಕುತ್ತಿದ್ದು, ನಮ್ಮ ಮಗಳನ್ನ ಹುಡುಕಿ ಕೊಡಿ ಎಂದು ಗೋಳಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ