Nidhi Gupta Murder Case: ಇಸ್ಲಾಂ ಸೇರದ್ದಕ್ಕೆ ನಾಲ್ಕನೇ ಅಂತಸ್ತಿಂದ ನೂಕಿ ಕೊಂದ..!

By Kannadaprabha News  |  First Published Nov 17, 2022, 7:57 AM IST

ಮೃತ ನಿಧಿ, ಹಂತಕ ಸೂಫಿಯಾನ್‌ ನೆರೆಹೊರೆ ನಿವಾಸಿಗಳಾಗಿದ್ದು, ಮತಾಂತರಗೊಂಡು ನಿಖಾ ಆಗುವಂತೆ ನಿಧಿ ಮೇಲೆ ಒತ್ತಡ ಹೇರಲಾಗಿದೆ. ಇದಕ್ಕೆ ಆಕೆ ನಿರಾಕರಿಸಿದಾಗ ಅಪಾರ್ಟ್‌ಮೆಂಟ್‌ ಮೇಲಿಂದ ತಳ್ಳಿ ಹತ್ಯೆ ಮಾಡಲಾಗಿದೆ ಎಂದು ಯುವತಿಯ ತಾಯಿ ಆರೋಪಿಸಿದ್ದಾರೆ. 


ಲಖನೌ: ದಿಲ್ಲಿಯಲ್ಲಿ ಮುಸ್ಲಿಂ (Muslim) ಯುವಕನೊಬ್ಬ ಹಿಂದೂ (Hindu) ಯುವತಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿದ ಕೃತ್ಯದ ಬೆನ್ನಲ್ಲೇ, ಲಖನೌನಲ್ಲಿ (Lucknow) 19 ವರ್ಷದ ಹಿಂದೂ ಯುವತಿಯೊಬ್ಬಳನ್ನು ಆಕೆಯ ಪ್ರಿಯಕರ ಅಪಾರ್ಟ್‌ಮೆಂಟ್‌ನ (Apartment) 4ನೇ ಅಂತಸ್ತಿನಿಂದ ನೂಕಿ ಕೊಂದು ಹಾಕಿದ ಭೀಕರ ಘಟನೆ ನಡೆದಿದೆ. ನಿಧಿ ಗುಪ್ತಾ (Nidhi Gupta) ಎಂಬಾಕೆಯೇ ಮೃತ ಯುವತಿ. ಈಕೆಯನ್ನು ಮೊಹಮ್ಮದ್‌ ಸೂಫಿಯಾನ್‌ (Mohammad Sufiyan) ಎಂಬ ಬಾಯ್‌ಫ್ರೆಂಡ್‌ ಅಪಾರ್ಟ್‌ಮೆಂಟ್‌ನಿಂದ ಕೊಂದು ನೂಕಿದ್ದಾನೆ. ಮತಾಂತರಗೊಂಡು ನಿಖಾ (ಮದುವೆಗೆ) (Marriage) ಆಗಲು ಆಕೆ ನಿರಾಕರಿಸಿದ್ದೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಸದ್ಯ ಸೂಫಿಯಾನ್‌ ಪರಾರಿಯಾಗಿದ್ದು, ಆತನಿಗೆ ಶೋಧ ನಡೆದಿದೆ.

ಮತಾಂತರಕ್ಕೆ ಒತ್ತಾಯಿಸುತ್ತಿದ್ದ:
‘ಬ್ಯೂಟಿಷಿಯನ್‌ ಆಗಲು ಇಚ್ಛಿಸಿದ್ದ ನಿಧಿ ಹಾಗೂ ಸೂಫಿಯಾನ್‌ ಅಕ್ಕಪಕ್ಕದ ನಿವಾಸಿಗಳು. ನಿಧಿಯನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸುತ್ತಿದ್ದ ಸೂಫಿಯಾನ್‌, ಆಕೆಗೆ ಮುಸ್ಲಿಂ ಆಗಿ ಮತಾಂತರ ಆಗಲು ಹಾಗೂ ಮದುವೆ ಆಗಲು ಒತ್ತಡ ಹೇರುತ್ತಿದ್ದ. ಆಕೆಗೆ ಮೊಬೈಲ್‌ ಫೋನ್‌ ಕೊಡಿಸಿ ಸಂಪರ್ಕದಲ್ಲಿದ್ದ’ ಎಂದು ನಿಧಿ ಪೋಷಕರು ಆರೋಪಿಸಿದ್ದಾರೆ.

Tap to resize

Latest Videos

ಇದನ್ನು ಓದಿ: Shraddha Murder Case: ಗೆಳತಿ ಹೆಣ ಇಟ್ಕೊಂಡೇ ಬೇರೆ ಹುಡ್ಗೀರ ಜತೆ ಅಫ್ತಾಬ್‌ ರಾಸಲೀಲೆ..!

‘ಈ ವಿಷಯ ಗೊತ್ತಾದ ತಕ್ಷಣ ನಾವು ಸೂಫಿಯಾನ್‌ ಮನೆಗೆ ಹೋಗಿ, ಆತನ ಪಾಲಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದೆವು. ಆಗ ಮಾತಿಗೆ ಮಾತು ಬೆಳೆದು ನಿಧಿಯನ್ನು ಅಪಾರ್ಟ್‌ಮೆಂಟ್‌ ಮೇಲೆ ಎಳೆದೊಯ್ದ ಸೂಫಿಯಾನ್‌, ಆಕೆಯನ್ನು 4ನೇ ಅಂತಸ್ತಿನಿಂದ ತಳ್ಳಿ ಸಾಯಿಸಿದ’ ಎಂದು ದೂರಿನಲ್ಲಿ ಪೋಷಕರು ಹೇಳಿದ್ದಾರೆ. ‘ನನ್ನ ಮಗಳು ಇಸ್ಲಾಂಗೆ ಮತಾಂತರ ಆಗಲು ಹಾಗೂ ಮದುವೆಗೆ ನಿರಾಕರಿಸಿದಳು. ಅದಕ್ಕೇ ಆಕೆಯನ್ನು ಆತ ಕೊಂದ’ ಎಂದು ಅವರು ದೂರಿದ್ದಾರೆ.

ಇದೇ ವೇಳೆ, ನಿಧಿಯ ‘ವಿಡಿಯೋ’ವನ್ನು ಆತ ಇರಿಸಿಕೊಂಡಿದ್ದ. ಅದನ್ನು ಇರಿಸಿಯೇ ಮತಾಂತರದ ಬೇಡಿಕೆ ಇಟ್ಟಿದ್ದ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: Shraddha Murder Case: ಮೃತದೇಹ ಪೀಸ್‌ ಮಾಡಿದ ಬಳಿಕ ಆಕೆಯ ತಲೆಯನ್ನು ಫ್ರಿಡ್ಜ್‌ನಲ್ಲಿಟ್ಟು ಶ್ರದ್ಧಾ ಮುಖ ನೋಡ್ತಿದ್ದ ಪಾತಕಿ..!

ಮಂಗಳವಾರ ರಾತ್ರಿ ಉತ್ತರ ಪ್ರದೇಶ ರಾಜ್ಯ ರಾಜಧಾನಿ ಲಖನೌನ ದುಬಗ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂತ್ ಕುಂಜ್ ಸೆಕ್ಟರ್ ಎಚ್ ನಲ್ಲಿ ಈ ಘಟನೆ ನಡೆದಿದೆ. ನಿಧಿ ಗುಪ್ತಾಳನ್ನು ತಳ್ಳಿದ ಬಳಿಕವೂ ಆಕೆ ಬದುಕುಳಿದಿದ್ದಳು. ನಂತರ, ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಆಘಾತ ಕೇಂದ್ರದಲ್ಲಿ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದ ಹೆಚ್ಚುವರಿ ಡಿಸಿಪಿ (ಪಶ್ಚಿಮ) ಸಿಎನ್ ಸಿನ್ಹಾ, ಆರೋಪಿಯನ್ನು ಮೊಹಮ್ಮದ್ ಸೂಫಿಯಾನ್ ಎಂದು ಗುರುತಿಸಲಾಗಿದ್ದು, ಕೊಲೆ ಮತ್ತು ಬಲವಂತದ ಧಾರ್ಮಿಕ ಮತಾಂತರದ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು. ಬಾಲಕಿಯ ತಾಯಿ ದುಬಗ್ಗಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಗರ್ಲ್‌ ಫ್ರೆಂಡ್‌ ಮೋಸ ಮಾಡಿದ್ಳೆಂದು ಗಂಟಲು ಸೀಳಿ, ಮೃತದೇಹದೊಂದಿಗೆ ವಿಡಿಯೋ ಪೋಸ್ಟ್‌ ಮಾಡಿದ..!

ಹಾಗೂ, ಆರೋಪಿಗಳ ಬಂಧನಕ್ಕೆ ಪ್ರಯತ್ನ ನಡೆಯುತ್ತಿದೆ. ಯಾವುದೇ ಕೋಮು ಉದ್ವಿಗ್ನತೆ ಉಂಟಾಗದಂತೆ ಪೊಲೀಸರು ಹೆಚ್ಚಿನ ಜಾಗರೂಕತೆಯಿಂದ ಪ್ರಕರಣವನ್ನು ನಿಭಾಯಿಸುತ್ತಿದ್ದಾರೆ ಎಂದೂ ವರದಿಯಾಗಿದೆ. 

click me!