ಜೆಟ್ ಲ್ಯಾಗ್ ಪಬ್ ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ್ದ ಪ್ರಕರಣಕ್ಕರ ಸಂಬಂಧಿಸಿದಂತೆ, ನಟ ದರ್ಶನ್ ಹಾಗೂ ಮತ್ತಿತರ ಸ್ಟಾರ್ ಗಳು ಸುಬ್ರಮಣ್ಯ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ಜೆಟ್ ಲ್ಯಾಗ್ ಪಬ್ ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ್ದ ಪ್ರಕರಣಕ್ಕರ ಸಂಬಂಧಿಸಿದಂತೆ, ಕೆಪಿ( ಕರ್ನಾಟಕ ಪೊಲೀಸ್ ) ಕಾಯ್ದೆ ಅಡಿಯಲ್ಲಿ ಮತ್ತು ಅಬಕಾರಿ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಮತ್ತಿತರ ಸ್ಟಾರ್ ಗಳು ಸುಬ್ರಮಣ್ಯ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ಪ್ರಕರಣ ಸಂಬಂಧ ದರ್ಶನ್. ಚಿಕ್ಕಣ್ಣ, ಧನಂಜಯ , ನಿನಾಸಂ ಸತೀಶ್. ರಾಕ್ ಲೈನ್ ವೆಂಕಟೇಶ್, ತರೂಣ್ ಸುದೀರ್ ಸೇರಿ ಎಂಟು ಜನಕ್ಕೆ ನೋಟಿಸ್ ನೀಡಲಾಗಿತ್ತು. ಈಗ ಎಂಟು ಮಂದಿ ವಿಚಾರಣೆಯನ್ನು ಮೂವರು ಇನ್ಸ್‌ಪೆಕ್ಟರ್ ಗಳ ತಂಡ ನಡೆಸಿದೆ.
ತನಗಿಂತ 26 ವರ್ಷದ ಹಿರಿಯ ನಿರ್ಮಾಪಕನನ್ನು ಮದುವೆಯಾಗಿ 17ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಸೂಪರ್ ಸ್ಟಾರ್ ನಟಿ!
ಸುಬ್ರಮಣ್ಯ ನಗರ ಠಾಣೆ ಇನ್ಸ್‌ಪೆಕ್ಟರ್ ಸುರೇಶ್, ಶ್ರೀರಾಮಪುರ ಇನ್ಸ್‌ಪೆಕ್ಟರ್ ಬಾಲಕೃಷ್ಣ, ಮಲ್ಲೇಶ್ವರಂ ಇನ್ಸ್‌ಪೆಕ್ಟರ್ ಜಗದೀಶ್ ಅವರಿಂದ ವಿಚಾರಣೆ ನಡೆದಿದೆ. ಸ್ಟಾರ್ ಗಳು ಬರುತ್ತಿರುವ ಹಿನ್ನೆಲೆಯಲ್ಲಿ ಠಾಣೆ ಬಳಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ರಾಜ್ ಕುಮಾರ್ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದೆ. ಸೆಲೆಬ್ರಿಟಿಗಳ ವಿಚಾರಣೆ ನಡೆಸಿರುವ ತನಿಖಾಧಿಕಾರಿಗಳು ಸುಮಾರು ಹದಿನೈದು ಪ್ರಶ್ನೆಗಳನ್ನ ಕೇಳಿದ್ದಾರೆ ಎಂದು ತಿಳಿದುಬಂದಿದೆ.
1. ನಿಮ್ಮ ಹೆಸರೇನು, ತಂದೆ ಹೆಸರೇನು?
2.ಯಾವ ವಿಳಾಸದಲ್ಲಿ ವಾಸವಾಗಿದ್ದೀರಾ?
3. ಯಾವ ವೃತ್ತಿ ಮಾಡಿಕೊಂಡಿದ್ದೀರಾ?
4. ಜನವರಿ 3 ರಂದು ಜೆಟ್ ಲಾಗ್ ಪಬ್ ಗೆ ಯಾಕೇ ಬಂದಿದ್ರಿ?
5. ಎಷ್ಟೊತ್ತಿಗೆ , ಯಾರೊಂದಿಗೆ ಜೆಟ್ ಲಾಗ್ ಪಬ್ ಬಂದಿದ್ರಿ?
6. ಜೆಟ್ ಲಾಗ್ ಪಬ್ ಗೆ ಬರೋದಕ್ಕೆ ಯಾರಾದರೂ ಆಹ್ವಾನ ನೀಡಿದ್ರಾ?
7. ಜೆಟ್ ಲಾಗ್ ಪಬ್ ನಲ್ಲಿ ಯಾವ ಉದ್ದೇಶಕ್ಕಾಗಿ ಆಹ್ವಾನ ನೀಡಿದ್ರು?
8. ಪಾರ್ಟಿಗೆ ಆಹ್ವಾನ ನೀಡಿದ್ದಾದಲ್ಲಿ ಎಷ್ಟೊತ್ತಿಗೆ ಪಾರ್ಟಿ ಶುರುವಾಯ್ತು?
9. ಪಬ್ ನಲ್ಲಿ ಆಯೋಜನೆಗೊಂಡಿದ್ದ ಪಾರ್ಟಿಯಲ್ಲಿ ಯಾರ್ಯಾರು ಭಾಗಿಯಾಗಿದ್ರು?
10. ಪಾರ್ಟಿಗೆ ಬಂದವ್ರು ಎಷ್ಟೊತ್ತಿಗೆ ಹೊರಗಡೆ ಹೋದ್ರು
11. ನೀವು ಎಷ್ಟೊತ್ತಿಗೆ ಪಾರ್ಟಿಯಿಂದ ಹೊರ ಬಂದ್ರಿ
12. ಅವಧಿ ಮೀರಿ ಪಾರ್ಟಿ ಮಾಡಿದ್ದೀರಾ ನಿಮಗೆ ಕಾನೂನು ನಿಯಮದ ಬಗ್ಗೆ ತಿಳಿದಿಲ್ಲವಾ..?
13. ಒಂದು ಗಂಟೆ ಬಳಿಕ ಬಾರ್ ಅಂಡ್ ರೆಸ್ಟೋರೆಂಟ್ ಕ್ಲೋಸ್ ಆಗುತ್ತೆ ಹೋಗ್ಬೇಕು ಅನ್ನೋ ಅರಿವಿಲ್ಲವಾ?
14. ಜೆಟ್ ಲಾಗ್ ಪಬ್ ನಲ್ಲಿ ಆಯೋಜಿಸಿದ್ದ ಪಾರ್ಟಿ ಸಿನಿಮಾ ಸಕ್ಸಸ್ ಪಾರ್ಟಿನಾ?
15. ಪಬ್ ಸಿಬ್ಬಂದಿ ಹೊರತು ಪಡಿಸಿ ನೀವು ಎಂಟೇ ಜನ ಪಬ್ ನಲ್ಲಿ ಉಳಿಯಲು ಕಾರಣವೇನು?
ಇನ್ನು ವಿಚಾರಣೆ ನಡೆಸಿ ಹೊರ ಬಂದ ದರ್ಶನ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, 26ನೇ ತಾರೀಖು ಚಿಕ್ಕಣ್ಣನ ಸಿನಿಮಾ ರಿಲೀಸ್ ಆಗುತ್ತೆ, ನೋಡಿ ಎಂದು ಹೇಳಿ ಹೆಚ್ಚೇನು ಮಾತನಾಡದೆ ತೆರಳಿದ್ದಾರೆ.
ಇನ್ನು ಕಾಟೇರ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಪ್ರಕರಣ ಸಂಬಂಧ ಗರಂ ಆಗಿದ್ದು, ಬೇಕುಂತಲೇ ದರ್ಶನ್ ಮತ್ತು ನಮ್ಮೆಲ್ಲರ ಹೆಸರಿಗೆ ಮಸಿ ಬಳಿಯುವ ಹುನ್ನಾರ ನಡೆದಿದೆ. ನಾವು ಊಟಕಷ್ಟೇ ಹೋಗಿದ್ದೆವು ಅಷ್ಟಕ್ಕೇ ಈ ರೀತಿ ಮಾಡಿದ್ದಾರೆ. ಒರಯಾನ್ ಮಾಲ್ ಅಲ್ಲಿ ಸೆಲೆಬ್ರಿಟಿ ಶೋ ಆಯೋಜನೆ ಆಗಿತ್ತು. ಮೂರನೇ ತಾರೀಖು ಆಯೋಜನೆ ಮಾಡಲಾಗಿತ್ತು. ಅವತ್ತು ಚಿತ್ರರಂಗದ ಹಲವರು ಭಾಗಿಯಾಗಿದ್ರು. ಲೇಟಾದ ಹಿನ್ನೆಲೆ ನಾನೇ ಎಲ್ಲರಿಗೂ ಜೆಟ್ಲಾಗ್ ನಲ್ಲಿ ಊಟ ಮಾಡಿಕೊಂಡು ಹೋಗಿ ಅಂತಾ ಹೇಳಿದ್ದೆ. ತಡರಾತ್ರಿ ನಾವೇನು ಅಲ್ಲಿ ಪಾರ್ಟಿ ಮಾಡಿರಲಿಲ್ಲ. ತಡರಾತ್ರಿ ಊಟ ಆಯೋಜನೆ ಮಾಡಲಾಗಿತ್ತು. ಊಟ ಮಾಡಿ ಹೋಗಿದ್ದು ಅಷ್ಟೇ. ನಾವೂ ಯಾರಿಗೂ ತೊಂದರೆ ಮಾಡಿಲ್ಲ. ಕಾನೂನು ತೊಡಕು ಮಾಡಿಲ್ಲ. ಇಷ್ಟಕ್ಕೇ ಈ ರೀತಿ ಆಗ್ತಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಹಲವು ರೆಸ್ಟೋಬಾರ್ ಗಳು ತಡರಾತ್ರಿವರೆಗೂ ಓಪನ್ ಆಗಿರುತ್ತೆ. ಅವ್ರಿಗೆ ನೊಟೀಸ್ ನೀಡಿಲ್ಲ. ಆದ್ರೆ ನಮಗೆ ಕೊಟ್ಟಿದ್ದಾರೆ. ಒಂದು ಗಂಟೆ ಆದ್ಮೇಲೆ ಊಟ ಮಾಡಿದ್ದು. ಅಡುಗೆಯವ್ರು ಕಮ್ಮಿ ಇರೋದ್ರಿಂದ ಅವ್ರು ಲೇಟ್ ಮಾಡಿದ್ರು. ನ್ಯಾಯಾಂಗಕ್ಕೆ ನಾವು ತಲೆ ಬಾಗ್ತೀವಿ.ಆ ವೇಳೆ ಪೊಲೀಸರು ಯಾರೂ ಬಂದಿಲ್ಲ. ಯಾರೂ ಕೇಳಿಲ್ಲ. ನಮ್ಮತ್ರ ಯಾರೂ ಬಂದಿಲ್ಲ ಎಂದು ರಾಕ್ಲೈನ್ ವೆಂಕಟೇಶ್ ಹೇಳಿಕೆ ನೀಡಿದ್ದಾರೆ.