ಮಗನ ಮುಖದಿಂದ ಗಂಡನ ನೆನಪಾಗ್ತಿದ್ದಕ್ಕೆ ಹತ್ಯೆ ಮಾಡಿದ್ರಾ ಬೆಂಗಳೂರು ಸ್ಟಾರ್ಟಪ್‌ ಕಂಪನಿಯ ಸಿಇಒ?

By Kannadaprabha News  |  First Published Jan 12, 2024, 3:31 PM IST

ನನ್ನ ಮಗನ ಮುಖ ಅವರ ತಂದೆಯನ್ನೇ ಹೋಲುತ್ತದೆ. ಆತನನ್ನು ನೋಡಿದಾಗಲೆಲ್ಲಾ ನನಗೆ ನನ್ನ ಪತಿಯ ಮುಖ ಮತ್ತು ನಮ್ಮಿಬ್ಬರ ನಡುವಿನ ಹಳಸಿದ ಸಂಬಂಧವೇ ನೆನಪಿಗೆ ಬರುತ್ತದೆ ಎಂದು ಕುಟುಂಬಕ್ಕೆ ಹೇಳಿಕೊಂಡಿದ್ದರು. ಹೀಗಾಗಿ ಪುತ್ರನನ್ನು ಕೊಲೆ ಮಾಡಲು ಅದೇ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.


ಪಣಜಿ (ಜನವರಿ 12, 2024): ಗೋವಾದಲ್ಲಿ ತನ್ನ 4 ವರ್ಷದ ಮಗುವಿನ ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ಬೆಂಗಳೂರಿನ ಸ್ಟಾರ್ಟಪ್‌ ಕಂಪನಿಯ ಸಿಇಒ ಸೂಚನಾ ಸೇಠ್‌, ತನ್ನ ಮಗನ ಮುಖ, ತನ್ನ ಪತಿಯನ್ನೇ ಹೋಲುತ್ತಿರುವ ಕಾರಣ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಕೊಲೆಗೂ ಮುನ್ನ ಹಲವು ಬಾರಿ ಕುಟುಂಬ ಮತ್ತು ಸ್ನೇಹಿತರ ಜೊತೆ ಇಂಥದ್ದೊಂದು ವಿಷಯ ಹಂಚಿಕೊಂಡಿದ್ದರು ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ. ‘ನನ್ನ ಮಗನ ಮುಖ ಅವರ ತಂದೆಯನ್ನೇ ಹೋಲುತ್ತದೆ. ಆತನನ್ನು ನೋಡಿದಾಗಲೆಲ್ಲಾ ನನಗೆ ನನ್ನ ಪತಿಯ ಮುಖ ಮತ್ತು ನಮ್ಮಿಬ್ಬರ ನಡುವಿನ ಹಳಸಿದ ಸಂಬಂಧವೇ ನೆನಪಿಗೆ ಬರುತ್ತದೆ ಎಂದು ಹೇಳಿಕೊಂಡಿದ್ದರು. ಹೀಗಾಗಿ ಪುತ್ರನನ್ನು ಕೊಲೆ ಮಾಡಲು ಅದೇ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Tap to resize

Latest Videos

undefined

ಗೋವಾದಲ್ಲಿ ಮಗನನ್ನು ಕೊಂದು ಬೆಂಗಳೂರಿಗೆ ಪರಾರಿಯಾಗ್ತಿದ್ದ ತಾಯಿ: ಸುಚನಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದೀಗೆ ನೋಡಿ..

ಗೋವಾದಲ್ಲಿ ಮಗುವಿನ ಕೊಲೆ ಮಾಡಿ, ಶವವನ್ನು ಬ್ಯಾಗ್‌ನಲ್ಲಿಟ್ಟು ಬೆಂಗಳೂರಿಗೆ ಸಾಗಿಸುತ್ತಿದ್ದ ಸಮಯದಲ್ಲಿ ಸೂಚನಾಳನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿತ್ತು. ಪ್ರಸ್ತುತ ಸೂಚನಾಳನ್ನು ಗೋವಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

'ನಿಮ್ಮ ಬ್ಯಾಗ್‌ ಯಾಕಿಷ್ಟು ಭಾರವಿದೆ..' ಸುಚನಾ ಸೇಠ್‌ಗೆ ಕೇಳಿದ್ದ ಡ್ರೈವರ್‌ ರೇಜಾನ್ ಡಿಸೋಜಾ

click me!