ಕಲಬುರಗಿ: ವಿಡಿಯೋ ಗೇಮ್ ಆಡಬೇಡ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಬಾಲಕ

By Suvarna News  |  First Published Jul 3, 2020, 2:54 PM IST

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ 15 ವರ್ಷದ ಬಾಲಕ| ಕಲಬುರಗಿ ನದರದ ಬ್ರಹ್ಮಪುರ ಬಡಾವಣೆಯಲ್ಲಿ ನಡೆದ ಘಟನೆ| ಮೊಬೈಲ್‌ನಲ್ಲಿ ವಿಡಿಯೋ ಗೇಮ್ ಆಡದಂತೆ ಬೈದಿದ್ದ ಪೋಷಕರು|


ಕಲಬುರಗಿ(ಜು.03): ವಿಡಿಯೋ ಗೇಮ್ ಆಡಬೇಡ ಎಂದು ಪೋಷಕರು ಬೈದಿದ್ದಕ್ಕೆ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬ್ರಹ್ಮಪುರ ಬಡಾವಣೆಯಲ್ಲಿ ನಿನ್ನೆ(ಗುರುವಾರ) ನಡೆದಿದೆ. 
ರಾಹುಲ್ ಸೊಲ್ಲಾಪುರ(15) ಎಂಬಾತನೇ ಆತ್ಮಹತ್ಯೆಗೆ ಶರಣಾದ ದುರ್ದೈವಿ ಬಾಲಕನಾಗಿದ್ದಾನೆ. 

ಕಳೆದ ರಾತ್ರಿ ತಮ್ಮ ಮನೆಯಲ್ಲಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುರುವಾರ ಸಂಜೆ ಮೊಬೈಲ್‌ನಲ್ಲಿ ವಿಡಿಯೋ ಗೇಮ್ ಆಡದಂತೆ ಪೋಷಕರು ಬೈದಿದ್ದರು ಎಂದು ಹೇಳಲಾಗುತ್ತಿದೆ.

Tap to resize

Latest Videos

ಪೊಲೀಸರು ಬೈಕ್ ಸೀಜ್ ಮಾಡಿದ್ದಕ್ಕೆ ಬಾಲಕ ಆತ್ಮಹತ್ಯೆ

ಈ ಸಂಬಂಧ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


 

click me!