ಮಗುವಿನ ಜೀವಕ್ಕೆ ಸಂಚಕಾರ ತಂದ ಓರಗಿತ್ತಿಯ ಹೊಟ್ಟೆಕಿಚ್ಚು: ಜ್ಯೂಸ್ ಹೆಸರಲ್ಲಿ ಮಗುವಿಗೆ ಆಸಿಡ್ ಕೊಟ್ಟ ಚಿಕ್ಕಮ್ಮ

Published : Apr 17, 2026, 12:25 PM ISTUpdated : Apr 17, 2026, 12:29 PM IST
aunt mix acid in kids juice

ಸಾರಾಂಶ

ಹೈದರಾಬಾದ್‌ನಲ್ಲಿ, ಅತ್ತೆ-ಮಾವ ತನ್ನ ಮಗನಿಗಿಂತ ಓರಗಿತ್ತಿಯ ಮಗನಿಗೆ ಹೆಚ್ಚು ಪ್ರೀತಿ ತೋರುತ್ತಾರೆ ಎಂಬ ಅಸೂಯೆಯಿಂದ ಮಹಿಳೆಯೊಬ್ಬಳು ಆ ಬಾಲಕನಿಗೆ ಜ್ಯೂಸ್ ನೆಪದಲ್ಲಿ ಆಸಿಡ್ ಕುಡಿಸಿ ಕೊಲ್ಲಲು ಯತ್ನಿಸಿದ್ದಾಳೆ. ಮಗು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

ಮಗುವಿನ ಜೀವಕ್ಕೆ ಸಂಚಕಾರ ತಂದ ಓರಗಿತ್ತಿಯ ಹೊಟ್ಟೆಕಿಚ್ಚು:

ಹೈದರಾಬಾದ್: ಒರಗಿತ್ತಿಯರ ಜಗಳವೊಂದು ಬಾಲಕನ ಜೀವಕ್ಕೆ ಎರವಾದಂತಹ ಘಟನೆ ನಡೆದಿದೆ. ಸಾಮಾನ್ಯವಾಗಿ ಸೀರಿಯಲ್‌ಗಳಲ್ಲಿ ಇಂತಹ ದೃಶ್ಯಗಳನ್ನು ನೀವು ನೋಡಿರುತ್ತಿರಿ. ಅಣ್ಣತಮ್ಮಂದಿರ ಮಕ್ಕಳೇ ದಯಾದಿಗಳಾಗೋದು, ಅವರ ನಡುವೆ ಪೋಷಕರು ಅಥವಾ ಮನೆಯ ಹಿರಿಯರು ಬೇದಭಾವ ತೋರುವುದು. ಇದರಿಂದ ಮಕ್ಕಳ ಪೋಷಕರು ಸಿಟ್ಟಿಗೆದ್ದು, ಮನೆಯ ಹಿರಿಯರು ಯಾರ ಮೇಲೆ ಹೆಚ್ಚು ಪ್ರೀತಿಸುತ್ತಾರೋ ಆ ಮಕ್ಕಳ ಕತೆಯನ್ನೇ ಮುಗಿಸುವುದಕ್ಕೆ ನೋಡುವುದು ಇಂತಹ ಘಟನೆಗಳನ್ನು ನೀವು ಸೀರಿಯಲ್‌ಗಳಲ್ಲಿ ನೋಡಿರುತ್ತೀರಿ. ಆದರೆ ಇಲ್ಲೊಂದು ಕಡೆ ಇಂತಹದ್ದೇ ಘಟನೆಯೊಂದು ನಿಜವಾಗಿಯೂ ನಡೆದಿದ್ದು, ತನ್ನ ಓರಗಿತ್ತಿಯ ಮಗುವನ್ನು ಸಾಯಿಸುವುದಕ್ಕೆ ಯತ್ನಿಸಿದಂತಹ ಆಘಾತಕಾರಿ ಘಟನೆ ನೆರೆಯ ರಾಜ್ಯ ತೆಲಂಗಾಣದ ರಾಜಧಾಣಿ ಹೈದರಾಬಾದ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಮಗುವಿಗೆ ಜ್ಯೂಸ್ ಎಂದು ಆಸಿಡ್ ಕುಡಿಸಿದ ಮಹಿಳೆಯನ್ನು ಬಂಧಿಸಲಾಗಿದೆ.

ಜ್ಯೂಸ್ ಹೆಸರಲ್ಲಿ ಮಗುವಿಗೆ ಆಸಿಡ್ ಕೊಟ್ಟ ಚಿಕ್ಕಮ್ಮ

ಆರೋಪಿ ಹಾಗೂ ದೂರುದಾರ ಮಹಿಳೆ ಇಬ್ಬರು ಒಂದೇ ಮನೆಯಲ್ಲಿ ವಾಸಿಸುವ ಕೂಡು ಕುಟುಂಬದ ಅಣ್ಣ ತಮ್ಮಂದಿರ ಪತ್ನಿಯರಾಗಿದ್ದು, ಇಬ್ಬರಿಗೂ ಒಂದೊಂದು ಮಕ್ಕಳಿದ್ದರು. ಮನೆಯಲ್ಲಿದ್ದ ಹಿರಿಯರು ಎಂದರೆ ಅತ್ತೆ ಮಾವ ಈ ಮಕ್ಕಳಲ್ಲಿ ಬೇದಭಾವ ತೋರುತ್ತಿದ್ದರು. ಆರೋಪಿ ಮಹಿಳೆಯ ಮಗುವಿಗಿಂತ ದೂರುದಾರ ಮಹಿಳೆಯ ಮಗುವಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದರು. ಆತನನ್ನು ಹೆಚ್ಚು ಪ್ರೀತಿ ಮಾಡುತ್ತಿದ್ದರು. ಮಕ್ಕಳ ನಡುವೆ ಈ ರೀತಿ ಬೇದಭಾವ ತೋರುತ್ತಿರುವುದು, ಹಾಗೂ ತನ್ನ ಮಗುವಿನ ಬದಲು ಆ ಮಗುವಿಗೆ ಹೆಚ್ಚು ಪ್ರೀತಿ ನೀಡುವುದನ್ನು ನೋಡಿ ತಾಯಿಯ ಹೊಟ್ಟೆ ಉರಿಯಲು ಶುರುವಾಗಿತ್ತು. ಇದುವೇ ಅಸೂಯೆ ಹಾಗೂ ದ್ವೇಷವಾಗಿ ಬದಲಾಗಿದ್ದು, ಇದಕ್ಕೊಂದು ಮುಕ್ತಿ ಕಾಣಿಸಲು ತಾಯಿ ನಿರ್ಧರಿಸಿದ್ದಾಳೆ.

ಓರಗಿತ್ತಿಯ ಮಗನಿಗೆ ಜ್ಯೂಸ್ ನೆಪದಲ್ಲಿ ಆಸಿಡ್ ಕುಡಿಸಿದ ಮಹಿಳೆ

ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಪೊಲೀಸರಿಗೆ ನೀಡಿದ್ದು, ಈ ದೂರಿನಲ್ಲಿರುವ ಪ್ರಕಾರ ಆಕೆಯ ಓರಗಿತ್ತಿ ಏಪ್ರಿಲ್ 9ರಂದು ಮನೆಯ ಅಡುಗೆ ಮನೆಯಲ್ಲಿ ಮಗುವಿಗೆ ಹಣ್ಣಿನ ಜ್ಯೂಸ್‌ ನೀಡುವ ನೆಪದಲ್ಲಿ ಆಸಿಡ್ ಕುಡಿಸಿ ಆತನನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾಳೆ. ಈ ಜ್ಯೂಸ್ ಕುಡಿದರೆ ಚಾಕೋಲೇಟ್ ನೀಡುವುದಾಗಿ ಆಕೆ ಹೇಳಿದ್ದಾಳೆ. ಇತ್ತ ಆಕೆಯ ಮಾತು ನಂಬಿ ಸಂಚಿನ ಅರಿವಿಲ್ಲದೇ ಮಗು ಜ್ಯೂಸ್ ಕುಡಿದಿದ್ದು, ನಂತರ ಮಗು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿಲಾಗಿದೆ. ನಂತರ ಬಾಲಕ ಚೇತರಿಸಿಕೊಂಡಿದೆ ಎಂದು ಮೆಡಿಪಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತನ್ನ ಮಗುವಿಗೆ ಮನೆಯವರ ಪ್ರೀತಿ ಸಿಗಲಿಲ್ಲವೆಂದು ಓರಗಿತ್ತಿಯ ಮಗುವಿಗೆ ಆಸಿಡ್

ಪೊಲೀಸರ ತನಿಖೆ ವೇಳೆ ಮಗುವಿನ ಅಜ್ಜ ಅಜ್ಜಿ ಇಬ್ಬರು ಮಕ್ಕಳ ಮಕ್ಕಳಲ್ಲಿ ಒಂದು ಮಗುವಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದಿದೆ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಈ ಮಕ್ಕಳ ಅಜ್ಜ, ದೂರುದಾರರ ಮಗುವಿನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ಇದು ಆರೋಪಿ ಮಹಿಳೆಯನ್ನು ಮತ್ತಷ್ಟು ಉರಿದು ಬೀಳುವಂತೆ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: TCSನಲ್ಲಿ ಉದ್ಯೋಗಿಗಳ ಮತಾಂತರ ಕಿರುಕುಳ ಕೇಸ್‌: ಬಂಧನ ಭೀತಿಯಲ್ಲಿ HR ನಿದಾ ಖಾನ್; ಗರ್ಭಿಣಿ ಎಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೋಹಿತ್ ಶೆಟ್ಟಿ ಮನೆ ಮುಂದೆ ಹ್ಯಾಟ್ರಿಕ್ ದಾಳಿ ನಡೆಸಿದ್ದ ಶೂಟರ್ ಸೆರೆ; ಯಾರಿವನು, ಯಾಕೆ ದಾಳಿ ನಡೆಸಿದ್ದ ಗೊತ್ತಾ?
ದಾಬಸ್‍ಪೇಟೆ ಬಳಿ ನಾಪತ್ತೆಯಾಗಿದ್ದ ಯಮುನಾಳ ತಲೆಬುರುಡೆ ಪತ್ತೆ! ಸಿಸಿಟಿವಿಯಲ್ಲಿ ಸೆರೆಯಾಯ್ತು ಕೊನೆಯ ದೃಶ್ಯ !