Crime News ವಿಚಿತ್ರ ಘಟನೆ, ಮೊಬೈಲ್‌ಗಾಗಿ ಸಾವಿನ ಹಾದಿ ಹಿಡಿದ ಯುವಕ, ಯುವತಿ

By Suvarna News  |  First Published Feb 20, 2022, 1:26 PM IST

* ಮೊಬೈಲ್‌ಗಾಗಿ ಸಾವಿನ ಹಾದಿ ಹಿಡಿದ ಯುವಕ, ಯುವತಿ
* ದೆ ಮೊಬೈಲ್ ಕೊಡಿಸಲಿವೆಂದು ವಿಜಯನಗರ ಜಿಲ್ಲೆಯ ವಿದ್ಯಾರ್ಥಿ ಆತ್ಮಹತ್ಯೆ 
* ಮೊಬೈಲ್ ಕೊಡಿಸಲಿಲ್ಲವೆಂದು ಯುವತಿ ಆತ್ಮಹತ್ಯೆ


ವಿಜಯನಗರ, (ಫೆ.20): ಮಕ್ಕಳ ಕೈಗೆ ಮೊಬೈಲು ಕೊಡಬೇಡಿ. ಕೊಟ್ರೆ ಮಕ್ಕಳು ಹಾಳಾಗಿಹೋಗುತ್ತಾರೆ. ಆದ್ರೆ, ಮೊಬೈಲ್ (Mobile phone) ಕೊಡಸಲಿಲ್ಲ ಎನ್ನುವ ಕಾರಣಕ್ಕೆ ಓರ್ವ ಯುವಕ, ಯುವತಿ ಸಾವಿನ ಹಾದಿ ಹಿಡಿದಿದ್ದಾರೆ.

ಹೌದು....ತಂದೆ ಮೊಬೈಲ್ ಕೊಡಿಸಲಿವೆಂದು ವಿಜಯನಗರ ಜಿಲ್ಲೆಯ ವಿದ್ಯಾರ್ಥಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ರೆ, ಮತ್ತೊಂದು ಕಡೆ ಹುಟ್ಟುಹಬ್ಬಕ್ಕೆ ಮೊಬೈಲ್(Mobile)  ಕೊಡಿಸಲಿಲ್ಲವೆಂದು ಯುವತಿ ಆತ್ಮಹತ್ಯೆ ಶರಣಾಗಿರುವ ಪ್ರಕರಣ ಜೈಪುರದ ಸೋಡಾಲಾ ಪ್ರದೇಶದಲ್ಲಿ ನಡೆದಿದೆ. ಪ್ರತ್ಯೇಕವಾಗಿ ನಡೆದ ಈ ಘಟನೆ ವರದಿ ಈ ಕೆಳಗಿನಂತಿದೆ ನೋಡಿ.

Tap to resize

Latest Videos

undefined

ಮಾನಸಿಕ, ದೈಹಿಕ ಅನಾರೋಗ್ಯಕ್ಕೆ ಮೊಬೈಲ್ ಕುತ್ತು, ವ್ಯಕ್ತಿತ್ವಹೀನವಾಗಿಸೋ ವ್ಯಸನ

ಮೊಬೈಲ್‌ಗಾಗಿ ಆತ್ಮಹತ್ಯೆ ಮಾಡಿಕೊಂಡ  ವಿದ್ಯಾರ್ಥಿ
ಮೊಬೈಲ್‌ ಫೋನ್‌ ಕೊಡಿಸಲಿಲ್ಲವೆಂದು ವಿದ್ಯಾರ್ಥಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿರುವ ಭಯಾನಕ ಘಟನೆ ವಿಜಯನಗರದ ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪ್ರಥಮ ಪಿಯುಸಿ ಓದುತ್ತಿದ್ದ ನಾಗರಾಜ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮೊಬೈಲ್ ಫೋನ್‌ ಕೊಡಿಸಿಲ್ಲವೆಂದು ಫೆ.16 ರಂದು ಬಾಲಕ ಮನೆ ಬಿಟ್ಟು ಹೋಗಿದ್ದ. ನಂತರ ಆತನ ಶವ ಕೊಟ್ಟೂರು ಕೆರೆಯಲ್ಲಿ ಪತ್ತೆಯಾಗಿದೆ. ಆದರೆ ಮೃತ ದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು.

ಸನ್ನಿಧಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ನಾಗರಾಜ, ಓದಿಗಾಗಿ ಮೊಬೈಲ್ ಫೋನ್‌ ಕೊಡಿಸುವಂತೆ ಪಾಲಕರ ಬಳಿ ಹಟ ಹಿಡಿದಿದ್ದ. ಆದ್ರೆ ಕೆಲ ಕಾರಣಾಂತರಗಳಿಂದ ಪೋಷಕರು ಫೋನ್‌ ಕೊಡಿಸಿರಲಿಲ್ಲ. ಇದರಿಂದ ಬೇಸರಗೊಂಡದ್ದ ಬಾಲಕ ಮನೆಬಿಟ್ಟು ಹೋಗಿದ್ದ. ನಂತರ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಂಚಿಕೊಂಡಿದ್ದಾನೆ. ಬೆಂಕಿಯ ಉರಿ, ನೋವು ತಾಳಲಾರದೆ ಕೆರೆಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್ ಕೊಡಿಸಲಿಲ್ಲವೆಂದು ಯುವತಿ ಆತ್ಮಹತ್ಯೆ
ಜೈಪುರ: ತನ್ನ ಹುಟ್ಟುಹಬ್ಬಕ್ಕೆ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ 18 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೈಪುರದಲ್ಲಿ ನಡೆದಿದೆ.ಜೈಪುರದ ಸೋಡಾಲಾ ಪ್ರದೇಶದಲ್ಲಿ 18 ವರ್ಷದ ಯುವತಿಯೊಬ್ಬಳು PUBG ಆಡಲು ತನ್ನ ಹುಟ್ಟುಹಬ್ಬದಂದು ಹೊಸ ಮೊಬೈಲ್ ಫೋನ್ ಕೊಡಿಸಬೇಕೆಂದು ಕೇಳಿದ್ದಳು. 

ಆದರೆ, ಮನೆಯವರು ಆಕೆಗೆ ಮೊಬೈಲ್ ತಂದುಕೊಡದ ಕಾರಣದಿಂದ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪಿಯುಸಿ ಓದುತ್ತಿದ್ದ 18 ವರ್ಷದ ವಿದ್ಯಾರ್ಥಿನಿ ಫೆಬ್ರವರಿ 13ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು. ಈ ಸಂದರ್ಭದಲ್ಲಿ ತನಗೆ ಪಬ್​ಜಿ ಆಟವಾಡಲು ಮೊಬೈಲ್ ಫೋನ್ ಬೇಕೆಂದು ತನ್ನ ಪೋಷಕರನ್ನು ಒತ್ತಾಯಿಸಿದ್ದಳು. ಆದರೆ, ದ್ವಿತೀಯ ಪಿಯುಸಿ ತರಗತಿ ಪರೀಕ್ಷೆಗಳು ಮುಗಿದ ನಂತರ ಹೊಸ ಫೋನ್ ಖರೀದಿಸುವುದಾಗಿ ಆಕೆಯ ತಂದೆ ಆಕೆಗೆ ಭರವಸೆ ನೀಡಿದ್ದರು.

ಇದರಿಂದ ತೀವ್ರವಾಗಿ ಅಸಮಾಧಾನಗೊಂಡ ಆ ಯುವತಿ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಜೈಪುರ ಪೊಲೀಸ್ ಅಧೀಕ್ಷಕ ರಾಜ್ ಕುಮಾರ್ ಗುಪ್ತಾ ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.

ಅನುಮಾನಸ್ಪದವಾಗಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಶವ ಪತ್ತೆ
ಮೈಸೂರು : ಆತ ಚನ್ನಾಗಿ ಡಾಕ್ಟರ್ (Doctor) ಆಗಬೇಕು ಎಂದು ನೂರಾರು ಕನಸು ಕಟ್ಟಿಕೊಂಡಿದ್ದ. ಅದಕ್ಕಾಗಿ ಶ್ರಮ ಪಟ್ಟು SSLCಯಲ್ಲಿ ಉತ್ತಮ ಅಂಕ ಪಡೆದು ಹುಟ್ಟೂರು ಬಿಟ್ಟು ಸಾಕಷ್ಟು ಕನಸಿನೊಂದಿಗೆ ಮೈಸೂರಿಗೆ (Mysore) ಬಂದಿದ್ದ. ತಾನಾಯ್ತು ತನ್ನ ಪಾಡಾಯ್ತು ಅಂತಿದ್ದ ಆ ಹುಡುಗ ಇದ್ದಕ್ಕಿದ್ದಂತೆ ಅನುಮಾನಸ್ಪದವಾಗಿ ಹಾಸ್ಟೆಲ್ ನಲ್ಲಿ (Hostel) ಸಾವನ್ನಪಿದ್ದಾನೆ(Death).

ಒಂದು ಕಡೆ ಹೆತ್ತ ತಾಯಿಯ ಕಣ್ಣೀರು, ಮತ್ತೊಂದು ಕಡೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇದಕ್ಕೆ ಕಾರಣ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದ ವಿದ್ಯಾರ್ಥಿಯ ಅನುಮಾನಸ್ಪದ ಸಾವು. 18 ವರ್ಷದ ಅಕ್ಷಯ್ ಎಂಬ ವಿದ್ಯಾರ್ಥಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ದ್ವಿತೀಯ ಪಿಯುಸಿ ಓದುತ್ತಿದ್ದ ಅಕ್ಷಯ್ ಮೃತದೇಹ ಸರಸ್ವತಿಪುರಂನ ಬಿಸಿಎಂ ಹಾಸ್ಟೆಲ್‌ನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

click me!