ಅಪ್ರಾಪ್ರೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪಡಿ ಮುರುಘಾ ಶ್ರೀಗಳನ್ನು ಕೊನೆಗೂ ಪೊಲೀಸರು ಬಂಧಿಸಿ ಇದೀಗ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಆದರೆ ಶ್ರೀಗಳ ಬಂಧನಕ್ಕೂ ಮೊದಲೇ ತನಿಖೆಯಲ್ಲಿ ವೈಫಲ್ಯದ ಮಾತುಗಳು ಕೇಳಿಬರುತ್ತಿದೆ. ಇದೀಗ ಶ್ರೀಗಳ ಬಂಧನದ ಬಳಿಕ ಸ್ವತಃ ಪೊಲೀಸರೆ ಹೈಡ್ರಾಮ ನಡೆಸಿದ್ದಾರೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ.
ಚಿತ್ರದುರ್ಗ(ಸೆ.2): ಅಪ್ರಾಪ್ತೆ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ಚಿತ್ರದುರ್ಗದ ಮರುಘಾ ಮಠದ ಶಿವಮೂರ್ತಿ ಸ್ವಾಮೀಯನ್ನು ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಕೇಸ್ ದಾಖಲಾದ 6 ದಿನಗಳ ಬಳಿಕ ಶ್ರೀಗಳ ಬಂಧನವಾಗಿದೆ. ಶ್ರೀಗಳ ಬಂಧನಕ್ಕೆ ಆಗ್ರಹಿಸಿ, ಪೊಲೀಸ್ ತನಿಖೆ ಲೋಪವಾಗುತ್ತಿದೆ ಎಂದು ಈಗಾಗಲೇ ಪ್ರತಿಭಟನೆಗಳು ನಡೆದಿದೆ. ಆದರೆ ಎಲ್ಲಾ ದಾರಿಗಳು ಮುಚ್ಚಿ ಹೋದಾಗ ಪೊಲೀಸರು ಮರುಘಾ ಶ್ರೀಗಳನ್ನು ಬಂಧಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಬಂಧನದ ಬಳಿಕವೂ ಪೊಲೀಸರು ಶ್ರೀಗಳ ರಕ್ಷಣೆಗೆ ಕಸರತ್ತು ನಡೆಸಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಮುರುಘಾ ಶ್ರೀಗಳ ಬಂಧನ, ತಡ ರಾತ್ರಿ ನ್ಯಾಯಾಧೀಶರ ಎದರು ಹಾಜರು, ಆಸ್ಪತ್ರೆ ದಾಖಲು ಸೇರಿದಂತೆ ಕೆಲ ಘಟನೆಗಳು ಪೊಲೀಸರ ಹೈಡ್ರಾಮದ ಕತೆ ಹೇಳುತ್ತಿದೆ. ಪೊಲೀಸ್ ತನಿಖೆಯಲ್ಲಿ ಸಂಪೂರ್ಣ ವೈಪಲ್ಯವಾಗಿದೆ ಅನ್ನೋ ಆರೋಪ ಬಲವಾಗುತ್ತಿದೆ.
ಮುರುಘಾ ಶ್ರೀಗಳ(murugha mutt) ಬಂಧನದ ಬಳಿಕ ಶ್ರೀಗಳ ರಕ್ಷಣೆಗೆ ಪೊಲೀಸರು(Police Investigation) ಟೊಂಕ ಕಟ್ಟಿ ನಿಂತಿದ್ದರು ಅನ್ನೋದನ್ನು ಪುಷ್ಠೀಕರಿಸಲು ಕೆಲ ಕಾರಣಗಳಿವೆ. ಈ ಕುರಿತು ಎದ್ದಿರುವ ಹಲವು ಪ್ರಶ್ನೆಗಳೇ ಈ ಅನುಮಾನಗಳನ್ನು ಹೆಚ್ಚಿಸುತ್ತಿದೆ. ಮುರುಘಾ ಶ್ರೀ ಬಂಧಿಸಿದ(Seer Shivamurthy arrest) ನಂತರ ನ್ಯಾಯಾಧೀಶರ(Court) ಎದರು ಹಾಜರು ಪಡಿಸಲು 24 ಗಂಟೆ ಅವಕಾಶವಿದ್ದರೂ ತಡ ರಾತ್ರಿ 2 ಗಂಟೆ ರಾತ್ರಿಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದೇಕೆ..? ಅನ್ನೋ ಪಶ್ನೆ ಇದೀಗ ಕೇಳಿಬರುತ್ತಿದೆ. ಇಷ್ಟೇ ಅಲ್ಲ ತಡ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಪೊಲೀಸರ ವಶಕ್ಕೆ ಕೇಳಲಿಲ್ಲ ಯಾಕೆ..? ಈ ಪ್ರಶ್ನೆಗೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ.
ಮರುಘಾ ಶ್ರೀಗಳಿಗೆ ಮತ್ತೊಂದು ಶಾಕ್, ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್!
ನ್ಯಾಯಾಧೀಶರ ಮುಂದೆ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೇಳಿಕೊಂಡಿದ್ಯಾಕೆ..? ಇದು ಆರೋಪಿ ಮುರುಘಾ ಶ್ರೀಗಳನ್ನು ಜೈಲಿಗೆ ಕಳುಹಿಸಿ ಬಳಿಕ ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆ ಸೇರಿಸುವ ಪ್ಲಾನ್ ಆಗಿತ್ತು ಎಂಬ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ. ಇನ್ನು ಆಸ್ಪತ್ರೆ ದಾಖಲೆ(Hospital) ವೇಳೆ ನ್ಯಾಯಾಧೀಶರ ಅನುಮತಿ ಕೇಳದೇ ತರಾತುರಿಯಲ್ಲಿಪೊಲೀಸರು ನಡೆದುಕೊಂಡಿದ್ದು ಯಾಕೆ? ಆರೋಪಿ ಆಸ್ಪತ್ರೆಗೆ ದಾಖಲಾದ ನಂತರವಾದರೂ ಈ ವಿಷಯ ಕೋರ್ಟ್ ಗಮನಕ್ಕೆ ತರಲಿಲ್ಲ ಯಾಕೆ..?ರಾತ್ರಿ ನ್ಯಾಯಾಧೀಶರ ಮುಂದೆ ಆರೋಪಿ(Accuse) ವಶಕ್ಕೆ ಕೇಳದ ಪೊಲೀಸರು ಬೆಳಗ್ಗೆ ಪೊಲೀಸ್ ವಶಕ್ಕೆ(Murugha Seet Police Custody) ಕೇಳಿದ್ದೇಕೆ..? ಆರೋಪಿಯನ್ನು ಕೋರ್ಟ್ ಅನುಮತಿಯಿಲ್ಲದೇ ಬೆಂಗಳೂರಿಗೆ ಶಿಫ್ಟ್ ಮಾಡುವ ಪ್ರಯತ್ನಗಳು ನಡೆದಿದ್ದೇಕೆ..? ಅನ್ನೋ ಪ್ರಶ್ನೆಗಳು ಇದೀಗ ಹಾಗೇ ಉಳಿದುಕೊಂಡಿದೆ.
ಆರೋಪಿ ಪರಿಸ್ಥಿತಿ ಗಂಭೀರವಾಗಿದೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ಜಿಲ್ಲಾಸ್ಪತ್ರೆ ವೈದ್ಯರು ಹೇಳಿರುವುದು ಯಾಕೆ? ಈ ಹೇಳಿಕೆ ಹಿಂದೆ ಪೊಲೀಸರ ಕೈವಾಡವಿದೆಯಾ? ಕಾರಣ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ವೈದ್ಯರ ಹೇಳಿಕೆಯೂ ಅನುಮಾನಗಳನ್ನು ಹೆಚ್ಚಿಸಿದೆ. ಎದೆನೋವಿನ ಕಾರಣ ನೀಡಿ ವೀಲ್ಚೇರ್ನಲ್ಲಿ ಆಸ್ಪತ್ರೆಗೆ ಬಂದ ಮುರುಘಾ ಶ್ರೀ ಮಧ್ಯಾಹ್ನ ಕೋರ್ಟ್ ಮೊದಲ ಮಹಡಿಗೆ ಮೆಟ್ಟಿಲು ಏರಿ ಹೋಗಲು ಸಾಧ್ಯವಾಗಿದ್ದೇಗೆ..? ಕೋರ್ಟ್ ವಿಚಾರಣೆ ಮುಗಿಸಿ ಮೆಡಿಕಲ್ ಟೆಸ್ಟ್ಗೆ ಆಸ್ಪತ್ರೆಗೆ ಕರೆತಂದಾಗ ಶ್ರೀಗಳು ನಡೆದುಕೊಂಡು ಹೋಗಲು ಸಾಧ್ಯವಾಗಿದ್ದೇಗೆ..?ವೀಲ್ ಚೇರ್ನಲ್ಲಿ ಆಸ್ಪತ್ರೆಗೆ ಬಂದು ಐಸಿಯುಗೆ ದಾಖಲಾಗಿದ್ದವರು ಅಷ್ಟು ಬೇಗ ಚೆತರಿಸಿಕೊಂಡರಾ..? ಕೋರ್ಟ್ಗೆ ಪೊಲೀಸ್ ವ್ಯಾನ್ನಲ್ಲಿ ಕರೆದೊಯ್ದಿದ್ದ ಪೊಲೀಸರು, ಮೆಡಿಕಲ್ ಟೆಸ್ಟ್ ಮುಗಿದ ಮೇಲೆ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ದಿದ್ದೇಕೆ..? ಎಂಬ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ. ಹೀಗಾಗಿಯೇ ಪೊಲೀಸರ ತನಿಖೆಯಲ್ಲಿ ವೈಫಲ್ಯಗಳು ಎದ್ದು ಕಾಣುತ್ತಿದೆ ಅನ್ನೋ ಆರೋಪ ಹೆಚ್ಚಾಗುತ್ತಿದೆ.
Murugha Mutt Shivacharya Case: ಮುರುಘಾ ಶ್ರೀಗಳ ಜಾಮೀನು ಅರ್ಜಿ ವಜಾ