ವಿಜಯಪುರ: ಸೂಸೈಡ್‌ ಸ್ಪಾಟ್‌ ಆಗ್ತಿದೆಯಾ ವಿಶ್ವ ವಿಖ್ಯಾತ ಗೋಳಗುಮ್ಮಟ..!

By Girish Goudar  |  First Published Dec 21, 2022, 10:12 PM IST

ತಿಂಗಳ ಅಂತರದಲ್ಲಿ ಎರಡು ಆತ್ಮಹತ್ಯೆಗಳು ಗೋಳಗುಮ್ಮಟದಲ್ಲೇ ನಡೆದಿದ್ದು ಜನರು ಬೆಚ್ಚಿಬಿದ್ದಿದ್ದಾರೆ. ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದ ಯುವತಿಯೊಬ್ಬಳು ಗೋಳಗುಮ್ಮಟ ಒಳಗಿನ ಆವರಣದಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 


ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌

ವಿಜಯಪುರ(ಡಿ.21):  ವಿಜಯಪುರದ ವಿಶ್ವ ವಿಖ್ಯಾತ ಗೋಳಗುಮ್ಮಟ ಸೂಸೈಡ್‌ ಸ್ಪಾಟ್‌ ಆಗ್ತಿದೆಯಾ ಎನ್ನುವ ಸಂಶಯಗಳು ಕಾಡ್ತಿವೆ. ತಿಂಗಳ ಅಂತರದಲ್ಲಿ ಎರಡು ಆತ್ಮಹತ್ಯೆಗಳು ಗೋಳಗುಮ್ಮಟದಲ್ಲೇ ನಡೆದಿದ್ದು ಜನರು ಬೆಚ್ಚಿಬಿದ್ದಿದ್ದಾರೆ. ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದ ಯುವತಿಯೊಬ್ಬಳು ಗೋಳಗುಮ್ಮಟ ಒಳಗಿನ ಆವರಣದಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಜನರಲ್ಲಿ ಭಯ ಆವರಿಸಿದೆ. ಪ್ರವಾಸಿಗರಲ್ಲೂ ಆತಂಕ ಸೃಷ್ಟಿಸಿದೆ. 

Tap to resize

Latest Videos

ಗೋಳಗುಮ್ಮಟದ ಒಳಗೆ ಯುವತಿ ಆತ್ಮಹತ್ಯೆ..!

ಇಂದು(ಬುಧವಾರ) ಸಂಜೆ 6 ಗಂಟೆ ಸುಮಾರಿಗೆ ಗೋಳಗುಮ್ಮಟ ಮೇಲಿಂದ ಹಾರಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಜಯಪುರ ನಗರದ ರಾಣಿಬಗಿಚ್‌ ನಿವಾಸಿ 20 ವರ್ಷದ ಸೌಂದರ್ಯ ಬೆಂಗಳೂರು ಆತ್ಮಹತ್ಯೆಗೆ ಶರಣಾದ ಯುವತಿ. ಗೋಳಗುಮ್ಮಟ ವೀಕ್ಷಣೆ ನೆಪದಲ್ಲಿ ಬಂದ ಯುವತಿ ಗೋಳಗುಮ್ಮಟದ ವಿಸ್ಪರ್‌ ಗ್ಯಾಲರಿಗೆ ತೆರಳಿದ್ದಾಳೆ. ಅಲ್ಲಿ ಪ್ರವಾಸಿಗರಂತೆಯೆ ಅಡ್ಡಾಡಿ ಮೇಲಿಂದ ಕೆಳಗೆ ಹಾರಿದ್ದಾಳೆ ಎನ್ನಲಾಗಿದೆ. ವಿಸ್ಪರ್‌ ಗ್ಯಾಲರಿ ಒಳಗೆ ಆತ್ಮಹತ್ಯೆಗೆ ಶರಣಾಗಿದ್ದು ಗೋಳಗುಮ್ಮಟ ಒಳಗಿರುವ ಆದಿಲ್‌ ಶಾಹಿ ಗೋರಿಯ ಬಳಿಗೆ ಸೌಂದರ್ಯಾ ಬಿದ್ದಿದ್ದಾಳೆ. ಕೆಳಗೆ ಬೀಳ್ತಿದ್ದಂತೆ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗೋಳಗುಮ್ಮಟ ಸಿಪಿಐ ಮಠಪತಿ ಹಾಗೂ ಪಿಎಸ್‌ಐ ಸೀತಾರಾಮ್‌ ಲಮಾಣಿ ಪರಿಶೀಲನೆ ನಡೆಸಿದ್ದಾರೆ.

VIJAYAPURA CRIME: ಬಲವಂತದ ಮದುವೆ ಒಲ್ಲೆನೆಂದು ಗೋಳಗುಮ್ಮಟದಿಂದ ಹಾರಿ ಪ್ರಾಣಬಿಟ್ಟ ಯುವತಿ

ಸೂಸೈಡ್‌ ಕಂಡು ಬೆಚ್ಚಿಬಿದ್ದ ಪ್ರವಾಸಿಗರು..!

ಸೌಂದರ್ಯ ಗೋಳಗುಮ್ಮಟ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಾಗ ಪ್ರವಾಸಿಗರು ವಿಸ್ಪರ್‌ ಗ್ಯಾಲರಿಯಲ್ಲೆ ಇದ್ದರು. ಇನ್ನು ಸೌಂದರ್ಯ ಇದ್ದ ಕೆಳ ಆವರಣದಲ್ಲು ಬಹಳಷ್ಟು ಪ್ರವಾಸಿಗರಿದ್ದರು. ಆತ್ಮಹತ್ಯೆ ಕಂಡು ಎಲ್ಲರು ಬೆಚ್ಚಿಬಿದ್ದಿದ್ದಾರೆ. ರಕ್ತ ಮಡುವಿದ್ದ ಸೌಂದರ್ಯ ಬಿದ್ದಿದ್ದರೆ, ಗೋಳಗುಮ್ಮಟ ಸೌಂದರ್ಯ ಸವಿಯಲು ಬಂದವರು ಶಾಕ್‌ ಆಗಿದ್ದಾರೆ. ಘಟನೆಯಿಂದ ಹೆದರಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ..

ಸೂಸೈಡ್‌ ಸ್ಪಾಟ್‌ ಆಯ್ತಾ ಗೋಳಗುಮ್ಮಟ..!

ಗೋಳಗುಮ್ಮಟ ಸೂಸೈಡ್‌ ಸ್ಪಾಟ್‌ ಆಯ್ತಾ ಎನ್ನುವ ಅನುಮಾನಗಳು ಉಂಟಾಗಿವೆ. ಯಾಕಂದ್ರೆ ತಿಂಗಳ ಅಂತರದಲ್ಲೆ ಇದು ಎರಡನೇ ಸೂಸೈಡ್‌. ಕಳೆದ ತಿಂಗಳ 16 ರಂದು ವೃದ್ಧನೊಬ್ಬ ಇದೆ ಗೋಳಗುಮ್ಮಟ ಮೇಲೆ ಹತ್ತಿ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಇದು ಎರಡನೇ ಆತ್ಮಹತ್ಯೆ. ಆತ್ಮಹತ್ಯೆಗೆ ಗೋಳಗುಮ್ಮಟವನ್ನೇ ಆಯ್ಕೆ ಮಾಡಿಕೊಳ್ತಿದ್ದಾರೆ ಹೇಗೆ ಎನ್ನುವ ಅನುಮಾನಗಳು ಮೂಡಲಾರಂಭಿಸಿವೆ.

ವಿಶ್ವದ ಎರಡನೇ ದೊಡ್ಡ ಗುಮ್ಮಟ..!

ವಿಶ್ವ ವಿಖ್ಯಾತ ಗೋಳಗುಮ್ಮಟ ವಿಶ್ವದಲ್ಲೆ 2ನೇ ಅತಿ ದೊಡ್ಡ ಗುಮ್ಮಟ ಎನ್ನುವ ಪ್ರಸಿದ್ಧಿ ಪಡೆದಿದೆ. ಹೊರಗಡೆಯಿಂದ ಇದರ ಎತ್ತರ 198 ಅಡಿಗಳಷ್ಟಿದೆ. ಒಳಗಡೆಯಿಂದ 175 ಅಡಿಗಳಷ್ಟಿದೆ. ಮೇಲಿಂದ ಜಿಗಿದರೆ ಬದುಕುಳಿಯುವ ಯಾವುದೆ ಅವಕಾಶಗಳೆ ಇಲ್ಲ. ಹೀಗಾಗಿ ಕಳೆದ ತಿಂಗಳು ಸಲೀಂ ಎಂಬಾತ ಇದೆ ಸ್ಥಳದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕರಿಗೆ ನೌಕರಿ ಕೊಡಿಸುವುದಾಗಿ ಹೇಳಿ ಹಣ ಸುಲಿಗೆ ಮಾಡಿದ್ದವ ಇಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ..

ಪ್ರವಾಸಿಗರಂತೆ ಬಂದು ಆತ್ಮಹತ್ಯೆ..!

ಎರಡು ಆತ್ಮಹತ್ಯೆಗಳಲ್ಲು ಪ್ರವಾಸಿಗರಂತೆಯೇ ಆಗಮಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಳಗುಮ್ಮಟ ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಪ್ರವಾಸಿಗರಿಗೆ ಓಪನ್‌ ಇರುತ್ತೆ. ಮುಂಜಾನೆ 6 ಗಂಟೆ ಹಾಗೂ ಸಂಜೆ 6 ಗಂಟೆಗೆ ಪ್ರವಾಸಿಗರ ಸಂಖ್ಯೆ ಕಡಿಮೆ ಇರುತ್ತೆ. ವೃದ್ಧ ಬೆಳಿಗ್ಗೆ 6 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡದ್ರೆ. ಯುವತಿ ಸಂಜೆ 6 ಗಂಟೆ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ..

7ನೇ ಮಹಡಿಯಿಂದ ಜಿಗಿದು ಎಲ್‌ಎಲ್‌ಬಿ ವಿದ್ಯಾರ್ಥಿನಿ ಆತ್ಮಹತ್ಯೆ!

ಆತ್ಮಹತ್ಯೆ ಮಾಡಿಕೊಂಡವರು ಪ್ರವಾಸಿಗರಲ್ಲ..!

ಇನ್ನು ಈ ಎರಡು ಆತ್ಮಹತ್ಯೆ ಪ್ರಕರಣಗಳಲ್ಲು ಆತ್ಮಹತ್ಯೆ ಮಾಡಿಕೊಂಡವರು ಪ್ರವಾಸಿಗರಲ್ಲ. ವಿಜಯಪುರ ನಗರ ನಿವಾಸಿಗಳೆ ಆಗಿದ್ದಾರೆ. ಟಿಕೇಟ್‌ ಪಡೆದು ಗೋಳಗುಮ್ಮಟ ಪ್ರವೇಶಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದವರು ಗೋಳಗುಮ್ಮಟವನ್ನ ಆಯ್ಕೆ ಮಾಡಿಕೊಳ್ತಿದ್ದಾರಾ ಎನ್ನುವ ಅನುಮಾನಗಳು ಮೂಡ್ತಿವೆ.

ಸೆಕ್ಯೂರಿಟಿಗಳು ಅಲರ್ಟ್‌ ಆಗಬೇಕು..!

ಪ್ರವಾಸಿಗರ ಸೋಗಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಬರುವವರು ಇಂಥವರೆ ಅನ್ನೋದು ಗೊತ್ತಾಗಲ್ಲ. ಇದು ಸಡನ್‌ ಆಗಿ ನಡೆದು ಬಿಡುವಂತದ್ದು, ಆದ್ರೆ ಸೂಸೈಡ್‌ ಮಾಡಿಕೊಳ್ತಿರೋ ಮೇಲ್ಬಾಗದಲ್ಲಿ ಸೆಕ್ಯೂಟಿಗಳು ಅಲರ್ಟ್‌ ಆಗಿ ಇರಬೇಕಿದೆ. ಜನರ ಹಾವಭಾವಗಳ ಮೇಲೆ ನಿಗಾ ಇಡಬೇಕಿದೆ.
 

click me!