Crime News: ಅಂಗಡಿಯವನಿಗೆ ಅಂಕಲ್ ಅಂದಿದ್ದೆ ತಪ್ಪಾಯ್ತು, ಯುವತಿ ಆಸ್ಪತ್ರೆಗೆ!

By Suvarna News  |  First Published Dec 25, 2021, 1:27 AM IST

* ಅಂಕಲ್ ಎಂದು ಕರೆದಿದ್ದಕ್ಕೆ ಮಹಾಕೋಪ
* ಸಾಯುವಂತೆ ಯುವತಿ ಥಳಿಸಿದ ಅಂಗಡಿ ಮಾಲೀಕ
* ಯುವತಿಗೆ ಆಕ್ಸಿಜನ್ ಸಪೋರ್ಟ್ ನೀಡಿಲಾಗಿದೆ.


ಡೆಹ್ರಾಡೂನ್ (ಡಿ. 25)  ಯುವತಿ ಮೇಲೆ ಅಂಗಡಿ ಮಾಲೀಕ ಮಾರಣಾಂತಿಕ ಹಲ್ಲೆ(Attack) ಮಾಡಿದ್ದಾನೆ. ಹಲ್ಲೆಗೆ ಕಾರಣ ಮಾತ್ರ ವಿಚಿತ್ರವಾಗಿದೆ. ಉತ್ತರಾಖಂಡ್‌ನ (Uttarakhand) ಉಧಮ್ ಸಿಂಗ್ ನಗರ ಜಿಲ್ಲೆಯ ಸಿತಾರ್‌ಗಂಜ್ ಪಟ್ಟಣದಿಂದ ಘಟನೆ ವರದಿಯಾಗಿದೆ. 35 ವರ್ಷದ ಅಂಗಡಿಯ 18 ವರ್ಷದ  ಯುವತಿ ಮೇಲೆ ಹಲ್ಲೆ ಮಾಡಿದ್ದು  ಯುವತಿಯ ತಲೆಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅಂಗಡಿ ಮಾಡಲೀಕನನ್ನು ಯುವತಿ 'ಅಂಕಲ್' (Uncle)ಎಂದು ಕರೆದಿದ್ದಕ್ಕೆ ಎರಗಿದ್ದಾನೆ.  ಗಾಯಗೊಂಡ ಯುವತಿಗೆ ಆಕ್ಸಿಜನ್ ಸಪೋರ್ಟ್ ನಲ್ಲಿ ಚಿಕಿತ್ಸೆ  ನೀಡಲಾಗುತ್ತಿದೆ. , ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 354 (ಮಹಿಳೆಯೊಬ್ಬಳು ತನ್ನ ನಮ್ರತೆಗೆ ಆಕ್ರೋಶ ವ್ಯಕ್ತಪಡಿಸಲು ಹಲ್ಲೆ) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಅಂಗಡಿಯವನ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.

Tap to resize

Latest Videos

ಡಿಸೆಂಬರ್ 19 ರಂದು ಹದಿಹರೆಯದ ಹುಡುಗಿ ಬ್ಯಾಡ್ಮಿಂಟನ್ ರಾಕೆಟ್ ಖರೀದಿಸಿದ್ದಳು. ಮಂಗಳವಾರ ಅದನ್ನು ಬದಲಾಯಿಸಿಕೊಳ್ಳಲು ಹೋಗಿದ್ದಳು. ರಾಕೆಟ್ ನ ಕೆಲವು ತಂತಿಗಳು ಮುರಿದು ಹೋಗಿದ್ದವು. 

ಈ ವೇಳೆ ಅಂಗಡಿ ಮಾಲೀಕ  ಮೋಹಿತ್ ಕುಮಾರ್ ನನ್ನು ಅಂಕಲ್ ಎಂದು ಕರೆದಿದ್ದಾಳೆ. ಏಕಾಏಕಿ ಸಿಟ್ಟಿಗೆದ್ದ ಮೋಹಿತ್ ಹಲ್ಲೆ ಮಾಡಿದ್ದಾನೆ. ಪೊಲೀಸರಿಗೆ ಘಟನೆಯ ಮಾಹಿತಿ ಹೋಗಿದ್ದು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Delhi Crime : ಓಡಿಹೋಗಿ ಮದುವೆಯಾಗಿದ್ದಕ್ಕೆ ಅಳಿಯನ ಗುಪ್ತಾಂಗವನ್ನೇ ಕತ್ತರಿಸಿದ್ರು!

ಉತ್ತರ ಪ್ರದೇಶದ ಪ್ರಕರಣ: ಅಂಗಡಿಯಿಂದ ಹಣ ಕದ್ದಿದ್ದಾನೆ ಎಂದು ಆರೋಪಿಸಿ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಬಾಲಕನ ಮೇಲೆ ಹಲ್ಲೆ ಮಾಡಿದ್ದ ಘಟನೆ ವರದಿಯಾಗಿತ್ತು.  16 ವರ್ಷದ ಹುಡುಗನನ್ನು ಹಗ್ಗದಿಂದ ಕಟ್ಟಿ ಬೆಲ್ಟ್‌ನಿಂದ ಥಳಿಸಲಾಗಿತ್ತು.

ಬಾಲಕನನ್ನು ಥಳಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ  ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು.  ಸಾರ್ವಜನಿಕರು ಹಲ್ಲೆ ತಡೆಯಲು ಮುಂದಾಗಿದ್ದರು.

ಬಿಹಾರದ ಪ್ರಕರಣ:  ಬಿಹಾರದ (Bihar)ಮುಜಾಫರ್‌ಪುರ ಜಿಲ್ಲೆಯಲ್ಲಿ 32 ವರ್ಷದ ವ್ಯಕ್ತಿಯೊಬ್ಬ ತನ್ನ(sister-in-law) ಅತ್ತಿಗೆಯನ್ನು (Murder) ಕೊಲೆಗೈದಿದ್ದಾನೆ.  ಆಕೆ ಸಾಯುವುದಕ್ಕೂ ಮುನ್ನ ಮತ್ತು ಸತ್ತ ನಂತರ ಆಕೆ ಮೇಲೆ ಅತ್ಯಾಚಾರ (Rape) ಎಸಗಿದ್ದಾನೆ.

ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ ಎಂದು ಮುಜಾಫರ್‌ಪುರ (ಪೂರ್ವ) ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಪಾಂಡೆ ತಿಳಿಸಿದ್ದಾರೆ. ಆರೋಪಿ ಅತ್ಯಾಚಾರ ಎಸಗಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. 

ಅತ್ಯಾಚಾರ ಎಸಗಿದ ನಂತರ ಸಂತ್ರಸ್ತೆಯನ್ನು (Victim) ಗ್ರೈಂಡರ್ ಗೆ ಬಳಸುತ್ತಿದ್ದ ಕಲ್ಲಿನಿಂದ  ಜಜ್ಜಿ ಕೊಂದಿದ್ದಾನೆ. ಆಕೆ ಸತ್ತ ಮೇಲೆಯೂ ತನ್ನ ಕಾಮ ತೃಷೆ ತೀರಿಸಿಕೊಂಡಿದ್ದ. 

ಕ್ರೂರಿಯ ದಾಳಿ ಕಾರಣಕ್ಕೆ ಸಂತ್ರಸ್ತೆಯ ಮುಖ ಮತ್ತು ತಲೆ ಜಜ್ಜಿಹೋಗಿದ್ದು ಆಕೆಯ ದಂತಪಂಕ್ತಿ ಛಿದ್ರಛಿದ್ರವಾಗಿದೆ. ಮನೆಯಲ್ಲಿನ ಜಾನುವಾರುಗಳನ್ನು ನೋಡಿಕೊಂಡು ಸಂತ್ರಸ್ತೆ ಒಂಟಿಯಾಗಿ ಜೀವನ ನಡೆಸುತ್ತಿದ್ದಳು. 

ಆಕೆಯ ಸಹೋದರಿ ತನ್ನ ಮಗುವಿನ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮಹಿಳೆಯ ಕುಟುಂಬವು ದರ್ಭಾಂಗಾಕ್ಕೆ ತೆರಳಿತ್ತು.  ಕೃತ್ಯ ಎಸಗಿರುವುದನ್ನು ಪಾಪಿ ಒಪ್ಪಿಕೊಂಡಿದ್ದಾನೆ. .ತನಗೆ ಅವಮಾನ ಮಾಡಿದ್ದಕ್ಕಾಗಿ  ಸೇಡಿ ತೀರಿಸಿಕೊಳ್ಳಲು ಇಂಥ ಕೃತ್ಯ ಮಾಡಿದೆ ಎಂದು ಹೇಳಿದ್ದಾನೆ. ಪ್ರಕರಣವೊಂದರಲ್ಲಿ ಸಂತ್ರಸ್ತೆ ಕುಟುಂಬಸ್ಥರ ಎದುರಿನಲ್ಲಿ ಈತನ ಕೆನ್ನೆಗೆ ಬಾರಿಸಿದ್ದರು.  ಆರೋಪಿ ಮತ್ತು ಆತನ ಹೆಂಡತಿಯ ನಡುವೆ ವಿವಾದ ಎದ್ದು ಪಂಚಾಯಿತಿ ಮೆಟ್ಟಿಲು ಏರಿತ್ತು.

ಕೆಲಸ ಕೊಡಿಸುತ್ತೇನೆ ಎಂದು ಹೋಟೆಲ್ ಗೆ ಕರೆದ:   ಗುಜರಾತ್‌ನ (Gujarat) ಸೂರತ್‌ನಲ್ಲಿ 35 ವರ್ಷದ ವಿವಾಹಿತ ಮಹಿಳೆಯ ಮೇಲೆ 23 ವರ್ಷದ ಯುವಕನೊಬ್ಬ ಆಕೆಗೆ ಕೆಲಸ ಕೊಡಿಸುವ ನೆಪದಲ್ಲಿ ಹಲವು ಬಾರಿ (Rape) ಅತ್ಯಾಚಾರವೆಸಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.  ಮಹಿಳೆ ನೀಡಿದ ದೂರಿನ ಮೇರೆಗೆ ಸಾರ್ಥನಾ ಪೊಲೀಸರು ಆರೋಪಿ ನಿಲೇಶ್ ಲಾಥಿಯಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

click me!