ಐಪಿಎಲ್ ಬೆಟ್ಟಿಂಗ್ ಸಾಲಕ್ಕೆ ತುತ್ತಾಗಿ ರಾಯಚೂರಿನ ಯುವಕ ಆತ್ಮಹತ್ಯೆ

By Ravi Janekal  |  First Published May 19, 2024, 10:31 AM IST

ಐಪಿಎಲ್‌ ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡಿದ್ದ ಯುವಕ ಸಾಲಕ್ಕೆ ತುತ್ತಾಗಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದಿದೆ.


ರಾಯಚೂರು (ಮೇ.19):ಮೊಬೈಲ್ ಆ್ಯಪ್‌ ಮೂಲಕ ಅಕ್ರಮವಾಗಿ ಐಪಿಎಲ್ ಬೆಟ್ಟಿಂಗ್ ದಂಧೆ ರಾಜ್ಯಾದ್ಯಂತ ಜೋರಾಗಿ ನಡೆಯುತ್ತಿದೆ. ಪೊಲೀಸರು ಎಷ್ಟೇ ಜಾಗ್ರತೆವಹಿಸಿದರೂ ಬೆಟ್ಟಿಂಗ್ ದಂಧೆ ತಡೆಯಾಲಾಗುತ್ತಿಲ್ಲ. ಹಣ ಗಳಿಸುವ ದುರಾಸೆಯಿಂದ ಐಪಿಎಲ್‌ ಬೆಟ್ಟಿಂಗ್‌ನಲ್ಲಿ ತೊಡಗಿಕೊಳ್ಳುವ ಯುವಕರು ಹಣವೆಲ್ಲ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಮೈ ತುಂಬಾ ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯುವಕನೊಬ್ಬ ಐಪಿಎಲ್‌ ಬೆಟ್ಟಿಂಗ್‌ನಿಂದ ಸಾಲಕ್ಕೆ ತುತ್ತಾಗಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Latest Videos

undefined

ರಾಜ್ಯ ಚುನಾವಣೆ ಮುಗಿದ ಬೆನ್ನಲ್ಲೇ ಬೆಟ್ಟಿಂಗ್‌ ಜೋರು, ಟಗರು, ಹೊಲ, ಮನೆ ಪಣಕ್ಕಿಟ್ಟ ಅಭಿಮಾನಿಗಳು!

ಮಸ್ಕಿ ತಾಲೂಕಿನ ಉದ್ಬಾಳ ಗ್ರಾಮದ ಮುದಿಬಸವ(29) ಆತ್ಮಹತ್ಯೆ ಮಾಡಿಕೊಂಡ ಯುವಕ. ಐಪಿಎಲ್‌ ಶುರುವಾದ ಬಳಿಕ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಯುವಕ. ಬೆಟ್ಟಿಂಗ್ ನಲ್ಲಿ ಸಾಕಷ್ಟು ಹಣ ಕಳೆದುಕೊಂಡರು ಅದರಿಂದ ಹೊರಬರಲಾಗದೆ ಸಾಲ ಮಾಡಿ ಬೆಟ್ಟಿಂಗ್ ಮುಂದುವರಿಸಿದ್ದ. ಸಾಲ ಹೆಚ್ಚಾಗಿ ಮಾನಸಿಕೆ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿರುವ ಯುವಕ. ಸದ್ಯ ಘಟನೆ ಸಂಬಂಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಜಿಲ್ಲೆಯಾದ್ಯಂತ ಐಪಿಎಲ್‌ ಬೆಟ್ಟಿಂಗ್ ಸಾಂಕ್ರಾಮಿಕವಾಗಿ ಹಬ್ಬಿದೆ. ಮೊಬೈಲ್ ಆಪ್ ಮೂಲಕ ಯಾವುದೇ ಸ್ಥಳದಲ್ಲಿ ಕುಳಿತು ಬೆಟ್ಟಿಂಗ್ ತೊಡಗಿಕೊಳ್ಳಬಹುದಾದ್ದರಿಂದ ಅತಿ ಹೆಚ್ಚು ಯುವಕರೇ ಬೆಟ್ಟಿಂಗ್ ನಲ್ಲಿ ತೊಡಗಿಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

click me!