* ಅಂತಾರಾಜ್ಯ ದರೋಡೆಕೋರರ ಪತ್ತೆಗೆ ಸಿಸಿಟಿವಿ ಫುಟೇಟ್ ಪ್ರಮುಖ ಅಸ್ತ್ರ
* 2970 ಕಿಮೀ ಕ್ರಮಸಿ ಈ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು
* ಹೊಂಚುಹಾಕಿ ದರೋಡೆ ಮಾಡುವುದೇ ಇವರ ಕಾಯಕಸ
ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ(ಜೂ.24): ವಾಹನ ಸವಾರರು ಪ್ರತಿದಿನ ಶಾಪ ಹಾಕುವ ಟೋಲ್ ಗೇಟ್ ಮತ್ತು ಫಾಸ್ಟ್ ಟ್ಯಾಗ್ ಉಡುಪಿ ಪೊಲೀಸರಿಗೆ ವರವಾಗಿ ಪರಿಣಮಿಸಿದೆ. ಫಾಸ್ಟ್ ಟ್ಯಾಗ್ ನಂಬರ್ ಮತ್ತು ಸಿಸಿಟಿವಿ ಫುಟೇಟ್‌ಗಳನ್ನು ಆಧರಿಸಿ ಅಂತಾರಾಜ್ಯ ದರೋಡೆಕೋರರ ಪತ್ತೆಗೆ ಪ್ರಮುಖ ಅಸ್ತ್ರವಾಗಿದೆ.
undefined
ಜುವೆಲ್ಲರ್ಸ್‌ಗಳಲ್ಲಿ ಚಿನ್ನ ಖರೀದಿಸುವ, ಬ್ಯಾಂಕುಗಳಲ್ಲಿ ಲಕ್ಷಾಂತರ ರುಪಾಯಿ ಹಣ ಡ್ರಾ ಮಾಡುವವರನ್ನೇ ಹೊಂಚು ಹಾಕಿ ಕುಳಿತು ಕೊಳ್ಳುವ ತಂಡ ಈಗ ಅಂದರ್ ಆಗಿದೆ. 18 ಲಕ್ಷ ರೂ. ಚಿನ್ನವನ್ನು ಬೆನ್ನತ್ತುತ್ತಾ ಆ ತಂಡ ಮಹಾರಾಷ್ಟ್ರದಿಂದ ಕರ್ನಾಟಕ ಕರಾವಳಿಗೆ ಬಂದಿತ್ತು. ಉಡುಪಿ ಪೊಲೀಸರ ಚಾಣಾಕ್ಷತನದಿಂದ ಮಧ್ಯಪ್ರದೇಶದ ಖತರ್ನಾಕ್ ಟೀಮ್ ಉಡುಪಿಯ ಜೈಲು ಸೇರಿದೆ.
ಡೇಟಿಂಗ್ ಗೆಳತಿಗಾಗಿ 5.81 ಕೋಟಿ ಕೊಟ್ಟ ಇಂಡಿಯನ್ ಬ್ಯಾಂಕ್ ಮ್ಯಾನೇಜರ್..!
ಮುಂಬೈ ಮೂಲದ ಈಶ್ವರ್ ಚಿನ್ನದ ವ್ಯಾಪಾರಿ 18 ಲಕ್ಷ ರುಪಾಯಿ ಆಭರಣಗಳನ್ನು ಖರೀದಿಸಿ ಮಂಗಳೂರಿನತ್ತ ಬಸ್ ನಲ್ಲಿ ಹೊರಟಿದ್ದರು. ಜೂ. 16 ರಂದು ಅವರು ಪ್ರಯಾಣಿಸುತ್ತಿದ್ದ ಪಿಂಟೋ ಬಸ್ಸು ಉಡುಪಿ ಜಿಲ್ಲೆ ಬೈಂದೂರಿನ ಅರೆ ಶಿರೂರು ತಲುಪಿ ಚಾ ವಿರಾಮಕ್ಕೆಂದು ನಿಂತಿತು. ಪ್ರಯಾಣಿಕರು ಬಸ್ ಇಳಿದು ಶಿವ ಸಾಗರ್ ಹೋಟೆಲ್ ಗೆ ಹೋದದ್ದೇ ತಡ ಬಸ್ ನ್ನೇ ಬೆನ್ನತ್ತಿ ಬಂದಿದ್ದ ನಾಲ್ವರ ತಂಡ ಒಳಗೆ ಹೋಗಿ ಕ್ಷಣಮಾತ್ರದಲ್ಲಿ ಹೊರಗೆ ಬಂದಿತ್ತು. ಬರ್ತಾ 18 ಲಕ್ಷ ರೂಪಾಯಿ ಮೊತ್ತದ ಚಿನ್ನದ ಆಭರಣಗಳನ್ನು ಎಗರಿಸಿದ್ದಾರೆ.
ಬಸ್ ಕಂಡಕ್ಟರ್ ಮಾಹಿತಿಯ ಮೇರೆಗೆ ಪೊಲೀಸರ ತಂಡ ರಚನೆಯಾಗಿ ಹುಡುಕಾಟ ನಡೆದಿದೆ. ಭಟ್ಕಳ ಹೊನ್ನಾವರ ತಾಲೂಕುಗಳಲ್ಲಿ ತಪಾಸಣೆ ಮಾಡಿದಾಗ ಕಾರು ಮಿಸ್ಸಾಗಿದೆ. ಮರುದಿನ ಬೆಂಗಳೂರಿನಲ್ಲಿ ಕಾರು ಪತ್ತೆ ಆಗ್ತದೆ. ದೇವನಹಳ್ಳಿಯಲ್ಲಿ ಮತ್ತೆ ಮಿಸ್ ಆಗಿ ಮಹಾರಾಷ್ಟ್ರದಲ್ಲಿ ಟ್ರ್ಯಾಕ್ ಆಗಿದೆ.
Bengaluru Crime News: ಬೆಂಗಳೂರಲ್ಲಿ ಬೀಡು ಬಿಟ್ಟಿದೆ ಮಂಕಿ ಗ್ಯಾಂಗ್: ಐಶಾರಾಮಿ ಅಪಾರ್ಟ್‌ಮೆಂಟ್‌ಗಳೇ ಟಾರ್ಗೇಟ್
ಮಹಾರಾಷ್ಟ್ರದ ದುಲೇ ಜಿಲ್ಲೆ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಸ್ಥಳೀಯ ಕ್ರೈಂ ಬ್ರ್ಯಾಂಚ್ ಟೀಂ ನಾಲ್ವರನ್ನು ಬಂಧಿಸಿದ್ದಾರೆ ವಿಚಾರಣೆ ವೇಳೆ ಈ ತಂಡ ಮಧ್ಯಪ್ರದೇಶ ಮೂಲದ್ದು ಎಂದು ಗೊತ್ತಾಗಿದೆ. ಅಲೀಖಾನ್, ಅಮ್ಜತ್, ಇಕ್ರಾರ್ ಖಾನ್, ಗೋಪಾಲ್ ಅಮಾಲೋವರ್ ಬಂಧಿತ ದರೋಡೆಕೋರರು.
ಹೊಂಚುಹಾಕಿ ದರೋಡೆ ಮಾಡುವುದೇ ಇವರ ಕಾಯಕ. ಈ ತಂಡದ ಮೇಲೆ ಹಲವಾರು ಕೇಸುಗಳು ಇವೆ ಎಂಬ ಮಾಹಿತಿ ಉಡುಪಿ ಪೊಲೀಸರಿಗೆ ಸಿಕ್ಕಿದೆ. ಕಸ್ಟಡಿಗೆ ಪದವಿ ಪಡೆದು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಒಟ್ಟು 2970 ಕಿಮೀ ಕ್ರಮಸಿ ಈ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ. ಕುಂದಾಪುರ ಕೋರ್ಟಿಗೆ ಆರೋಪಿಗಳನ್ನು ಹಾಜರುಪಡಿಸಲಾಗಿದೆ. 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣದ ಜೊತೆಗೆ 10 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ.