Yadgir: ಅಂತರ್ ಜಿಲ್ಲಾ ಖತರ್ನಾಕ್ ಬೈಕ್ ಕಳ್ಳ ಅಂದರ್: 14 ಬೈಕ್ ವಶ

By Govindaraj SFirst Published May 9, 2022, 9:28 PM IST
Highlights

ಬೈಕ್ ಅಡ ಇಟ್ಟುಕೊಂಡು ಸಾಲ ಕೊಡಿ ಎನ್ನುವ ಖದೀಮ ಕಳ್ಳರಿಂದ ಎಚ್ಚರಿಕೆ ವಹಿಸಬೇಕಿದೆ. ಒಂದು ವೇಳೆ ಮೋಸ ಹೋದರೆ ಸಾಲದ ಹಣ ಹಾಗೂ ಬೈಕ್ ಕೂಡ ನಿಮ್ಮ ಕೈಯಲ್ಲಿ ಇರಲ್ಲ. ಹಾಗಾಗಿ ಖದೀಮ ಕಳ್ಳರ ಬಗ್ಗೆ ಎಚ್ಚರಿಕೆ ಇರಬೇಕಾಗಿದೆ. 

ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಮೇ.09): ಬೈಕ್ (Bike) ಅಡ ಇಟ್ಟುಕೊಂಡು ಸಾಲ ಕೊಡಿ ಎನ್ನುವ ಖದೀಮ ಕಳ್ಳರಿಂದ (Thefts) ಎಚ್ಚರಿಕೆ ವಹಿಸಬೇಕಿದೆ. ಒಂದು ವೇಳೆ ಮೋಸ ಹೋದರೆ ಸಾಲದ ಹಣ ಹಾಗೂ ಬೈಕ್ ಕೂಡ ನಿಮ್ಮ ಕೈಯಲ್ಲಿ ಇರಲ್ಲ. ಹಾಗಾಗಿ ಖದೀಮ ಕಳ್ಳರ ಬಗ್ಗೆ ಎಚ್ಚರಿಕೆ ಇರಬೇಕಾಗಿದೆ. ಇಂತಹ ಕೃತ್ಯದಲ್ಲಿ ಭಾಗಿಯಾದ ಖದೀಮ ಕಳ್ಳನಿಗೆ ಈಗ ಯಾದಗಿರಿ ಪೊಲೀಸರು (Police) ಖೆಡ್ಡಾ ತೋಡಿ ಜೈಲಿಗಟ್ಟಿದ್ದಾರೆ.

Latest Videos

ಅಂತರ್ ಜಿಲ್ಲಾ ಕಳ್ಳನನ್ನು ಸೆರೆ ಹಿಡಿದ ಹುಣಸಗಿ ಪೋಲಿಸರು: ರಾಯಚೂರು ಜಿಲ್ಲೆಯ ಲಿಂಗಸೂಗುರು ತಾಲೂಕಿನ ಗೌಡುರು ಗ್ರಾಮದ ತಿರುಪತಿ ಕೃಷಿ ಕಾಯಕ ಮಾಡಿ ಜೀವನ ನಡೆಸುತ್ತಿದ್ದನು. ಆದರೆ, ಕಳೆದ ತಿಂಗಳು ಸಂಬಂಧಿಗಳ ಹತ್ತಿರ 20 ಸಾವಿರ ರೂಪಾಯಿ ಹಣ ಸಾಲ ಪಡೆದಿದ್ದ ಆದರೆ, ಸಾಲದ ಹಣ ಪಾವತಿ ಮಾಡಲು ಹಣವಿರದೇ ಕಂಗಲಾಗಿದ್ದ. ಸಾಲ ತಿರಿಸಲು ಚೆನ್ನಾಗಿ ದುಡಿದು ಹಣ ಸಂಗ್ರಹ ಮಾಡಿ ಸಾಲ ಪಾವತಿ ಮಾಡಿ ಕೆಟ್ಟ ಕಾರ್ಯಕ್ಕೆ ಕೈಹಾಕುತ್ತಾನೆ.

Chamarajanagar: ತಾಯಿಯ ಜೊತೆಗೆ ಅಕ್ರಮ ಸಂಬಂಧ: ದೊಣ್ಣೆಯಲ್ಲಿ ಹೊಡೆದು ವ್ಯಕ್ತಿಯ ಕೊಲೆ

ಪರಿಚಿತರಿಗೆ ಬೈಕ್ ಅಡವಿಟ್ಟು ಸಾಲ ಪಡೆದು ಪಂಗನಾಮ: ಮೊದಲು ಒಂದು ಬೈಕ್ ಕಳ್ಳತನ ಮಾಡಿ ಪರಿಚಿತರಿಗೆ ಗಾಡಿ ನಿಮ್ಮ ಹತ್ತಿರವಿರಲಿ ನನಗೆ 20 ಸಾವಿರ ರೂಪಾಯಿ ಹಣ ನೀಡಿ ಮತ್ತೆ ಹಣ ಪಾವತಿ ಮಾಡಿ ಬೈಕ್ ತೆಗೆದುಕೊಂಡು ಹೋಗುತ್ತೆನೆಂದು ಪರಿಚಿತ ಸ್ನೇಹಿತರಿಗೆ ಯಾಮಾರಿಸಿ 20 ಸಾವಿರ ರೂಪಾಯಿ ಹಣ ಪಡೆದಿದ್ದ. ಆ ಹಣದಿಂದ ಸಾಲ ಪಾವತಿ ಮಾಡಿದನು. ಆದರೆ, ಮೊದಲು ಬೈಕ್ ಕಳ್ಳತನ ಮಾಡಿ ಹಣದ ಲಾಭ ಪಡೆದ ತಿರುಪತಿ ತನ್ನ ಕೃಷಿ ಕೆಲಸ ಬಿಟ್ಟು ಬೈಕ್ ಕಳ್ಳತನ ಮಾಡುವ ಖದೀಮ ಕೆಲಸ ಮಾಡಲು ಮುಂದಾಗುತ್ತಾನೆ. ರಾಯಚೂರು ಜಿಲ್ಲೆಯ ದೇವದುರ್ಗ, ಮಸ್ಕಿ, ಮುದಗಲ್, ಹಟ್ಟಿ ಹಾಗೂ ಯಾದಗಿರಿ ಜಿಲ್ಲೆಯ ಹುಣಸಗಿ, ಬಲಶೆಟ್ಟಿಹಾಳ, ಕಾಮನಟಗಿ, ಯಾದಗಿರಿ ನಗರ, ಶಹಾಪುರ ಸೇರಿದಂತೆ ಕಳೆದ ಒಂದು ತಿಂಗಳಿಂದ ಬೈಕ್‌ಗಳನ್ನು ಕದ್ದು ಪರಿಚಿತರಿಗೆ ಬೈಕ್‌ಗಳನ್ನು ಅಡಮಾನವಿಟ್ಟು ಸಾಲ ಪಡೆದು ಲಕ್ಷಾಂತರ ರೂಪಾಯಿ ಹಣ ಪರಿಚಿತರಿಂದ ಹಣ ದೋಚಿ ಎಸ್ಕೆಪ್ ಆಗಿದ್ದನು.

ಬೈಕ್ ಮಾರಾಟ ಮಾಡಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದ ಕಳ್ಳ ತಿರುಪತಿ ರಾಠೋಡ್: ಬೈಕ್ ಮಾರಾಟ ಮಾಡಬೇಕೆಂದರೆ ದ್ವಿಚಕ್ರ ವಾಹನಗಳ ಓರಿಜಿನಲ್ ದಾಖಲೆಗಳು ಬೇಕಾಗುತ್ತವೆಂದು ಅರಿತು ಕದ್ದ ಬೈಕ್‌ಗಳನ್ನು ಪರಿಚಿತರ ಹತ್ತಿರ ಅಡವಿಟ್ಟು ಹಣ ದೋಚಿ ಯಾಮಾರಿಸಿದನು. ಒಂದು ಬೈಕ್‌ನಿಂದ 15 ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿವರಗೆ ಹಣ ಪಡೆದಿದ್ದನು. ಪ್ರಮುಖವಾಗಿ ಬೈಕ್‌ಗಳಿಗೆ ಬೈಕ್ ಸವಾರರು ಕೀ ಬಿಟ್ಟು ಹಾಗೆ ಇಡುವುದನ್ನು ಅರಿತು ಬೈಕ್ ದೋಚಿಕೊಂಡು ಹೋಗುತ್ತಿದ್ದನು.

ಸಿಸಿಟಿವಿ ದೃಶ್ಯದಿಂದ ಸಿಕ್ಕಿಬಿದ್ದ ಕಳ್ಳ: ಕಳೆದ 15 ದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದ ಅಂಗಡಿ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಖದೀಮ ತಿರುಪತಿ ದೋಚಿ ಪರಾರಿಯಾಗಿದ್ದನು. ಬೈಕ್ ಕಳ್ಳತನ ಮಾಡಿ ಎಸ್ಕೆಪ್ ಆಗಿದ್ದ ಕಳ್ಳನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಖದೀಮನ ಕೃತ್ಯದ ವಿಡಿಯೋದಿಂದ ಕಳ್ಳತನ ಪತ್ತೆಗಾಗಿ ಜಾಲ ಬಿಸಿದ ಹುಣಸಗಿ ಪೊಲೀಸರು ಕೊನೆಗೂ ಖತರ್ನಾಕ್ ಕಳ್ಳನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Gadag: 'ಎಸಿಬಿ ರೇಡ್' ನಾಟಕ ಮಾಡಿ ಹಣ ಕಿತ್ತಲು ಮುಂದಾದ ಖದೀಮರ ಟೀಮ್!

ಸಿಪಿಐ ದೌಲತ್ ಅಪರೇಶನ್‌ಗೆ ಖದೀಮ ತಿರುಪತಿ ಅಂದರ್: ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾರ್ಗದರ್ಶನದಲ್ಲಿ ಹುಣಸಗಿ ಸಿಪಿಐ ದೌಲತ್ ಕುರಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ತನೀಖಾ ತಂಡವು ಖದೀಮ ಕಳ್ಳನನ್ನು ಇಂದು ಗೆದ್ದಲಮರಿ ಸಮೀಪ ಬಂಧಿಸಿದ್ದಾರೆ. 14 ಬೈಕ್ ಗಳನ್ನು ಹುಣಸಗಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. 6 ಲಕ್ಷ 50 ಸಾವಿರ ರೂಪಾಯಿ ಬೆಲೆ ಬಾಳುವ ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಖದೀಮ ಕಳ್ಳರ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅಗತ್ಯವಿದೆ.

click me!