ಅಂತರ್ ಜಿಲ್ಲಾ ಕುಖ್ಯಾತ ಬೈಕ್ ಕಳ್ಳ ಚಿಕ್ಕಮಗಳೂರಿನಲ್ಲಿ ಅರೆಸ್ಟ್!

By Gowthami K  |  First Published Dec 26, 2022, 8:35 PM IST

ರಾತ್ರೋರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳನ್ನ ಎಗರಿಸಿ ಕಡಿಮೆ ಬೆಲೆಗೆ ಮಾರುತ್ತಿದ್ದ ಕುಖ್ಯಾತ ಬೈಕ್ ಕಳ್ಳನನ್ನ ಚಿಕ್ಕಮಗಳೂರು ಜಿಲ್ಲೆ ಕಡೂರು ಪೊಲೀಸರು ಬಂಧಿಸಿದ್ದಾರೆ. ಕಡೂರು ತಾಲೂಕಿನ ಶೆಟ್ಟಿಹಳ್ಳಿ ನಿವಾಸ್ ಮೋಹನ್ ಕುಮಾರ್ ಬಂಧಿತ ಆರೋಪಿ. ಬಂಧಿತನಿಂದ ಸುಮಾರು 4 ಲಕ್ಷ ಮೌಲ್ಯದ 11 ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.


ಚಿಕ್ಕಮಗಳೂರು (ಡಿ.26): ರಾತ್ರೋರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳನ್ನ ಎಗರಿಸಿ ಕಡಿಮೆ ಬೆಲೆಗೆ ಮಾರುತ್ತಿದ್ದ ಕುಖ್ಯಾತ ಬೈಕ್ ಕಳ್ಳನನ್ನ ಚಿಕ್ಕಮಗಳೂರು ಜಿಲ್ಲೆ ಕಡೂರು ಪೊಲೀಸರು ಬಂಧಿಸಿದ್ದಾರೆ. ಕಡೂರು ತಾಲೂಕಿನ ಶೆಟ್ಟಿಹಳ್ಳಿ ನಿವಾಸ್ ಮೋಹನ್ ಕುಮಾರ್ ಬಂಧಿತ ಆರೋಪಿ. ಬಂಧಿತನಿಂದ ಸುಮಾರು 4 ಲಕ್ಷ ಮೌಲ್ಯದ 11 ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ. ಕಡೂರು ತಾಲೂಕಿನಲ್ಲಿ ತೀವ್ರವಾಗಿ ಬೈಕ್ ಕಳ್ಳತನವಾಗುತ್ತಿದ್ದ ಹಿನ್ನೆಲೆ ಪೊಲೀಸರು ತನಿಖೆ ಕೈಗೊಂಡಿದ್ದರು. ಖಚಿತ ಮಾಹಿತಿಗೆ ಮೇರೆಗೆ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕಡೂರು ಪೊಲೀಸರ ಎದುರು ಆರೋಪಿ ಮೋಹನ್ ತಪ್ಪನ್ನ ಒಪ್ಪಿಕೊಂಡಿದ್ದಾನೆ. ತನಿಖೆ ವೇಳೆ, ಕೇವಲ ಕಡೂರು ಅಷ್ಟೆ ಅಲ್ಲದೆ ಬೆಂಗಳೂರು, ತುಮಕೂರು ಸೇರಿದಂತೆ ಬೇರೆ-ಬೇರೆ ಜಿಲ್ಲೆಗಳಲ್ಲಿ ಬೈಕ್ಗಳನ್ನ ಕದ್ದಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಕಡೂರು ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂತಾರಾಜ್ಯ ವಾಹನ ಕಳ್ಳನ ಬಂಧನ, 10 ಬೈಕ್‌ವಶ
ಹುಮನಾಬಾದ: ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ವಾಹನ ಕಳ್ಳನನ್ನು ಬಂಧಿಸಿರುವ ಹುಮನಾಬಾದ್‌ ಪೊಲೀಸರು 10 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

Tap to resize

Latest Videos

ಸ್ಪೋರ್ಟ್ಸ್ ಬೈಕ್ ವಿಚಾರವಾಗಿ ನಡೆದಿತ್ತು ಜಗಳ -ಸಿನಿಮಾ ಸ್ಟೈಲ್ ನಲ್ಲಿ ಹಲ್ಲೆ, 19 ಲಕ್ಷ ಮೌಲ್ಯದ ಬೈ

ಈ ಕುರಿತಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಿಪಿಐ ಶರಣಬಸಪ್ಪಾ ಕೋಡ್ಲಾ ಮಾತನಾಡಿ, ಬೈಕ್‌ಗಳ ಕಳವು ಪ್ರಕರಣ ಹೆಚ್ಚಾಗಿರುವ ಕಾರಣ ಎಸ್‌ಪಿ ಡೆಕ್ಕಾ ಕಿಶೋರ ಬಾಬು, ಹೆಚ್ಚುವರಿ ಎಸ್‌ಪಿ ಮಹೇಶ ಮೆಘಣ್ಣವರ, ಎಎಸ್‌ಪಿ ಶಿವಾಂಶು ರಜಪೂತ ಅವರ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ವಿಶೇಷÜ ತಂಡ ಹುಮನಾಬಾದನಲ್ಲಿ ತಾಲೂಕಿನ ಮೋಳಕೇರಾ ಗ್ರಾಮದ ಶಿವಪ್ರಸಾದ ಅರ್ಜುನ ನಾಗಣ್ಣನೋರ್‌ ಎಂಬಾತನ್ನು ಮಾಣಿಕನಗರ ಬೀದರ ಮಾರ್ಗದ ಮಧ್ಯೆ ನಾಮ ಫಲಕ ಇಲ್ಲದ ಹೊಂಡಾ ಶೈನ್‌ ದ್ವಿಚಕ್ರ ವಾಹನ ಓಡಿಸುತ್ತಿರುವ ಸಂದರ್ಭದಲ್ಲಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಕತ್ತು ಹಿಸುಕಿ ಮಹಿಳೆಯ ಬರ್ಬರ ಹತ್ಯೆ, ಕೆಲಸಕ್ಕೆಂದು ಹೋದವಳು ಶವವಾಗಿ ಪತ್ತೆ

1 ಪಲ್ಸರ್‌, 3ಹೋಂಡಾ ಶೈನ್‌, 4 ಸ್ಪೆಂಡರ್, 1 ಡಿಲೆಕ್ಸ್‌, 1 ಹೊಂಡಾ ಪ್ಯಾಶನ್‌ ಸೇರಿದಂತೆ 5 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನ ಪೊಲೀಸರು ಜಪ್ತಿ ಮಾಡಿದ್ದಾರೆ. ಪಟ್ಟಣದಲ್ಲಿ ಮೂರು ಹಾಗೂ ಜಿಲ್ಲೆ ಹಾಗೂ ಅಂತರ ರಾಜ್ಯದಲ್ಲೂ ಕಳ್ಳತನ ಮಾಡಿರುವ ಕುರಿತು ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಪಿಎಸ್‌ಐ ಮಂಜನಗೌಡ ಪಾಟೀಲ್‌, ಅಪರಾಧ ವಿಭಾಗ ಪಿಎಸ್‌ಐ ಸುರೇಶ ಹಜ್ಜರ್ಗಿ ಸಿಬ್ಬಂದಿಗಳಾದ ಭಗವಾನ ಬಿರಾದಾರ, ಸೂರ್ಯಕಾಂತ, ಬಾಬುರಾವ ಕೋರೆ, ಬಾಲಾಜಿ, ಶಿಲಸಾಗರ, ಆಕಾಶ ಸಿಂಧೆ, ಮಲ್ಲು ಮಳ್ಳಿ ಸೇರಿದಂತೆ ಅನೇಕರಿದ್ದರು.

 

click me!