ಕತ್ತು ಹಿಸುಕಿ ಮಹಿಳೆಯ ಬರ್ಬರ ಹತ್ಯೆ, ಕೆಲಸಕ್ಕೆಂದು ಹೋದವಳು ಶವವಾಗಿ ಪತ್ತೆ

By Suvarna News  |  First Published Dec 26, 2022, 8:23 PM IST

ಮಹಿಳೆಯೊಬ್ಬಳನ್ನ ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಾರಣ್ಣನದೊಡ್ಡಿ ಗ್ರಾಮದ ಬಳಿ ನಡೆದಿದೆ.


ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್

ರಾಮನಗರ (ಡಿ.26): ಆಕೆ ಕಲ್ಯಾಣಮಂಪಟಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ನೆನ್ನೆ ರಾತ್ರಿ ಸಹಾ ಕೆಲಸವಿದೆ ಎಂದು ತನ್ನ ಅಕ್ಕನಿಗೆ ಕರೆ ಮಾಡಿ ಹೋಗಿದ್ದಳು. ಆದರೆ ರಾತ್ರಿ ಎಷ್ಟು ಹೊತ್ತು ಆದರೂ ಮನೆಗೆ ವಾಪಾಸ್ ಬಂದಿರಲಿಲ್ಲ. ಆದರೆ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಆಕೆಯ ಹತ್ಯೆಯಾಗಿತ್ತು. ಮಹಿಳೆಯೊಬ್ಬಳನ್ನ ಕತ್ತುಹಿಸುಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಹಿಳೆಯೊಬ್ಬಳನ್ನ ಕತ್ತುಹಿಸುಕಿ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಾರಣ್ಣನದೊಡ್ಡಿ ಗ್ರಾಮದ ಬಳಿ ನಡೆದಿದೆ. ಕನಕಪುರ ನಗರದ ಕುರುಪೇಟೆ ನಿವಾಸಿ ಶೃತಿ (32) ಮೃತ ದುರ್ದೈವಿ. ಅಂದಹಾಗೆ ಕನಕಪುರ ನಗರದ ಕಲ್ಯಾಣಮಂಪಟದಲ್ಲಿ ಕೆಲಸ ಮಾಡುತ್ತಿದ್ದ ಶೃತಿ, ನೆನ್ನೆ ರಾತ್ರಿ ಸಹಾ ಕಲ್ಯಾಣ ಮಂಪಟದಲ್ಲಿ ಕೆಲಸವಿದೆ ಎಂದು ತನ್ನ ಅಕ್ಕನಿಗೆ ಕಾಲ್ ಮಾಡಿ ಹೇಳಿ ಹೋಗಿದ್ದಾಳೆ.

Tap to resize

Latest Videos

ಆದರೆ ಕಲ್ಯಾಣಮಂಪಟದಲ್ಲಿ ಕೆಲಸ ಇರದ ಹಿನ್ನೆಲೆಯಲ್ಲಿ ವಾಪಾಸ್ ಬಂದಿದ್ದಾಳೆ. ಆದರೆ ಮನೆಗೆ ಬರಬೇಕಾದ ಆಕೆ ಬೆಳೆಗ್ಗೆ ಮಾರಣ್ಣನದೊಡ್ಡಿ ಗ್ರಾಮದ ಬಳಿ ಶವವಾಗಿ ಪತ್ತೆಯಾಗಿದ್ದಾಳೆ. ಬೆಳಗ್ಗೆ ಮೃತ ಶೃತಿಯ ಗಂಡ ಲೋಕೇಶ್ ಗೆ ಕರೆ ಬಂದಿದೆ. ಲೋಕೇಶ್ ಕೂಡ ರಾತ್ರಿ ಬಂದಿರಬಹುದು ಎಂದು ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಿದ್ದಾನೆ. ಆದರೆ ಮಾರಣ್ಣನದೊಡ್ಡಿ ಗ್ರಾಮದ ಬಳಿ ಶೃತಿಯ ಶವ ಪತ್ತೆಯಾಗಿದೆ.

ಮಾತಿನಲ್ಲೇ ಉದ್ಯಮಿಗಳ ಮರಳು ಮಾಡೋ ಖತರ್ನಾಕ್ ಕಾರ್ ಕಳ್ಳ ಬಂಧನ

ಅಂದಹಾಗೆ ಶೃತಿ ಈಗಾಗಲೇ ಮದುವೆಯಾಗಿ ಹದಿನಾಲ್ಕು ವರ್ಷವಾಗಿತ್ತು. ಇದುವರೆಗೂ ಮಕ್ಕಳಾಗಿಲ್ಲ. ಗಂಡ ಲೋಕೇಶ್ ಗಾರೆ ಕೆಲಸ ಮಾಡುತ್ತಿದ್ರೆ, ಶೃತಿ ಕಲ್ಯಾಣಮಂಟಪಗಳಲ್ಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ ರಾತ್ರಿ ವಾಪಾಸ್ ಮನೆಗೆ ಬರುವಾಗ ಪರಿಚಿತನೊಬ್ಬ ಕನಕಪುರದಿಂದ  ಮಾರಣ್ಣನದೊಡ್ಡಿ ಗ್ರಾಮದವರೆಗೂ ಆಪೇ ಆಟೋದಲ್ಲಿ ಕೂರಿಸಿಕೊಂಡು ಬಂದು ಅಲ್ಲಿ ಆಪೇ ಆಟೋದ ರಬ್ಬರ್ ವೈಯರ್ ನಿಂದ ಕತ್ತುಬಿಗಿದು ಕೊಲೆಗೈದು ನಂತರ ಮೃತದೇಹವನ್ನ ನಡುರಸ್ತೆಯಲ್ಲಿಯೇ ಬಿಸಾಕಿ ಪರಾರಿಯಾಗಿದ್ದಾನೆ. ಈ ಸಂಬಂಧ ಸಾತನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮಾಡೆಲ್ ಆಗಬೇಕೆಂಬ ಕನಸಿನೊಂದಿಗೆ ನಗರಕ್ಕೆ ಬಂದ ಯುವತಿ ಮೇಲೆ ಅತ್ಯಾಚಾರ

ಒಟ್ಟಾರೆ ಮಹಿಳೆಯ ಹತ್ಯೆ ಸಾಕಷ್ಟು ಆತಂಕ ಮೂಡಿಸಿದೆ. ಈ ಸಂಬಂಧ ಸಾತನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

click me!