ಶಾಲೆಗಳಿಗೆ ಹುಸಿಬಾಂಬ್ ಇ ಮೇಲ್ ಪ್ರಕರಣ, ಬೆಂಗಳೂರಿಗೆ ಸೆಂಟ್ರಲ್ ಇಂಟಲಿಜೆನ್ಸ್ ಬ್ಯೂರೋ

By Suvarna News  |  First Published Apr 30, 2022, 4:02 PM IST

* ಶಾಲೆಗಳಿಗೆ ಹುಸಿಬಾಂಬ್ ಇ ಮೇಲ್ ಪ್ರಕರಣ
* ಪ್ರಕರಣದ ತನಿಖೆಗೆ ಐಬಿ ಎಂಟ್ರಿ
* ಬೆಂಗಳೂರು ನಗರದ ಹಾಗೂ ಬೆಂಗಳೂರು ಗ್ರಾಮಾಂತರ ಶಾಲೆಗಳಿಗೆ ಇ ಮೇಲ್ ಬಂದಿತ್ತು


ಕಿರಣ್ ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು

ಬೆಂಗಳೂರು, (ಏ.30) :
ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಿಗೆ ಹುಸಿಬಾಂಬ್ ಸಂದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಪತ್ತೆಹಚ್ಚಲು ಕೇಂದ್ರ ತನಿಖಾ ಸಂಸ್ಥೆ ಎಂಟ್ರಿ ಕೊಟ್ಟಿದೆ.

ಹೌದು.. ಸೆಂಟ್ರಲ್ ಇಂಟಲಿಜೆನ್ಸ್ ಬ್ಯೂರೋ ಇದೀಗ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದು, ಬೆಂಗಳೂರು ಸಿಟಿ ಪೊಲೀಸರ ಬಳಿ ಈಗಾಗಲೇ ಮಾಹಿತಿ‌ ಸಂಗ್ರಹಿಸುತ್ತಿದ್ದಾರೆ. ಬೇರೆ ರಾಷ್ಟ್ರದ ಐಪಿ ಅಡ್ರಸ್ ಬಳಸಿ ಆರೋಪಿಗಳು ಇ ಮೇಲ್ ಮಾಡಿರೋದು ಪತ್ತೆಯಾಗಿದೆ. ಕಳೆದ 23 ದಿನದಿಂದ  ಸಿಟಿ ಪೊಲೀಸರಿಗೆ ಖದೀಮರ ಹೆಜ್ಜೆಗುರುತು ಸಿಕ್ಕಿರಲಿಲ್ಲ. ಸೈಬರ್ ಎಕ್ಸ್ ಪರ್ಟ್ ಸೇರಿ ಕಾರ್ಯಾಚರಣೆ ನಡೆಸಿದ್ರೂ ಪ್ರಯೋಜನವಾಗಿರಲಿಲ್ಲ.ಕೇವಲ ಐಟಿ ಅಡ್ರಸ್ ಮಾತ್ರ ಪತ್ತೆಹಚ್ಚಲು ಸಫಲರಾಗಿದ್ರು.

Tap to resize

Latest Videos

ಸ್ಟೇಟ್ ಇಂಟಲಿಜೆನ್ಸ್ ಗೂ ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ. ಫೇಕ್ ಐಪಿ ಅಡ್ರಸ್ ಕ್ರಿಯೇಟ್ ಮಾಡಿ ಕೃತ್ಯ ಎಸಗಲಾಗಿದೆ. ಫೇಕ್ ಐಡಿ ಹಾಗೂ ವಿಪಿಎನ್ ಶೇರ್ ಬಗ್ಗೆಯೂ ಐಬಿ ಮಾಹಿತಿ ಸಂಗ್ರಹಿಸುತ್ತಿದೆ . ಕರ್ನಾಟಕದಲ್ಲೇ ಅಡಗಿದ್ದಾನಾ ಬಾಂಬ್ ಬೆದರಿಕೆ ಕರೆಯ ಹ್ಯಾಕರ್ ಎಂಬ ಅನುಮಾನ ಅಧಿಕಾರಿಗಳಿಗೆ ಮೂಡಿದೆ.

Bomb Threat: ಬೆಂಗ್ಳೂರಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿದ್ದು ಪಾಕಿಸ್ತಾನದಿಂದ..!

ಕೆಲ ದಿನಗಳ ಹಿಂದೆ ಸುಮಾರು 15 ಕ್ಕೂ ಹೆಚ್ಚು ಬೆಂಗಳೂರು ನಗರದ ಹಾಗೂ ಬೆಂಗಳೂರು ಗ್ರಾಮಾಂತರ ಶಾಲೆಗಳಿಗೆ ಇ ಮೇಲ್ ಬಂದಿತ್ತು.ಇದರಿಂದ ಶಾಲಾ ಆಡಳಿತ ಮಂಡಳಿ ಮಕ್ಕಳು ಪೋಷಕರು ಆತಂಕಗೊಂಡಿದ್ರು..ಈ ಸಂಬಂಧ ಕಬ್ಬನ್ ಪಾರ್ಕ್ ,ಹೈಗ್ರೌಂಡ್ ,ಕೊಡಗೇಹಳ್ಳಿ,ಹೆಣ್ಣೂರು ಸೇರಿ ಹಲವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದುವರೆಗೂ ಆರೋಪಿ ಮಾತ್ರ ಬಂಧಿಸಲಾಗಿಲ್ಲ.

ಐಟಿ ಕಾಯ್ದೆ ಹಾಗೂ ಸೈಬರ್‌ ಭಯೋತ್ಪಾದನೆಯಡಿ ಪ್ರಕರಣ ದಾಖಲಾಗಿರುವುದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಈ ಬೆದರಿಕೆ ಇ-ಮೇಲ್‌ಗಳ ಮೂಲ ಪತ್ತೆಗೆ ಗೂಗಲ್‌(Google) ಸಂಸ್ಥೆಗೆ ಪತ್ರ ಬರೆದು ಫ್ರಾಕ್ಸಿ ಸರ್ವರ್‌ಗಳ ಮಾಹಿತಿ ಪಡೆದಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಬಾಂಬ್‌ ಬೆದರಿಕೆ ಬಂದಿದ್ದು ಪಾಕಿಸ್ತಾನದಿಂದ..!
ಇತ್ತೀಚೆಗೆ ಬೆಂಗಳೂರು(Bengaluru) ನಗರ ಹಾಗೂ ಸುತ್ತಮುತ್ತಲಿನ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಬಂದಿದ್ದ ಬಾಂಬ್‌ ಬೆದರಿಕೆ(Bomb Threat) ಇ-ಮೇಲ್‌ಗಳ ಹಿಂದೆ ಪಾಕಿಸ್ತಾನದ(Pakistan) ಭಯೋತ್ಪಾದಕ(Terrorist) ಸಂಘಟನೆಗಳ ಕೈವಾಡವಿರಬಹುದು ಎಂದು ನಗರ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇ-ಮೇಲ್‌(E-Mail) ಕಳುಹಿಸಿದ್ದ ನಾಲ್ಕು ಸರ್ವರ್‌ಗಳ ಬಗ್ಗೆ ಗೂಗಲ್‌(Google) ನೀಡಿದ ಮಾಹಿತಿ ಮೇರೆಗೆ ಪರಿಶೀಲಿಸಿದಾಗ ಪಾಕಿಸ್ತಾನದಿಂದ ಮೇಲ್‌ಗಳು ಬಂದಿರುವುದು ಪತ್ತೆಯಾಯಿತು. ಹಾಗಾಗಿ ಇ-ಮೇಲ್‌ಗಳನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಅಥವಾ ಇಸ್ಲಾಮಿಕ್‌ ಸ್ಟೇಟ್‌ (ISIS) ಸಂಘಟನೆಗಳು ಕಳುಹಿಸಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಕೇಂದ್ರ ತನಿಖಾ ಏಜೆನ್ಸಿಗಳ ನೆರವು ಪಡೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಖಾಸಗಿ ಶಾಲೆಗಳಿಗೆ ಬೆದರಿಕೆ ಇ-ಮೇಲ್‌ ಮೂಲಕ ಅಶಾಂತಿ ಸೃಷ್ಟಿಸುವುದು ಈ ಕಿಡಿಗೇಡಿಗಳ ದುರುದ್ದೇಶವಾಗಿರಬಹುದು. ಒಮ್ಮೆಗೆ ಅಸಂಖ್ಯಾತ ಇ-ಮೇಲ್‌ಗಳು ಬಂದಿದ್ದು, ಕೆಲ ಶಾಲೆಗಳಿಗೆ ಒಂದೇ ರೀತಿಯ ಸಂದೇಶವುಳ್ಳ 150ಕ್ಕೂ ಇ-ಮೇಲ್‌ಗಳು ಬಂದಿವೆ. ಆದರೆ ಯಾವ ಶಾಲೆಯಲ್ಲೂ ಸಹ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದಿದ್ದಾರೆ.

click me!