Latest Videos

ದೆಹಲಿ ಏರ್‌ಪೋರ್ಟ್‌ನಲ್ಲಿ ದಂಪತಿಯ ಬಂಧನ : 45 ಹ್ಯಾಂಡ್‌ ಗನ್‌ ಜಪ್ತಿ

By Suvarna NewsFirst Published Jul 13, 2022, 4:28 PM IST
Highlights

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 45 ಹ್ಯಾಂಡ್‌ ಗನ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇಬ್ಬರನ್ನು ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 45 ಹ್ಯಾಂಡ್‌ ಗನ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇಬ್ಬರನ್ನು ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಬಂಧಿತರು ಗಂಡ ಹೆಂಡತಿಯಾಗಿದ್ದು,  ಹರಿಯಾಣದ ಗುರ್ಗಾಂವ್ ನಿವಾಸಿಗಳಾದ ಜಗಜಿತ್ ಸಿಂಗ್ ಮತ್ತು ಜಸ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ. ಇವರೊಂದಿಗೆ 17 ತಿಂಗಳ ಹೆಣ್ಣು ಮಗು ಇತ್ತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. 

ದಂಪತಿಗಳು ವಿಮಾನ ಸಂಖ್ಯೆ ವಿಜೆ 895ರ ಮೂಲಕ ವಿಯೆಟ್ನಾಂನ ಹೋ ಚಿ ಮಿನ್ಹ್‌ನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜುಲೈ 11 ರಂದು ಬಂದಿಳಿದಿದ್ದರು. ಅವರು ಆಗಮನ ಕೊಠಡಿಯ ಗ್ರೀನ್ ಚಾನೆಲ್ ದಾಟಿ ವಿಮಾನ ನಿಲ್ದಾಣದ ನಿರ್ಗಮನ ಗೇಟ್‌ನ ಕಡೆಗೆ ತೆರಳುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳು ಅವರನ್ನು ತಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಜಗಜಿತ್ ಸಿಂಗ್ ಎರಡು ಟ್ರಾಲಿ ಬ್ಯಾಗ್‌ಗಳನ್ನು ಹೊತ್ತೊಯ್ಯುತ್ತಿದ್ದರು. ಅದನ್ನು ಅವರ ಹಿರಿಯ ಸಹೋದರ ಮಂಜಿತ್ ಸಿಂಗ್, ಜಗಜಿತ್ ಸಿಂಗ್‌ಗೆ ವಿಯೆಟ್ನಾಂನಲ್ಲಿ ನೀಡಿದ್ದರು. 

ರಣಬೀರ್‌ ಕಪೂರ್‌ನ ಏರ್‌ಪೋರ್ಟ್‌ ಪಾರ್ಕಿಂಗ್‌ನಲ್ಲಿ ತಬ್ಬಿಕೊಂಡು ಮುದ್ದಾಡಿದ ಆಲಿಯಾ!

ಮಂಜಿತ್ ಸಿಂಗ್ ಅವರು ಪ್ಯಾರಿಸ್‌ನಿಂದ ಎಎಫ್ 226 ವಿಮಾನದಲ್ಲಿ ವಿಯೆಟ್ನಾಂಗೆ ಬಂದಿದ್ದರು. ಅದೇ ದೀನ ದಂಪತಿ ವಿಯೆಟ್ನಾಂನಿಂದ ಭಾರತಕ್ಕೆ ಹೊರಟಿದ್ದರು. ಟ್ರಾಲಿ ಬ್ಯಾಗ್‌ಗಳನ್ನು ಜಗಜಿತ್ ಸಿಂಗ್ ಅವರಿಗೆ ನೀಡಿದ ನಂತರ ಮಂಜಿತ್ ವಿಮಾನ ನಿಲ್ದಾಣದಿಂದ ಹೊರಬಿದ್ದಿದ್ದರು. ಜಗಜಿತ್ ಸಿಂಗ್ ಪತ್ನಿ
ಜಸ್ವಿಂದರ್ ಕೌರ್ ಅವರು ಈ ಯೋಜನೆಯ ಸಕ್ರಿಯ ಭಾಗವಾಗಿರುವುದರಿಂದ 45 ಹ್ಯಾಂಡ್ ಗನ್‌ಗಳನ್ನು ಹೊಂದಿರುವ ಎರಡೂ ಟ್ರಾಲಿ ಬ್ಯಾಗ್‌ಗಳ ಟ್ಯಾಗ್‌ಗಳನ್ನು ತೆಗೆದುಹಾಕಲು ಮತ್ತು ನಾಶಪಡಿಸಲು ಜಗಜಿತ್‌ಗೆ ಸಹಾಯ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ, ಕಸ್ಟಮ್ ಅಧಿಕಾರಿಗಳು ವಿಮಾನ ನಿಲ್ದಾಣದ ನಿರ್ಗಮನ ಗೇಟ್‌ನಲ್ಲಿ ಅವರನ್ನು ಹಿಡಿದ ನಂತರ ಮತ್ತು ಜಗಜಿತ್ ಸಾಗಿಸಿದ ಎರಡು ಟ್ರಾಲಿ ಬ್ಯಾಗ್‌ಗಳನ್ನು ತಪಾಸಣೆ ಮಾಡಿದ ನಂತರ ಅಧಿಕಾರಿಗಳು ಮಾರುಕಟ್ಟೆ ಮೌಲ್ಯ ಅಂದಾಜು 22,50,000 ರೂಪಾಯಿಗಳ 45 ಬಗೆಯ ಬ್ರಾಂಡ್ ಗನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಟಿ ಅನುಷ್ಕಾ ಶೆಟ್ಟಿ ಅಣ್ಣನ ಹತ್ಯೆಗೆ ಸಂಚು, ಮಂಗಳೂರು ಪೊಲೀಸರಿಂದ ನೋಟಿಸ್

ಹೆಚ್ಚಿನ ವಿಚಾರಣೆಯ ಸಮಯದಲ್ಲಿ, ಈ ಇಬ್ಬರೂ ಈ ಹಿಂದೆ ಟರ್ಕಿಯಿಂದ ಸುಮಾರು 12,50,000 ರೂ. ಮೌಲ್ಯದ 25 ಬಗೆಯ ಬಂದೂಕುಗಳ ಕಳ್ಳಸಾಗಣೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಇವರು ಒಟ್ಟು 35,00,000 ರೂ.ಗಳ ಮಾಲನ್ನು ಅಕ್ರಮವಾಗಿ ಸಾಗಣೆ ಮಾಡಿದ್ದಾರೆ. ಬಂದೂಕುಗಳ ಜೊತೆಗೆ ಎರಡು ಟ್ರಾಲಿ ಬ್ಯಾಗ್‌ಗಳನ್ನು ಕಸ್ಟಮ್ಸ್ ಆಕ್ಟ್, 1962 ರ ಸೆಕ್ಷನ್ 110 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ದಂಪತಿಗಳಾದ ಜಗಜಿತ್ ಸಿಂಗ್ ಮತ್ತು ಜಸ್ವಿಂದರ್ ಕೌರ್ ಅವರನ್ನು ಕಸ್ಟಮ್ಸ್ ಎಸಿಯ ಸೆಕ್ಷನ್ 104 ರ ಅಡಿಯಲ್ಲಿ ಬಂಧಿಸಲಾಗಿದ್ದು, ಮಗುವನ್ನು ಅವರ ಅಜ್ಜಿಗೆ ಹಸ್ತಾಂತರಿಸಲಾಗಿದೆ. ಈ ಪ್ರಕರಣದಲ್ಲಿ  ಹೆಚ್ಚಿನ ತನಿಖೆ ನಡೆಯುತ್ತಿದೆ.
 

click me!