ಜಿಮ್‌ನಲ್ಲಿ ವ್ಯಾಯಮಾ ಮಾಡುತ್ತಿದ್ದ ವೇಳೆ ನಡೆದ ದಾಳಿಯಿಂದ ತೀವ್ರಗಾಯಗೊಂಡಿದ್ದ ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿ ವರುಣ್ ರಾಜ್ ನಿಧನರಾಗಿದ್ದಾರೆ. ಆರೋಪಿ ಹೇಳಿಕೆ ಅಮೆರಿಕದಲ್ಲಿನ ಭಾರತೀಯ ವಿದ್ಯಾರ್ಥಿಗಳ ಆತಂಕ ಹೆಚ್ಚಿಸಿದೆ.
ವಾಶಿಂಗ್ಟನ್ ಡಿಸಿ(ನ.09) ಕಳೆದ 11 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿ ವರುಣ್ ರಾಜ್ ಪೂಚಾ ನಿಧನರಾಗಿದ್ದಾರೆ. ಚಿಕಾಗೋದ ವಲ್ಪೈರೈಸೋ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ, 24 ವರ್ಷದ ವರುಣ್ ರಾಜ್ ಮೇಲೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ 24ರ ಹರೆಯದ ವಿದ್ಯಾರ್ಥಿ ಜೋರ್ಡಾನ್ ಆ್ಯಂಡ್ರೆಡ್ ಅಕ್ಟೋಬರ್ 29 ರಂದು ಹಲ್ಲೆ ನಡೆಸಿದ್ದರು. ತಲೆಗೆ ತೀವ್ರವಾಗಿ ಗಾಯಗೊಂಡ ವರುಣ್ ರಾಜ್‌ನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಕಳೆದ 11 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವರುಣ್ ರಾಜ್ ಮೃತಪಟ್ಟಿದ್ದಾರೆ. ಆದರೆ ಆರೋಪಿ ಪೊಲೀಸರಿಗೆ ನೀಡಿರುವ ಹೇಳಿಕೆ ಇದೀಗ ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಆತಂಕ ಹೆಚ್ಚಿಸಿದೆ.
ಜಿಮ್‌ನಲ್ಲಿನ ಮಸಾಜ್ ಕೋಣೆಯಲ್ಲಿದ್ದ ವರುಣ್ ರಾಜ್ ಮೇಲೆ ಏಕಾಏಕಿ ಆರೋಪಿ ಜೋರ್ಡಾನ್ ಆ್ಯಂಡ್ರೆಡ್ ದಾಳಿ ನಡೆಸಿದ್ದರು. ಕಬ್ಬಿಣದ ರಾಡ್, ಜಿಮ್ ಡಂಬಲ್ಸ್ ಮೂಲಕ ತಲೆ ಮೇಲೆ ಹಲ್ಲೆ ನಡೆಸಿದ್ದರು. ಘಟನೆ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ವರುಣ್ ರಾಜ್‌ನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಇತ್ತ ಆರೋಪಿ ಜೋರ್ಡಾನ್‌ನನ್ನು ಪೊಲೀಸರು ಬಂಧಿಸಿದ್ದರು.
ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಅಂತರ್ ಕಾಲೇಜು, ವಿವಿ ಬದಲಾವಣೆಗೆ ಅಸ್ತು
ಮಸಾಜ್ ಕೋಣೆಯಲ್ಲಿ ವ್ಯಕ್ತಿಯನ್ನು ನೋಡಿದೆ. ಆತ ವಿಚಿತ್ರವಾಗಿದ್ದ. ಹೀಗಾಗಿ ಆತನ ಮೇಲೆ ಹಲ್ಲೆ ಮಾಡಿದ್ದೆ. ಆತನ ನೋಡುವಾಗಲೇ ನನ್ನ ಆಕ್ರೋಶ ಹೆಚ್ಚಾಗುತ್ತಿತ್ತು. ಆತ ಬದುಕುಳಿಯ ಬಾರದು ಎಂದೇ ದಾಳಿ ನಡೆಸಿದ್ದೇನೆ ಎಂದು ಜೋರ್ಡಾನ್ ಹೇಳಿದ್ದಾನೆ. ಆತನ ತಲೆಗೆ ಹಲ್ಲೆ ಮಾಡಿರುವುದಾಗಿ ಪೊಲೀಸ್ ವಿಚಾರಣೆಯಲ್ಲಿ ಆರೋಪಿ ಜೋರ್ಡಾನ್ ಹೇಳಿದ್ದಾನೆ.
ಈ ಹೇಳಿಕೆಯಿಂದ ಅಮೆರಿಕದಲ್ಲಿ ವ್ಯಾಸಾಂಗ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿಗಳ ಸುರಕ್ಷತೆ ಅನುಮಾನ ಹೆಚ್ಚಾಗಿದೆ. ಭಾರತೀಯ ವಿದ್ಯಾರ್ಥಿಗಳ ಮೇಲೆ ಇದೇ ರೀತಿ ದಾಳಿ ಮುಂದುವರಿಯುವ ಸಾಧ್ಯತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಕೋಟಿ ಕೋಟಿ ವೆಚ್ಚದ ಹಾಸ್ಟೆಲ್‌ಗಿಲ್ಲ ಉದ್ಘಾಟನೆ ಭಾಗ್ಯ: ಪುಂಡ ಪೋಕರಿಗಳ ಅಡ್ಡೆಯಾಗ್ತಿದೆ ಸರ್ಕಾರಿ ಕಟ್ಟಡ
ವರುಣ್ ರಾಜ್ ಸಾವಿನ ಕುರಿತು ವಲ್ಪೈರೈಸೋ ವಿಶ್ವವಿದ್ಯಾಲಯ ಕಂಬನಿ ಮಿಡಿದಿದೆ. ನಮ್ಮ ಕ್ಯಾಂಪಸ್ ವಿದ್ಯಾರ್ಥಿಯ ಸಾವು ತೀವ್ರ ನೋವು ತಂದಿದೆ. ಅವರ ಪೋಷಕರು, ಕುಟುಂಬ, ಆಪ್ತರಿಗೆ ದುಖದಲ್ಲಿ ನಾವು ಭಾಗಿಯಾಗಿದ್ದೇವೆ. ವರುಣ್ ಕುಟುಂಬದ ಜೊತೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ನಿರಂತರ ಸಂಪರ್ಕದಲ್ಲಿದೆ. ಕುಟುಂಬಕ್ಕೆ ಎಲ್ಲಾ ನೆರವು ನೀಡಲಾಗುತ್ತದೆ. ವರುಣ್ ಮೃತದೇಹ ಹಸ್ತಾಂತರಿಸಲು ವ್ಯವಸ್ಥೆ ಮಾಡಿದ್ದೇವೆ. ನಮ್ಮ ರಾಜತಾಂತ್ರಿಕ ಅಧಿಕಾರಿಗಳ ಜೊತೆಗೂ ಸಂಪರ್ಕದಲ್ಲಿದ್ದೇವೆ ಎಂದು ಲ್ಪೈರೈಸೋ ವಿಶ್ವವಿದ್ಯಾಲಯ ಹೇಳಿದೆ.