
ದೆಹಲಿ(ಅ.12) ಕೋಲ್ಕತಾ ವೈದ್ಯೆ ಪ್ರಕರಣದ ಬಳಿಕ ಎಲ್ಲೆಡೆ ಬಲಾತ್ಕಾರ ಪ್ರಕರಣಗಳು ಕೇಳಿಬರುತ್ತಿದೆ. ಅಂಕಿ ಅಂಶಗಳ ಪ್ರಕಾರ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಭೀಕರ ಘಟನೆ ನಡೆದಿದೆ. ನರ್ಸಿಂಗ್ ಯುವತಿಯನ್ನು ಬಲಾತ್ಕಾರ ಮಾಡಿ ನಡು ರಸ್ತೆಯಲ್ಲಿ ಬಿಟ್ಟು ಪರಾರಿಯಾದ ಘಟನೆ ನಡೆದಿದೆ. ಮಧ್ಯ ರಾತ್ರಿ ತೀವ್ರ ಅಸ್ವಸ್ಥಗೊಂಡಿದ್ದ ಯುವತಿಯನ್ನು ಗಮನಿಸಿದ ಭಾರತೀಯ ನೌಕಾ ಪಡೆ ಅಧಿಕಾರಿ ನೆರವಿಗೆ ಧಾವಿಸಿದ್ದಾರೆ. ಇದರ ಪರಿಣಾಮ ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಕಳೆದ ವರ್ಷ ಒಡಿಶಾದಲ್ಲಿ ನರ್ಸಿಂಗ್ ಕೋರ್ಸ್ ಪೂರೈಸಿ ದೆಹಲಿಗೆ ಆಗಮಿಸಿದ ಯುವತಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಳೆದ ವರ್ಷ ಯುವತಿ ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದಳು. ಯುವತಿ ನಾಪತ್ತೆ ಕುರಿತು ಪೋಷಕರು ಒಡಿಶಾದಲ್ಲಿ ದೂರು ದಾಖಲಿಸಿದ್ದರು. ತೀವ್ರ ಹುಡುಕಾಟದ ಬಳಿಕ ಯುವತಿ ದೆಹಲಿಯಲ್ಲಿ ಪತ್ತೆಯಾಗಿದ್ದಳು. ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿತ್ತು.
ಬಲಾತ್ಕಾರ ಪ್ರಕರಣದಲ್ಲಿ ಖ್ಯಾತ ನಟ, ಶಾಸಕ ಮುಕೇಶ್ ಅರೆಸ್ಟ್, ಸತತ 3 ಗಂಟೆ ಪೊಲೀಸರ ಡ್ರಿಲ್!
ಆದರೆ ಕೆಲ ದಿನಗಳಿಂದ ಯುವತಿಯ ಸುಳಿವು ಇರಲಿಲ್ಲ. ಪೋಷಕರಿಗೂ ಕರೆ ಮಾಡಿಲ್ಲ. ಅಕ್ಟೋಬರ್ 11ರ ಬೆಳಗಿನ ಜಾವ 3.30ಕ್ಕೆ ಭಾರತೀಯ ನೌಕಾ ಪಡೆ ಅಧಿಕಾರಿ ದೆಹಲಿಯ ಸರೈ ಕಾಲೆ ಖಾನ್ ವಲಯದಲ್ಲಿ ಯುವತಿಯೊಬ್ಬಳು ಅಸ್ವಸ್ಥಳಾಗಿ ನಡೆದಾಡುತ್ತಿರುವುದು ಗಮನಿಸಿದ್ದಾರೆ. ಈ ರಾತ್ರಿ ಯುವತಿ ಏಕಾಂಗಿಯಾಗಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಹೀಗಾಗಿ ನೌಕಾ ಪಡೆ ಅಧಿಕಾರಿ ತಕ್ಷಣವೇ ಯುವತಿ ಬಳಿ ತೆರಳಿದ್ದಾಳೆ. ಈ ವೇಳೆ ಯುವತಿ ಬಟ್ಟೆ ಹರಿದಿದೆ. ದೆಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿದೆ.
ತಕ್ಷಣವೇ ಸ್ಥಳೀಯ ಪೊಲೀಸರಿಗೆ ಅಧಿಕಾರಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ಆಸ್ಪತ್ರೆ ದಾಖಲಿಸಿದ್ದಾರೆ.ವೈದ್ಯರು ಯುವತಿ ಮೇಲೆ ಬಲಾತ್ಕಾರವಾಗಿರುವುದು ಖಚಿತಪಡಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಯವತಿಯಿಂದ ಪೊಲೀಸರು ಕೆಲ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಫಸ್ಟ್ ಡೇಟ್‌ನಲ್ಲೇ ಅಪರಿಚಿತನ ಜೊತೆ ಹುಡುಗಿ ರೂಂಗೆ ತೆರಳಲ್ಲ, ಬಲಾತ್ಕಾರ ಆರೋಪ ಖುಲಾಸೆಗೊಳಿಸಿದ ಕೋರ್ಟ್!
ಕಳೆದ ಒಂದು ವರ್ಷದಿಂದ ಯುವತಿ ದೆಹಲಿಯಲ್ಲಿ ವಾಸವಾಗಿದ್ದಾಳೆ, ಯುವತಿಯ ಪರಿಚಯಸ್ಥರೇ ಈ ಕೃತ್ಯ ಎಸಗಿರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಯುವತಿ ಸಂಪರ್ಕದಲ್ಲಿರುವವರ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ