ಹುಬ್ಬಳ್ಳಿ: ಆಯುಧ ಪೂಜೆ ದಿನವೇ ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ!

By Girish Goudar  |  First Published Oct 12, 2024, 8:25 AM IST

ಚಾಕುವಿನಿಂದ ಇರಿದು ಶಿವು ಚಂದ್ರಶೇಖರ್ ಕಮ್ಮಾರನನ್ನ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ನಿನ್ನೆ ಸುಮಾರು ರಾತ್ರಿ 11.15 ಗಂಟೆಗೆ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶಿವು ಕಮ್ಮಾರನನ್ನ ನಡುರಸ್ತೆಯಲ್ಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ದೇಹದ ತುಂಬ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. 


ಹುಬ್ಬಳ್ಳಿ(ಅ.12): ಹಳೆ ದ್ವೇಷಕ್ಕೆ ಯುವಕನ‌ನ್ನ ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದ ಘಟನೆ ಗೋಪನಕೊಪ್ಪದ ಸಂತೋಷನಗರದ ಬಳಿ ನಿನ್ನೆ(ಶುಕ್ರವಾರ) ನಡೆದಿದೆ. ಶಿವು ಚಂದ್ರಶೇಖರ್ ಕಮ್ಮಾರ (23) ಕೊಲೆಯಾದ ದುರ್ದೈವಿ. ಸುದೀಪ್ ರಾಯಾಪುರ ಕೊಲೆಗೈದ ಆರೋಪಿ. ಆಯುಧ ಪೂಜೆ ದಿನವೇ ಚಾಕುವಿನಿಂದ ಇರಿದು ಯುವಕನನ್ನ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. 

ಚಾಕುವಿನಿಂದ ಇರಿದು ಶಿವು ಚಂದ್ರಶೇಖರ್ ಕಮ್ಮಾರನನ್ನ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ನಿನ್ನೆ ಸುಮಾರು ರಾತ್ರಿ 11.15 ಗಂಟೆಗೆ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶಿವು ಕಮ್ಮಾರನನ್ನ ನಡುರಸ್ತೆಯಲ್ಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ದೇಹದ ತುಂಬ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. 

Tap to resize

Latest Videos

undefined

ಹೂವಿನಹಡಗಲಿ: ಸುಕ್ಷೇತ್ರ ಮೈಲಾರ ನದಿ ತೀರದಲ್ಲಿ ಒಂದೇ ಹಗ್ಗದಲ್ಲಿ ಯುವಕ- ಯುವತಿ ನೇಣಿಗೆ ಶರಣು!

ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಹಾಗೂ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅಶೋಕ್ ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಆರೋಪಿಗಳ ಮೇಲೆ ಫೈರಿಂಗ್‌

ಕೊಲೆ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕೊಲೆ ಆರೋಪಿಗಳಾದ ಸುದೀಪ್, ಕಿರಣ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಕೊಲೆ ಮಾಡಿ ರಾತ್ರಿ ಎಸ್ಕೇಪ್ ಆಗಿದ್ದ ಆರೋಪಿಗಳು. ಹತ್ಯೆ ನಡೆದ 6 ಗಂಟೆಯಲ್ಲಿ ಖಾಕಿ ಪಡೆ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.  

ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಯತ್ನಿಸಿದ್ದಾರೆ. ಇಬ್ಬರು ಹಂಕತರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಹಂತಕ ಸುದೀಪ್ ಮತ್ತು ಕಿರಣ್‌ನನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿಮ್ಸ್ ಆಸ್ಪತ್ರೆಗೆ ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿದ್ದಾರೆ. ಹಳೇ ಹುಬ್ಬಳ್ಳಿ ಠಟಣಾ ವ್ಯಾಪ್ತಿಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 

click me!