* ಶಿರಸಿ- ಶಿವಮೊಗ್ಗ ಹನಿಟ್ರ್ಯಾಪ್ ಪ್ರಕರಣ
* ಕೆಲಸ ಕೊಡಿಸುವುದಾಗಿ ನಂಬಿಸಿ ಕರೆಸಿಕೊಂಡರು
* ಶಿವಮೊಗ್ಗಕ್ಕೆ ಕರೆಸಿ ಬಲವಂತವಾಗಿ ಬಟ್ಟೆ ಬಿಚ್ಚಿಸಿದರು
* ಹದಿನೈದು ಲಕ್ಷ ನೀಡಲು ಬೇಡಿಕೆ ಇಟ್ಟಿದ್ದರು
ಶಿರಸಿ, ಕಾರವಾರ(ಫೆ. 03): ಶಿರಸಿಯಲ್ಲಿ ಹನಿ ಟ್ರ್ಯಾಪ್ (Honeytrap) ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು (Arrest) ಬಂಧಿಸಲಾಗಿದೆ. ಹನಿಟ್ರ್ಯಾಪ್ ಮಾಡಿ ಸಂತ್ರಸ್ತನಿಂದ 15 ಲಕ್ಷ ರೂ. ಬೇಡಿಕೆಯಿಟ್ಟಿದ್ದ(Blackmail) ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಾಹಿತಿ ಗೊತ್ತಾಗಿ 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ಶಿರಸಿ (Sirsi)ಉಂಚಳ್ಳಿಯ ಅಜಿತ್ ಶ್ರೀಕಾಂತ್ ನಾಡಿಗ್ (25), ಬನವಾಸಿ ರಸ್ತೆಯ ಗೊಲಕೇರಿ ಓಣಿಯ ಧನುಷ್ಯ ಕುಮಾರ್ ಯಾನೆ ದಿಲೀಪ್ ಕುಮಾರ್ ಶೆಟ್ಟಿ (25) ಹಾಗೂ ಶಿವಮೊಗ್ಗ (Shivamogga)ಗೋಪಾಳ ರಂಗನಾಥ್ ಬಡಾವಣೆಯ ಪದ್ಮಜಾ ಡಿ.ಎನ್. (50) ಬಂಧಿತ ಆರೋಪಿಗಳು.
Honeytrap: ಮಹಿಳೆ ಮಾತು ನಂಬಿ ಲಕ್ಷಾಂತರ ರು. ಕಳಕೊಂಡ ನಿವೃತ್ತ ಪ್ರಾಚಾರ್ಯ..!
ಆರೋಪಿ ಅಜಿತ್ ಜತೆ ಸಂತ್ರಸ್ತ ಕಳೆದ 5 ವರ್ಷದಿಂದ ಪರಿಚಯ ಹೊಂದಿದ್ದ ಈ ಕಾರಣದಿಂದ ಸರಕಾರಿ ಖಾಯಂ ಉಪನ್ಯಾಸ ಹುದ್ದೆ ಕೊಡಿಸೋದಾಗಿ ಸಂತ್ರಸ್ತನನ್ನು ಆರೋಪಿ ಅಜಿತ್ ಹಾಗೂ ಧನುಷ್ಯ ನಂಬಿಸಿದ್ದರು.
ಜನವರಿ 17ರಂದು ಸಂತ್ರಸ್ತನನ್ನು ಶಿವಮೊಗ್ಗಕ್ಕೆ ಕರೆಯಿಸಿ ಆತನನ್ನು ರೂಂ ಒಂದರಲ್ಲಿ ಕೂಡಿಹಾಕಿದ್ದರು. ಬಳಿಕ ಆತನನ್ನು ನಗ್ನಗೊಳಿಸಿ ಮಹಿಳೆಯ ಜತೆ ರಾಸ ಲೀಲೆ ನಡೆಸಿದಂತೆ ಫೋಟೊ ಹಾಗೂ ವಿಡಿಯೋ ಚಿತ್ರೀಕರಿಸಿದ್ದರು. 15 ಲಕ್ಷ ರೂ.ನೀಡದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದರು. ಅಲ್ಲದೇ, ಜನವರಿ 18ರಂದು ಆತನ ತಂದೆಯ ಬಳಿ ತೆರಳಿ ಫೋಟೊ, ವಿಡಿಯೋ ತೋರಿಸಿ ಪುತ್ರ ಜೀವಂತವಾಗಿ ಬೇಕಂದ್ರೆ ಹಣ ನೀಡುವಂತೆ ಧಮ್ಕಿ ಹಾಕಿದ್ದರು.
ಈ ಸಂದರ್ಭದಲ್ಲಿ ಸುಳ್ಳು ಕರಾರು ಪತ್ರ, ಬ್ಲ್ಯಾಂಕ್ ಚೆಕ್ ಕೂಡಾ ಬರೆಯಿಸಿಕೊಂಡ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂತ್ರಸ್ತನ ದೂರಿನ ಹಿನ್ನೆಲೆ ತನಿಖೆ ಕೈಗೆತ್ತಿಕೊಂಡಿದ್ದ ಶಿರಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಡಿ.ಎಸ್.ಪಿ. ರವಿ ನಾಯ್ಕ್ ಮಾರ್ಗದರ್ಶನದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಿತಾತಕ ತಾಯಿ -ಮಗಳು: ತಾಯಿ -ಮಗಳು ಹನಿಟ್ರ್ಯಾಪ್ ದಂಧೆ ಮಾಡ್ತಿದ್ದ ಈ ತಂಡ ಪುರುಷರನ್ನ ಪುಸಲಾಯಿಸಿ ಮೋಸದ ಬಲೆಗೆ ಬೀಳಿಸಿ ನಗ್ನ ವಿಡಿಯೋ ಮಾಡ್ಕೊಂಡು ಯಾಮಾರಿಸುತ್ತಿದ್ದರು ಏಕಾಂತದಲ್ಲಿರುವಾಗ ಎಂಟ್ರಿ ಕೊಡೋ ಯುವಕರು ಪೊಲೀಸರೆಂದು ಹೇಳಿ ಹೆದರಿಸ್ತಿದ್ರು. ಇದು ವೇಶ್ಯಾಗೃಹ. ಎಫ್‍ಐಆರ್ ಹಾಕ್ತೀವಿಅಂತ ಅವಾಜ್ ಹಾಕ್ತಾರೆ. ಸ್ಪಾಟ್ ಸೆಟ್ಲ್‍ಮೆಂಟ್‍ಗೆ ಆಫರ್ ಕೊಡ್ತಾರೆ. ವಿಷ್ಯ ಹೊರಬಂದ್ರೆ ಮರ್ಯಾದೆ ಅಂತ ಕೇಳಿದಷ್ಟು ಹಣ ಕೊಟ್ಟು ಮನೆ ಸೇರ್ತಿದ್ರು ಮೋಸಕ್ಕೊಳಗಾದವರು. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ನಿಮ್ಮ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ನಿಮ್ಮ ಕುಟುಂಬದವರಿಗೂ ಕಳಿಸುತ್ತೇವೆಂದು ಹೆದರಿಸುತ್ತಿದ್ರು. ಇದರಿಂದ ಬೇಸತ್ತ ವ್ಯಕ್ತಿಗಳು ಖಾಕಿಗೆ ವಿಚಾರ ಮುಟ್ಟಿಸಿದಾಗ ರಿಯಲ್ ಪೊಲೀಸರು 13 ಜನರನ್ನು ಬಂಧಿಸಿದ್ದ ಪ್ರಕರಣ ಚಿಕ್ಕಮಗಳೂರಿನಿಂದ ವರದಿಯಾಗಿತ್ತು.
ಈ ಗ್ಯಾಂಗ್ ಹೆಚ್ಚಾಗಿ ಟಾರ್ಗೆಟ್ ಮಾಡ್ತಿದ್ದದ್ದು ಮಧ್ಯ ವಯಸ್ಕ ಹಾಗೂ ಆರ್ಥಿಕವಾಗಿ ಚೆನ್ನಾಗಿರೋ ವ್ಯಕ್ತಿಗಳನ್ನಷ್ಟೆ. ಅವರ ಪರ್ಸನಲ್ ಡೇಟಾವನ್ನ ಕಲೆಹಾಕಿ ಸೈಲೆಂಟಾಗಿ ಹನಿಟ್ರಾಪ್ ದಂಧೆಗೆ ಕೆಡವಿಕೊಳ್ತಿದ್ರು. ವಿಷಯ ತಿಳಿದ ಕೂಡಲೇ ಕ್ಷಿಪ್ರ ಕಾರ್ಯಚರಣೆ ನಡೆಸಿದ ಕಾಫಿನಾಡ ನಗರ ಖಾಕಿಗಳು 6 ಗಂಡಸರು, 7 ಹೆಂಗಸರು ಸೇರಿದಂತೆ 13 ಜನರನ್ದನು ಬಂಧಿಸಲಾಗಿತ್ತು. ಚಿಕ್ಕಮಗಳೂರು ನಗರ ಸೇರಿದಂತೆ ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಕಿರಾತಕರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ದಂಧೆಯನ್ನು ತಾಯಿ ಮಗಳು ವ್ಯವಸ್ಥಿತವಾಗಿ ನಿರ್ವಹಿಸಿಕೊಂಡು ಬಂದಿದ್ದರು. ಇಡೀ ರಾಜ್ಯದಲ್ಲಿ ಜಾಲ ಸಕ್ರಿಯವಾಗಿತ್ತು.