ಕೊಲೆ ಕೇಸಿಗಾಗಿ ಕೆರೆ ನೀರು ಖಾಲಿ: ತಾವೇ ಹೂತಿದ್ದ ಶವ ತೆಗೆಯಲು ಪೊಲೀಸ್‌ ಕಸರತ್ತು

By Govindaraj S  |  First Published Jul 19, 2022, 4:00 AM IST

ಹಳೇ ಕೊಲೆ ಪ್ರಕರಣವೊಂದರ ಬೆನ್ನು ಬಿದ್ದಿರುವ ಪೊಲೀಸರು 8 ವರ್ಷಗಳ ಹಿಂದೆ ತಾವೇ ಹೂತಿದ್ದ ಮೃತದೇಹ ಹೊರತೆಗೆಯಲು ಕೆರೆ ನೀರನ್ನು ಖಾಲಿ ಮಾಡಿಸುತ್ತಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ವರದಿಯಾಗಿದೆ.


ಕೋಲಾರ (ಜು.19): ಹಳೇ ಕೊಲೆ ಪ್ರಕರಣವೊಂದರ ಬೆನ್ನು ಬಿದ್ದಿರುವ ಪೊಲೀಸರು 8 ವರ್ಷಗಳ ಹಿಂದೆ ತಾವೇ ಹೂತಿದ್ದ ಮೃತದೇಹ ಹೊರತೆಗೆಯಲು ಕೆರೆ ನೀರನ್ನು ಖಾಲಿ ಮಾಡಿಸುತ್ತಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ವರದಿಯಾಗಿದೆ. ಜೂ.7ರಂದು ಮುಳಬಾಗಿಲಿನಲ್ಲಿ ನಗರಸಭೆ ಸದಸ್ಯ ಜಗನ್‌ಮೋಹನ್‌ ರೆಡ್ಡಿ ಹತ್ಯೆಯಾಗಿತ್ತು. ಆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ 8 ವರ್ಷದ ಹಿಂದಿನ ಪೇಂಟರ್‌ ರಮೇಶ್‌ ಕೊಲೆ ರಹಸ್ಯ ಬಯಲಾಗಿದೆ. ಈತನ ಶವ 2015ರ ಏ.30ರಂದು ನಿರ್ಜನ ಪ್ರದೇಶವೊಂದರಲ್ಲಿ ಸಿಕ್ಕಿತ್ತು. ವಾರಸುದಾರರಿಲ್ಲದ ಕಾರಣ ನಾಗನಗುಂಟೆ ಕೆರೆ ಬಳಿ ಪೊಲೀಸರೇ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಬಳಿಕ ಆತ ಪೇಂಟರ್‌ ರಮೇಶ್‌ (31) ಎಂಬುದು ಗೊತ್ತಾಗಿತ್ತು.

ಇದೀಗ ಜಗನ್‌ಮೋಹನ ರೆಡ್ಡಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬ ರಮೇಶ್‌ನದ್ದು ಹತ್ಯೆ ಎಂದು ಬಾಯಿಬಿಟ್ಟಿದ್ದಾನೆ. 2015ರ ಏ.28ರಂದು ಮುತ್ಯಾಲಪೇಟೆ ಗಂಗಮ್ಮನ ಜಾತ್ರೆ ವೇಳೆ ಜಗನ್‌ಮೋಹನ್‌ ರೆಡ್ಡಿ ಹಾಗೂ ರಮೇಶ್‌ ನಡುವೆ ಘರ್ಷಣೆಯಾಗಿತ್ತು. ಆ ಸಿಟ್ಟಿನಲ್ಲಿ ರಮೇಶ್‌ ಕೊಲೆ ಮಾಡಲು ಸೂರಿ, ಅಪ್ಪಿ ಎನ್ನುವವರಿಗೆ ಜಗನ್‌ 1 ಲಕ್ಷ ರು. ಸುಪಾರಿ ನೀಡಿದ್ದ. ರಮೇಶ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ವಾಹನಕ್ಕೆ ನಾನೇ ಚಾಲಕನಾಗಿದ್ದೆ ಎಂದು ಜಗನ್‌ ಹತ್ಯೆ ಆರೋಪಿ ಜಗನ್ನಾಥ್‌ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಮೇಶ್‌ ಮೃತದೇಹ ತೆಗೆದು ಮರಣೋತ್ತರ ಪರೀಕ್ಷೆ ಮುಂದಾಗಿದ್ದಾರೆ. ಅವರು ಶವ ಹೂತಾಗ ಕೆರೆಯಲ್ಲಿ ನೀರಿರಲಿಲ್ಲ. ಈಗ ಭಾರಿ ಮಳೆಯಿಂದ ಕೆರೆ ಭರ್ತಿಯಾಗಿದೆ. ಶವ ಹೊರತೆಗೆಯಲು ಕೆರೆ ನೀರು ಖಾಲಿ ಮಾಡುತ್ತಿದ್ದಾರೆ.

Tap to resize

Latest Videos

ಹುಡ್ಗಿಗೆ ಪ್ರೀತಿ ಸಂದೇಶ ಕಳುಹಿಸಿದ್ದಕ್ಕೆ ಯುವಕನ ಕೊಲೆ, ಆರೋಪಿಗಳು ಅಂದರ್

ಪೊಲೀಸರು ಜೂನ್‌ 7ರಂದು ಮುಳಬಾಗಿಲು ಪಟ್ಟಣದಲ್ಲಿ ಭೀಕರವಾಗಿ ಕೊಲೆಯಾಗಿದ್ದ ನಗರಸಭೆ ಸದಸ್ಯ ಜಗನ್‌ಮೋಹನ್‌ ರೆಡ್ಡಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಹೊತ್ತಲ್ಲೇ 8 ವರ್ಷ ಹಿಂದೆ ಕೊಲೆಯಾಗಿದ್ದ ಪೇಂಟರ್‌ ರಮೇಶ್‌ ಎಂಬ ಅಮಾಯಕನ ಕೊಲೆ ರಹಸ್ಯ ಬಯಲಾಗಿದೆ. 2015ರ ಏ.30ರಂದು ಲಿಂಗಾಪುರದ ನಿರ್ಜನ ಪ್ರದೇಶದಲ್ಲಿ ಸಿಕ್ಕಿದ್ದ ಅಪರಿಚಿತ ಶವಕ್ಕೆ ಪೊಲೀಸರೇ ನಾಗನಕುಂಟೆ ಕೆರೆ ಬಳಿಯೇ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಬಳಿಕ ಆತ ಗಣೇಶಪಾಳ್ಯದ ಪೇಂಟರ್‌ ರಮೇಶ್‌(31) ಎಂದು ತಿಳಿದುಬಂದಿತ್ತು. ಇದೀಗ ಜಗನ್‌ಮೋಹನ್‌ ರೆಡ್ಡಿ ಕೊಲೆ ಪ್ರಕರಣದ ಆರೋಪಿ ಜಗನ್ನಾಥ್‌ ಈ ಕೊಲೆ ವಿಚಾರವಾಗಿ ಬಾಯಿಬಿಟ್ಟಿದ್ದಾನೆ.

ದಶಕದ ಹಿಂದಿನ ಮರ್ಡರ್ ಕೇಸ್ ಭೇದಿಸಿದ ವಿಜಯಪುರ ಪೊಲೀಸ್ರು, ಕುಡಿದ ನಶೆಯಲ್ಲಿ ಬಾಯ್ಬಿಟ್ಟ ಕಹಾನಿ

2015ರ ಏ.28ರಂದು ಮುತ್ಯಾಲಪೇಟೆ ಗಂಗಮ್ಮನ ಜಾತ್ರೆ ಆರ್ಕೆಸ್ಟ್ರಾ ವೇಳೆ ಪಾನಮತ್ತನಾಗಿದ್ದ ಪೇಂಟರ್‌ ರಮೇಶ್‌, ಡ್ಯಾನ್ಸ್‌ ಮಾಡುತ್ತಾ ಜಗನ್‌ ಮೋಹನ್‌ ರೆಡ್ಡಿ ಭುಜಕ್ಕೆ ಮೈ ತಾಕಿಸಿದ್ದು ಇಬ್ಬರ ನಡುವೆ ಜಗಳವಾಗಿದೆ. ಜಗನ್‌ ಮೋಹನ್‌ ರೆಡ್ಡಿ ಇದೇ ಸಿಟ್ಟಿನಲ್ಲಿ ಸೂರಿ ಹಾಗು ಅಪ್ಪಿ ಎನ್ನುವವರಿಗೆ ಪೇಂಟರ್‌ ರಮೇಶ್‌ನನ್ನು ಕೊಲೆ ಮಾಡುವಂತೆ ಜಗನ್‌ ಮೋಹನ್‌ರೆಡ್ಡಿ ತಲಾ 1 ಲಕ್ಷದ ಸುಪಾರಿ ನೀಡಿದ್ದನಂತೆ. ಈ ಇಬ್ಬರು ಏ.30ರಂದು ರಮೇಶನನ್ನು ಲಿಂಗಾಪುರ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅವರಿಬ್ಬರು ಈ ಸಂದರ್ಭ ನನ್ನನ್ನ ಡ್ರೈವರ್‌ ಆಗಿ ವಾಹನಕ್ಕೆ ಬಳಸಿಕೊಂಡಿದ್ದರು ಎಂಬ ಜಗನ್ನಾಥ್‌ ತಿಳಿಸಿದ್ದಾನೆ. ಪೊಲೀಸರು ಇದೀಗ ಸೂರಿ ಹಾಗು ಅಪ್ಪಿ ಎನ್ನುವ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ಕೇಸ್‌ನ ಮರು ತನಿಖೆ ಆರಂಭಿಸಿದ್ದು ಶವದ ಮರಣೋತ್ತರ ಪರೀಕ್ಷೆಗಾಗಿ ಕೆರೆಯ ನೀರನ್ನು ಆವಿಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

click me!