Bengaluru: ಬಿಜಿಎಸ್ ಕಾಲೇಜು ಮಹಿಳಾ ಪ್ರೊಫೆಸರ್ ಆತ್ಮಹತ್ಯೆಗೆ ಶರಣು

By Govindaraj S  |  First Published Jul 19, 2022, 12:55 AM IST

ಬಿಜಿಎಸ್ ಕಾಲೇಜು ಮಹಿಳಾ ಪ್ರೊಫೆಸರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಜ್ಞಾನಜ್ಯೋತಿ ನಗರದ ಕದಂಬ ಲೇಔಟ್‍ನಲ್ಲಿ ನಡೆದಿದೆ. ಮೃತರನ್ನು ಚೈತ್ರಾ ಎಂದು ಗುರುತಿಸಲಾಗಿದೆ. 


ಬೆಂಗಳೂರು (ಜು.19): ಬಿಜಿಎಸ್ ಕಾಲೇಜು ಮಹಿಳಾ ಪ್ರೊಫೆಸರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಜ್ಞಾನಜ್ಯೋತಿ ನಗರದ ಕದಂಬ ಲೇಔಟ್‍ನಲ್ಲಿ ನಡೆದಿದೆ. ಮೃತರನ್ನು ಚೈತ್ರಾ ಎಂದು ಗುರುತಿಸಲಾಗಿದೆ. ಇವರು ಬಿಜಿಎಸ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 

ಆತ್ಮಹತ್ಯೆಗೂ ಮುನ್ನ ಚೈತ್ರಾ ಡೆತ್ ನೋಟ್ ಬರೆದಿದ್ದು, ಇದೀಗ ಇದನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ. ನಾನು ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರು ಡೆತ್ ನೋಟ್‍ನಲ್ಲಿ ಉಲ್ಲೇಖಿಸಿದ್ದಾರೆ. ಚೈತ್ರಾ ಅವರು 23 ವರ್ಷದ ಹಿಂದೆ ಗುರುಪ್ರಸಾದ್ ಅವರನ್ನು ವರಿಸಿದ್ದಾರೆ. ಚೈತ್ರಾ ಪತಿ ಸಿ.ಟಿ ಗುರುಪ್ರಸಾದ್ ಅವರು ಶಿಗ್ಗಾವಿಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದಲ್ಲಿ ರಿಜಿಸ್ಟಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

Tap to resize

Latest Videos

ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಸೆರೆ ಹಿಡಿದು ಬೆದರಿಸಿದ್ದ ಅರೋಪಿಗಳು ಅರೆಸ್ಟ್

ಪತಿ ಹಾವೇರಿಯಲ್ಲಿರಬೇಕಾದರೆ ಚೈತ್ರಾ ಅವರು ಕದಂಬ ಲೇಔಟ್‍ನಲ್ಲಿರುವ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇತ್ತ ಪತಿ ಎಂದಿನಂತೆ ಕರೆ ಮಾಡಿದಾಗ ಚೈತ್ರಾ ಕಾಲ್ ಸ್ವೀಕರಿಸಲಿಲ್ಲ. ಕೂಡಲೇ ಗುರುಪ್ರಸಾದ್ ಅವರು ಚೈತ್ರಾ ಸಹೋದರನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮನೆಗೆ ಬಂದ ಚೈತಾ ಸಹೋದರ ಬಾಗಿಲು ಮುರಿದು ನೋಡಿದಾಗ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಚೈತ್ರಾ ಶವ ಪತ್ತೆಯಾಗಿದೆ.ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದೂರು ದಾಖಲಾಗಿದೆ.

click me!