ಮಗಳ ಮದ್ವೆ ಇದೆ ಕುಡೀಬೇಡ ಅಂದಿದ್ದೆ ತಪ್ಪಾಯ್ತು, ನೇಣು ಬಿಗಿದು ಸಾವು ಕಂಡ ತಂದೆ!

By Santosh NaikFirst Published Nov 29, 2022, 6:32 PM IST
Highlights

ಮಗಳ ಮದುವೆಯ ದಿನ ಕುಡಿಯಲು ಮದ್ಯ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ತಂದೆಯೊಬ್ಬ ಮದುವೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರ ಪ್ರದೇಶದ ಮೋಹನ್‌ಲಾಲ್‌ ಗಂಜ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

ನವದೆಹಲಿ (ನ.29): ಮುಂದೆ ನಿಂತು ಮದುವೆ ಜವಾಬ್ದಾರಿ ನಿರ್ವಹಿಸಬೇಕಿದ್ದ ತಂದೆಯೇ ಮಗಳ ಮದುವೆಗೆ ತನ್ನ ಸಾವಿನಿಂದ ಅಡ್ಡಿಯಾದ ಘಟನೆ ನಡೆದಿದೆ. ಉತ್ತರ ಪ್ರದೇಶದ ಮೋಹನ್‌ಲಾಲ್‌ ಗಂಜ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಲಕ್ನೋದ ಮೋಹನ್‌ಲಾಲ್‌ ಗಂಜ್‌ ಪ್ರದೇಶದಲ್ಲಿ ಮಗಳ ಮದುವೆಗಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು. ಸಂಜೆಯ ವೇಳೆಗೆ ಮದುವೆ ದಿಬ್ಬಣ ಬರಲಿದೆ ಎನ್ನುವ ನಿಟ್ಟಿನಲ್ಲಿ ಮದುವೆ ಮನೆಯಲ್ಲಿ ಆನಂದದ ವಾತಾವರಣ ತುಂಬಿತ್ತು. ಆದರೆ, ಈ ಸಮಯದಲ್ಲಿ ವಧುವಿನ ತಂದೆ 55 ವರ್ಷದ ಸುನೀಲ್‌ ದ್ವಿವೇದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆ ಮನೆಯ ಹಾಲ್‌ನಲ್ಲಿ ಅಪ್ಪನ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡ ಪುತ್ರಿಯ ದುಃಖಕ್ಕೆ ಮಿತಿಯೇ ಇರಲಿಲ್ಲ. ಒಂದೆಡೆ ಇಷ್ಟೆಲ್ಲಾ ಕಷ್ಟಪಟ್ಟು ಮಾಡುವ ಮದುವೆ ಸಂಭ್ರಮ ನಿಂತುಹೋದ ನೋವು ಒಂದೆಡೆಯಾದರೆ, ಮದುವೆ ಮನೆಯಲ್ಲಿ ಅಪ್ಪ ಹೀಗೆ ಮಾಡಿಬಿಟ್ಟು ಸಾವಿಗೆ ಶರಣಾದರಲ್ಲ ಎನ್ನುವ ದುಃಖ ಇನ್ನೊಂದು ಕರೆಯಿತ್ತು. ಕೆಲವೇ ಕ್ಷಣದಲ್ಲಿ ಮದುವೆ ಸಂಭ್ರಮದಲ್ಲಿದ್ದ ಹಾಲ್‌, ಸೂತಕದ ಮನೆಯ ರೀತಿ ಕಂಡುಬಂದಿತು. ಆ ಬಳಿಕ ತಕ್ಷಣವೇ ಪೊಲೀಸರಿಗೆ ಇದರ ಮಾಹಿತಿ ನೀಡಲಾಯಿತು.

ಪೊಲೀಸರ ಪ್ರಕಾರ, ಸುನೀಲ್‌ ದ್ವಿವೇದಿ ಸ್ಥಳೀಯ ಮೋಹನ್‌ಲಾಲ್‌ ಗಂಜ್‌ ಪ್ರದೇಶದ ತಿಕ್ರಾ ಗ್ರಾಮದ ನಿವಾಸಿಯಾಗಿದ್ದಾರೆ. ವೃತ್ತಿಯಲ್ಲಿ ಅವರು ರೈತರು. ಆದರೆ, ದಿನವೀಡಿ ಕಂಠಪೂರ್ತಿ ಕುಡಿದುಕೊಂಡೇ ಇರುತ್ತಿದ್ದರು. ಇದರ ನಡುವೆ ಮಗಳ ಮದುವೆ ಭಾನುವಾರ ನಿಶ್ಚಯವಾಗಿತ್ತು. ಒಂದೆಡೆ ಮನೆಯಲ್ಲಿ ಮಗಳ ಮದುವೆ ಸಿದ್ಧತೆಗಳು ಭರದಿಂದ ಸಾಗಿದ್ದಲ್ಲದೆ, ದೂರದೂರಿನ ಸಂಬಂಧಿಕರೆಲ್ಲರೂ ಬಂದಿದ್ದರು. ಪ್ರತಿದಿನದಂತೆ ಶನಿವಾರ ಸಂಜೆ ಕೂಡ ಸುನಿಲ್‌ ಕುಡಿತದ ಅಮಲಿನಲ್ಲಿ ಮನೆಗೆ ಬಂದಿದ್ದರು. ಇದನ್ನು ನೋಡಿದ ಕುಟುಂಬಸ್ಥರು ಕೂಡ ಮಗಳ ಮದುವೆಗೆ ಅಡ್ಡಿಪಡಿಸಬೇಡಿ ಎಂದು ಹೇಳಿದ್ದಾರೆ. ಸಂಬಂಧಿಕರು ಎಲ್ಲರೂ ಬಂದಿದ್ದು, ಭಾನುವಾರ ಮದ್ಯ ಸೇವನೆ ಮಾಡಬೇಡಿ ಎಂದು ಹೇಳಿದ್ದರು.ಇದಾದ ನಂತರ ಎಲ್ಲರೂ ಭಾನುವಾರ ಮುಂಜಾನೆ ಎದ್ದು ಮದುವೆಯ ತಯಾರಿ ಆರಂಭ ಮಾಡಿದ್ದರು. ಆದರೆ, ಎಲ್ಲಿಯೂ ಸುನೀಲ್‌ ಅವರ ಸುಳಿವು ಇದ್ದಿರಲಿಲ್ಲ.

ಹಗರಿಬೊಮ್ಮನಹಳ್ಳಿ: ವಿಷ ಸೇವಿಸಿ ಶಿಕ್ಷಕ ಆತ್ಮಹತ್ಯೆ, ಡೆತ್‌ನೋಟ್‌ನಲ್ಲಿ ಏನಿದೆ?

ಬಳಿಕ ಭಾನುವಾರ ಸುನೀಲ್‌ ಅವರಿಗಾಗಿ ಇಡೀ ಮದುವೆಯ ಮನೆಯಲ್ಲಿ ಶೋಧ ಕಾರ್ಯ ಮಾಡಿದ್ದಾರೆ. ಈ ವೇಳೆ ಮನೆಯ ಹಿಂಬದಿಯಲ್ಲಿ ನಿರ್ಮಿಸಿದ್ದ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುನೀಲ್ ಶವ ಪತ್ತೆಯಾಗಿದೆ. ನೇಣು ಕುಣಿಕೆಯಿಂದ ನೇತಾಡುತ್ತಿರುವುದನ್ನು ನೋಡಿ ಎಲ್ಲರೂ ಒಂದು ಕ್ಷಣ ಆಘಾತಗೊಂಡಿದ್ದರು.  ತರಾತುರಿಯಲ್ಲಿ ಕುಟುಂಬಸ್ಥರು ಆತನನ್ನು ಸಂಬಂಧಿಕರ ಸಹಾಯದಿಂದ ಕುಣಿಕೆಯಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ವೈದ್ಯರು ಸುನೀಲ್‌ ದ್ವಿವೇದಿ ಸಾವು ಕಂಡಿದ್ದನ್ನು ಖಚಿತಪಡಿಸಿದ್ದರು. 

ಬಿಟ್‌ಕಾಯಿನ್ ಹೂಡಿಕೆ ನಷ್ಟ: ಮಗಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ತಂದೆ!

ಬಳಿಕ ಸುನೀಲ್‌ ದ್ವಿವೇದಿ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಮೋಹನ್‌ಲಾಲ್‌ ಗಂಜ್‌ನ ಇನ್ಸ್‌ಪೆಕ್ಟರ್‌ ಕುಲದೀಪ್‌ ದುಬೆ ತಿಳಿಸಿದ್ದಾರೆ.  ಪ್ರಾಥಮಿಕ ತನಿಖೆಯಲ್ಲಿ ಮದ್ಯ ಸೇವಿಸಿದ ವಿಚಾರವಾಗಿ ನಡೆದ ಜಗಳದಿಂದಾಗಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

click me!