Bengaluru: ಕೇರಳ ಯುವತಿ ಮೇಲೆ ರ್ಯಾಪಿಡೋ ಚಾಲಕ ಸೇರಿ ಇಬ್ಬರಿಂದ ಗ್ಯಾಂಗ್‌ ರೇಪ್

By Sathish Kumar KH  |  First Published Nov 29, 2022, 1:13 PM IST

ರಾಜ್ಯ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಬಳಿಯಲ್ಲೊಂದು ಪೈಶಾಚಿಕ ಕೃತ್ಯ ನಡೆದಿದೆ. ಕೆರಳ ಮೂಲದ ಯುವತಿ ಮೇಲೆ ಇಬ್ಬರು ಯುವಕರಿಂದ ಗ್ಯಾಂಗ್ ರೇಪ್ ನಡೆದಿದ್ದು,  ಘಟನೆ ನಡೆದು 72 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.


ಬೆಂಗಳೂರು (ನ.29): ರಾಜ್ಯ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಬಳಿಯಲ್ಲೊಂದು ಪೈಶಾಚಿಕ ಕೃತ್ಯ ನಡೆದಿದೆ. ಕೆರಳ ಮೂಲದ ಯುವತಿ ಮೇಲೆ ಇಬ್ಬರು ಯುವಕರಿಂದ ಗ್ಯಾಂಗ್ ರೇಪ್ ನಡೆದಿದೆ. ಈ ಪ್ರಕರಣ ಬೇಧಿಸಿದ ಮೂರು ದಿನದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಶುಕ್ರವಾರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಿಟಿಎಂ ಲೇಔಟ್ ನ ಸಂಸ್ಥೆಯೊಂದರಲ್ಲಿ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಗ್ಯಾಂಗ್‌ ರೇಪ್‌ (Gang Rape) ನಡೆದಿದೆ. ಶುಕ್ರವಾರ ರಾತ್ರಿ ಬಿಟಿಎಂ ಲೇಔಟ್ (BTM Layout)ನಿಂದ ನಿಲಾದ್ರಿ ನಗರಕ್ಕೆ ರ್ಯಾಪಿಡೋ ಬೈಕ್ ಬುಕ್ಕಿಂಗ್ ಮಾಡಿದ್ದಾರೆ. ಆದರೆ, ರ್ಯಾಪಿಡ್ ಬೈಕ್ (Rapido Bike) ಪಿಕ್ ಅಪ್ ವೇಳೆ ಯುವತಿ ಮದ್ಯಪಾನ ಮಾಡಿದ್ದಳು. ನಿಲಾದ್ರಿ ನಗರ ತಲುಪುವ ಹೊತ್ತಿಗೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಡ್ರಾಪ್ ಪಾಯಿಂಟ್ ತಲುಪಿಸದೇ ಬೇರೆಡೆ ಕರೆದೊಯ್ದಿದ್ದಾನೆ. 

Tap to resize

Latest Videos

Kerala Crime: ಕಾರಿನಲ್ಲೇ 19 ವರ್ಷದ ಮಾಡೆಲ್‌ ಮೇಲೆ ಗ್ಯಾಂಗ್‌ ರೇಪ್: ಮಹಿಳೆ ಸೇರಿ ನಾಲ್ವರ ವಶಕ್ಕೆ

ನಂತರ ತನ್ನ ಸ್ನೇಹಿತನ ನೆರವಿನಿಂದ ನಿಲಾದ್ರಿ ನಗರದ ತನ್ನ ರೂಪಿಗೆ ಕರೆದೊಯ್ದು ಗ್ಯಾಂಗ್ ರೇಪ್ ಮಾಡಿದ್ದಾನೆ. ರ್ಯಾಪಿಡೋ ಬೈಕ್ ಸವಾರ ಮತ್ತು ಸ್ನೇಹಿತನಿಂದ ರೇಪ್ ಆಗಿದೆ. ಪ್ರಜ್ಞೆ ಬಂದ ಬಳಿಕ ಯುವತಿಯನ್ನು ಬಿಟ್ಟು ಕಳುಹಿಸಿದ್ದ ಆರೋಪಿಗಳು. ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ಕಳುಹಿಸಿದ್ದರು. ಆದರೆ, ಘಟನೆ ಬಳಿಕ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಆರೋಪಿಗಳ ಸೆರೆಹಿಡಿಯಲಾಗಿದೆ. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!