ಮಗಳ ಬರ್ತ್‌ಡೇ ಸಮಯದಲ್ಲಿ ವಿಡಿಯೋ ಶೂಟ್ ಮಾಡುವ ಕಾರಣಕ್ಕೆ ವಿಡಿಯೋಗ್ರಾಫರ್ ಜೊತೆ ನಡೆದ ವಿವಾದ ತಾರಕಕ್ಕೇರಿ, ಕೊನೆಗೆ ವಿಡಿಯೋಗ್ರಾಫರ್‌ನ ಹತ್ಯೆಯಲ್ಲಿ ಕೊನೆಗೊಂಡಿದೆ.
ನವದೆಹಲಿ (ಮಾ.1): ಬರ್ತ್‌ಡೇ ಪಾರ್ಟಿ ವೇಳೆ ವಿಡಿಯೋ ಶೂಟ್ ಮಾಡುವಾಗ ಬ್ಯಾಟರಿ ಖಾಲಿಯಾಗಿ ವಿಡಿಯೋ ನಿಂತುಹೋಗಿತ್ತು. ಇದರಿಂದ ಸಿಟ್ಟಿಗೆದ್ದ ವ್ಯಕ್ತಿ, ವಿಡಿಯೋಗ್ರಾಫರ್‌ನನ್ನೇ ಗುಂಡಿಟ್ಟು ಕೊಂದ ಘಟನೆ ಬಿಹಾರದಲ್ಲಿ ನಡೆದಿದೆ. 22 ವರ್ಷದ ವಿಡಿಯೋಗ್ರಾಫರ್ ಸುಶೀಲ್ ಕುಮಾರ್ ಸಾಹ್ನಿ ಕೊಲೆಯಾಗಿರುವ ವ್ಯಕ್ತಿ. ಬರ್ತ್‌ಡೇ ಪಾರ್ಟಿಯಲ್ಲಿ ಈತನ ಬಾಯಿಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಬುಧವಾರ ತಡರಾತ್ರಿ ಬಿಹಾರದ ದರ್ಬಂಗಾ ಜಿಲ್ಲೆಯ ಮಖ್ನಾಹ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಖ್ನಾಹ್ ಗ್ರಾಮದ ರಾಕೇಶ್ ಸಾಹ್ನಿ ತನ್ನದೇ ಗ್ರಾಮದ ವಿಡಿಯೋಗ್ರಾಫರ್ ಆಗಿದ್ದ ಸುಶೀಲ್ ಕುಮಾರ್‌ನನ್ನು ತನ್ನ ಮಗಳ ಬರ್ತ್‌ಡೇ ಸಂಭ್ರಮದ ವಿಡಿಯೋ ಮಾಡುವಂತೆ ತಿಳಿಸಿದ್ದ. ಕಾರ್ಯಕ್ರಮದ ವಿಡಿಯೋ ಶೂಟ್ ಮಾಡುವ ವೇಳೆಯಲ್ಲಿಯೇ ಸುಶೀಲ್ ಅವರ ಕ್ಯಾಮೆರಾದ ಬ್ಯಾಟರಿ ಡೆಡ್ ಅಂದರೆ ಖಾಲಿಯಾಗಿ ರೆಕಾರ್ಡಿಂಗ್ ಸ್ಥಗಿತವಾಗಿತ್ತು. ಇದರಿಂದ ಸಿಟ್ಟಿಗೆದ್ದ ರಾಕೇಶ್, ಸುಶೀಲ್ ಕುಮಾರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ, ಕೊನೆಗೆ ಆತನ ಬಾಯಿಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿದ್ದಾನೆ.
ತಕ್ಷಣವೇ ಸುಶೀಲ್‌ನಲ್ಲಿ ದರ್ಭಾಂಗ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆಯ ವೇಳೆ ಈತ ಸಾವು ಕಂಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು, ಲೆಹ್ರಾಯ್‌ಸರಾಯ್ ಮುಖ್ಯರಸ್ತೆಯನ್ನು ತಡೆದು, ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಅಂದಾಜು ಹಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬರೋಬ್ಬರಿ 1 ಕಿಲೋಮೀಟರ್ ದೂರ ಎರಡೂ ಕಡೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ಹಂತದಲ್ಲಿ ಸ್ಥಳಕ್ಕೆ ಆಗಮಿಸಿದ ಬೇನಿಪುರ್ ಎಸ್‌ಡಿಪಿಓ ಸುಮಿತ್ ಕುಮಾರ್, ಪ್ರತಿಭಟನಾಕಾರರು ಸಮಾಧಾನ ಮಾಡಿ ಟ್ರಾಫಿಕ್ ಅನ್ನು ಕ್ಲಿಯರ್ ಮಾಡಿದ್ದರು.
ಬೆಂಗಳೂರು ಬಾಂಬ್ ಸ್ಫೋಟ, ರಾಮೇಶ್ವರಂ ಕೆಫೆಯೇ ಟಾರ್ಗೆಟ್ ಯಾಕೆ?
ಅಕ್ರಮ ಮದ್ಯ ದಂಧೆಯಲ್ಲಿ ಭಾಗಿಯಾಗಿರುವ ಶಂಕಿತ ರಾಕೇಶ್‌ನನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕುಮಾರ್ ಗ್ರಾಮಸ್ಥರಿಗೆ ಭರವಸೆ ನೀಡಿದರು. "ಈ ಸಂಬಂಧ ವಿಚಾರಣೆಗಾಗಿ ನಾವು ಮೂವರನ್ನು ವಶಕ್ಕೆ ಪಡೆದಿದ್ದೇವೆ ಮತ್ತು ಆರೋಪಿಗಳನ್ನು ಹಿಡಿಯಲು ದಾಳಿ ನಡೆಸಲಾಗುತ್ತಿದೆ" ಎಂದು ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬಿಗ್ ಟ್ವಿಸ್ಟ್, ಐಇಡಿ ಬಳಸಿರುವ ಬಗ್ಗೆ ಪೊಲೀಸರ ಶಂಕೆ!