ಶಿವಮೊಗ್ಗ: ಮನೆಯ ಟೆರೇಸ್ ಮೇಲೆ ವ್ಯಕ್ತಿಯ ಮೃತ ದೇಹ ಪತ್ತೆ; ಉದ್ಯೋಗ ಸಿಗದೆ ಆತ್ಮಹತ್ಯೆ!

Published : Mar 01, 2024, 07:22 PM IST
ಶಿವಮೊಗ್ಗ: ಮನೆಯ ಟೆರೇಸ್ ಮೇಲೆ ವ್ಯಕ್ತಿಯ ಮೃತ ದೇಹ ಪತ್ತೆ; ಉದ್ಯೋಗ ಸಿಗದೆ ಆತ್ಮಹತ್ಯೆ!

ಸಾರಾಂಶ

ಮನೆಯ ಟೆರೇಸ್‌ ಮೇಲಿನ ಸಿಂಟೆಕ್ಸ್ ಸ್ಟ್ಯಾಂಡಿಗೆ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರುನಗರದಲ್ಲಿ ನಡೆದಿದೆ. ಮಧುಸೂದನ್(55) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.

ಶಿವಮೊಗ್ಗ (ಮಾ.1): ಮನೆಯ ಟೆರೇಸ್‌ ಮೇಲಿನ ಸಿಂಟೆಕ್ಸ್ ಸ್ಟ್ಯಾಂಡಿಗೆ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರುನಗರದಲ್ಲಿ ನಡೆದಿದೆ.

ಮಧುಸೂದನ್(55) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಸಾಗರದ ಹೆಸರಾಂತ ಬೇಕರಿ ಒಂದರ ಉದ್ಯೋಗಿಯಾಗಿದ್ದ ಮಧುಸೂದನ್ ಇತ್ತಿಚೆಗೆ  ಕೆಲಸ ಬಿಟ್ಟಿದ್ದ ಎನ್ನಲಾಗಿದೆ. ಬೇಕರಿಯಲ್ಲಿ ಕೆಲಸ ಬಿಟ್ಟ ಬಳಿಕ ಬೇರೆಡೆ ಸಿಕ್ಕಿರಲಿಲ್ಲ. ಉದ್ಯೋಗಕ್ಕಾಗಿ ಸಿರ್ಸಿಗೆ ಹೋಗಬೇಕಾಗಿತ್ತು.

ಗದಗ: ಬ್ರೇಕ್ ಫೇಲ್ ಆಗಿ ಬಸ್ ನಿಲ್ದಾಣದ ಬಳಿ ಡಿವೈಡರ್‌ಗೆ ಡಿಕ್ಕಿಯಾದ ಸಾರಿಗೆ ಬಸ್!

ಉದ್ಯೋಗ ಅರಸಿಕೊಂಡು ಸಿರ್ಸಿಗೆ ಹೋಗಲಾಗದೆ, ಸ್ಥಳೀಯವಾಗಿ ಯಾವುದೇ ಉದ್ಯೋಗವಿಲ್ಲದೆ ಜೀವನದಲ್ಲಿ ಜುಗುಪ್ಸೆಗೊಂಡು ತನ್ನ ಸಂಬಂಧಿಕರ ಮನೆಯ ಟೆರೇಸ್ ಮೇಲಿನ ಸಿಂಟೆಕ್ಸ್ಕ ಸ್ಟ್ಯಾಂಡಿಗೆ ನೇಣುಬಿಗಿದುಕೊಂಡುಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮುಂದುವರಿದ ಬಲಿ; ಕಿಲ್ಲರ್ ಬಿಎಂಟಿಸಿ ಬಸ್‌ಗೆ ಮತ್ತೊಬ್ಬ ಬೈಕ್ ಸವಾರ ಸಾವು!

ಟೆರೇಸ್ ಮೇಲೆ ಮೃತದೇಹ ಕಂಡು ಗಾಬರಿಗೊಂಡ ಸಂಬಂಧಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ಸಾಗರಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಫೇಸ್‌ಬುಕ್ ಚಿಟ್ಟೆಯ ಮುಖ ನೋಡಿ ಹನಿಹೀರಲು ಬಂದವನೇ ಟ್ರ್ಯಾಪ್ , ಯುವಕನ ಮೇಲೆ ಹಲ್ಲೆ, ಹಣಕ್ಕೆ ಬೇಡಿಕೆ ಇಟ್ಟವರು ಎಸ್ಕೇಪ್!
10 ವರ್ಷ ಪ್ರೀತಿಸಿದವಳಿಗೆ ಮೋಸ, ₹4.5 ಲಕ್ಷ ವಂಚನೆ, ಬೇರೆ ಮದುವೆಗೆ ಮುಂದಾದ ಯುವಕನ ಮನೆಮುಂದೆ ಪ್ರಿಯತಮೆ ಗಲಾಟೆ!