
ಬೆಂಗಳೂರು (ಫೆ.1): ಮಹಿಳಾ ಸಹೋದ್ಯೋಗಿ ಮೇಲೆ ಹಲ್ಲೆ ನಡೆಸಿರುವ ಆರೋಪ ಹಿನ್ನೆಲೆ ಕರ್ನಾಟಕದ ಐಪಿಎಸ್ ಪೊಲೀಸ್ ಅಧಿಕಾರಿಯೊಬ್ಬರನ್ನು ತಮಿಳನಾಡಿನ ಈರೋಡ್ ಜಿಲ್ಲೆಯ ಗೋಬಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಬಂಧಿತರು. ಕಲಬುರಗಿ ಎಸ್ಪಿ ಆಗಿರುವ ಐಪಿಎಸ್ ಅಧಿಕಾರಿ ಸಹದ್ಯೋಗಿ ಮಹಿಳೆ ಜೊತೆ ತಿರುಚ್ಚಿಗೆ ತೆರಳಿದ್ದ ವೇಳೆ ತಿರುಚ್ಚಿಯ ಶ್ರೀರಂಗಂನಲ್ಲಿ ಮಹಿಳೆ ಹಾಗೂ ಅರುಣ್ ಮಧ್ಯೆ ಜಗಳವಾಗಿದೆ. ಸ್ಥಳೀಯ ಪೊಲೀಸರು ರಾಜೀ ಮಾಡಿ ಕಳಿಸಿದ್ದರು. ಆ ಬಳಿಕ ಸುಜಾತರನ್ನು ಹುಟ್ಟೂರಿಗೆ ಕರೆದೊಯ್ದಿದ್ದ ಅರುಣ್ ರಂಗರಾಜನ್, ಮನೆಯಲ್ಲಿಯೂ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿರುವ ಮಹಿಳೆ.
ಅಂದು ಮಕ್ಕಳಿಗಾಗಿ ಧರಣಿ ಕೂತಿದ್ದ ಐಪಿಎಸ್ ಅಧಿಕಾರಿ ಅರುಣ್, ಇಂದು ಅನೈತಿಕ ಸಂಬಂಧದಲ್ಲಿ ಸಿಕ್ಕಿಬಿದ್ದ!
ಐಪಿಎಸ್ ಅಧಿಕಾರಿ ವಿರುದ್ಧ ಮಹಿಳೆ ಪತಿ ದೂರು:
ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್, ಪತ್ನಿಯನ್ನು ಅಕ್ರಮವಾಗಿ ಬಂಧನಲ್ಲಿಟ್ಟುಕೊಂಡು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಮಹಿಳೆಯ ಪತಿ 2023 ಮಾರ್ಚ್ ನಲ್ಲಿ ಈ ಬಗ್ಗೆ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಸೆಕ್ಷನ್ 323, 324,498,376 ಅಡಿ ದೂರು ದಾಖಲಿಸಿದ್ದರು. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸರು ಚಾರ್ಜ್ ಶೀಟ್ ಹಾಕಿದ್ರು.
ಕಳೆದ ಜ.16ರಂದು ಚಾರ್ಜ್ ಶೀಟ್ ಸಲ್ಲಿಕೆ ಆಗಿತ್ತು. ಈ ಮಧ್ಯೆ ಮತ್ತೆ ಸುಜಾತರನ್ನ ತಮಿಳುನಾಡಿಗೆ ಕರೆದೊಯ್ದಿದ್ದ ಅರುಣ್ ರಂಗರಾಜನ್. ತಿರುಚ್ಚಿಯ ಶ್ರೀರಂಗಂನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ಸುಜಾತ ಗೋಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು, ಅರುಣ್ ರಂಗರಾಜನ್ ರನ್ನ ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ. ಬಳಿಕ ಕೋರ್ಟ್‌ನಲ್ಲಿ ಜಾಮೀನು ಅರುಣ್ ರಂಗರಾಜನ್ ಬಿಡುಗಡೆಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ