ಸಾಮಾಜಿಕ ಜಾಲಾತಾಣದಲ್ಲಿ ಅಶ್ಲೀಲ ವಿಡಿಯೋ, ಫೋಟೋ ಅಪ್‌ಲೋಡ್‌ ಮಾಡುತ್ತಿದ್ದ ವ್ಯಕ್ತಿ ಬಂಧನ

Published : Jun 01, 2022, 07:31 PM ISTUpdated : Jun 01, 2022, 07:32 PM IST
ಸಾಮಾಜಿಕ ಜಾಲಾತಾಣದಲ್ಲಿ ಅಶ್ಲೀಲ ವಿಡಿಯೋ, ಫೋಟೋ ಅಪ್‌ಲೋಡ್‌ ಮಾಡುತ್ತಿದ್ದ ವ್ಯಕ್ತಿ ಬಂಧನ

ಸಾರಾಂಶ

ಆರೋಪಿ ಮೆಸೆಂಜರ್  ಮುಖಾಂತರ  ಅಪ್ರಾಪ್ತ ಯುವತಿಯರ ಪೋಟೋಸ್ ವಿಡಿಯೋಸ್ ಗಳನ್ನ ಕಳಿಸಿಕೊಟ್ಟು ಯುವತಿಯರಿಗೆ ಲೈಂಗಿಕ ಉತ್ತೇಜನ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ

ಬೆಂಗಳೂರು (ಜೂ. 01): ಸಾಮಾಜಿಕ ಜಾಲಾತಾಣದಲ್ಲಿ ಅಶ್ಲೀಲ ವಿಡಿಯೋ, ಪೊಟೊ ಆಪ್‌ಲೋಡ್ ಮಾಡುತ್ತಿದ್ದ  ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 40 ವರ್ಷದ ಪುರುಷೋತ್ತಮ್ ಬಂಧಿತ ಆರೋಪಿ. ಆರೋಪಿ ಮೂಲತಃ ಮಡಿವಾಳದವನಾಗಿದ್ದು ಜೋಮೊಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.ಆಗ್ನೇಯ ವಿಭಾಗ ಸೆನ್ ಪೊಲೀಸರಿಂದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಫೇಸ್‌ಬುಕ್ ಅಕೌಂಟಿನಿಂದ ಸುಂದರ ಯುವತಿಯರಿಗೆ ಪ್ರೆಂಡ್  ರಿಕ್ವೆಸ್ಟ್ ಕಳಿಸಿಕೊಡುತ್ತಿದ್ದ. ಭಾರತಿಯ ಹಾಗೂ ವಿದೇಶಿ ಯುವತಿಯರಿಗೆ ರಿಕ್ವೆಸ್ಟ್ ಕಳಿಸಿ ಗೆಳೆತನ ಸಂಪಾದಿಸಿಕೊಳ್ತಿದ್ದ. 

ಬಳಿಕ ಮೆಸೆಂಜರ್  ಮುಖಾಂತರ  ಅಪ್ರಾಪ್ತ ಯುವತಿಯರ ಪೋಟೋಸ್ ವಿಡಿಯೋಸ್ ಗಳನ್ನ ಕಳಿಸಿಕೊಟ್ಟು ಯುವತಿಯರಿಗೆ ಲೈಂಗಿಕ ಉತ್ತೇಜನ ನೀಡುತ್ತಿದ್ದ. ಈ ಸಂಬಂಧ ಆರೋಪಿ ಬಗ್ಗೆ ಯುವತಿಯರು ದೂರು ದಾಖಲಿಸಿದ್ದರು.  ಘಟನೆ ಸಂಬಂದ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು  ಸದ್ಯ ಆರೋಪಿಯನ್ನ ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. 

ನಗ್ನ ಚಿತ್ರ ಚಿತ್ರೀಕರಿಸಿ ಬ್ಲಾಕ್ ಮೇಲ್:  ಇನ್ನು ಮತ್ತೊಂದು ಪ್ರಕರಣದಲ್ಲಿ ಡೇಟಿಂಗ್ ಆಪ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯರ ನಗ್ನ ಚಿತ್ರ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಯುವತಿ ಆರೋಪಿಸಿದ್ದಾರೆ. ಈ ಕುರಿತು ಸೆಂಟ್ರಲ್ ಸಿ ಇ ಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೈಬರ್ ಕಿರತಕರು ಕಾಟಕ್ಕೆ ಕಾಲೇಜು ವಿದ್ಯಾರ್ಥಿನಿ ಕಂಗೆಟ್ಟು ಹೋಗಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಡೇಟಿಂಗ್ ಆಪ್ ಮೂಲಕ ಪರಿಚಯ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಲಾಗಿದೆ. ಕಾಲೇಜು ವಿದ್ಯಾರ್ಥಿಗಳೆ ಇವರ ಟಾರ್ಗೆಟ್ ಆಗಿದ್ದು, ಯುವತಿಗೆ ಮತ್ತೊಂದು ಯುವತಿ ಹೆಸರಿನಲ್ಲಿ ಡೇಟಿಂಗ್ ಆಪ್ ಮೂಲಕ ಪರಿಚಯ ಮಾಡಿಕೊಂಡಿದ್ದರು. 

ಇದನ್ನೂ ಓದಿ

ಬಳಿಕ ಸ್ನಾಪ್ ಚಾಟ್ ನಲ್ಲಿ ಚಾಟ್ ಮಾಡಲು ಕದಿಮರು ರಿಕ್ವೆಸ್ಟ್ ಮಾಡಿ ಯುವತಿ ಜೊತೆ ಚರ್ಚೆ ಮಾಡಿ ನಾನು ಸಹ ಯುವತಿ ಎಂದು ನಂಬಿಸಿ ವಂಚನೆ ಮಾಡಿದ್ದಾರೆ. ಸ್ನಾಪ್‌ಚಾಟ್‌ನಲ್ಲಿ ನಾನು ನಗ್ನವಾಗುತ್ತನೆ ನೀನು ಸಹ ಹಾಗೇ ಮಾಡು ಎಂದು  ಅನಾಮಿಕರೊಬ್ಬರು ಹೇಳಿದ್ದು ಅಲ್ಲದೇ ಒಂದು ಬಾರಿ‌ ವಿಡಿಯೋ ಕಳುಹಿಸಿದರೆ ಅದು ನಾನು ನೋಡಿದ ತಕ್ಷಣ ಡಿಲಿಟ್ ಅಗುತ್ತೆ  ಎಂದು ನಂಬಿಸಿದ್ದರು. 

ಇದನ್ನೂ ಓದಿ

ಬಳಿಕ ಇನ್ನೊಂದು ಮೊಬೈಲಿನಲ್ಲಿ ಚಾಲಾಕಿಗಳು ವಿಡಿಯೋ ಚಿತ್ರಿಕರೆಸಿಕೊಂಡು   ಬ್ಲಾಕ್ ಮೇಲ್‌ಗೆ ಮುಂದಾಗಿದ್ದರು.  2021 ಸೆಪ್ಟೆಂಬರ್ ನಲ್ಲಿ ಬ್ಲಾಕ್ ಮೇಲ್ ಮಾಡಿದ್ದರು.  ನಂತರ ಯುವತಿ ಮನವಿ ಮಾಡಿಕೊಂಡ ಬಳಿಕ ಮೇವರೆಗೂ ಸುಮ್ಮನೆ ಇದ್ದರು. ಸದ್ಯ ಈಗ ಮತ್ತೆ ನಿಮ್ಮ ವಿಡಿಯೋ ನನ್ನ ಬಳಿ ಇದೆ ಎಂದು  ಅನಾಮಿಕ ಯುವಕ ಬ್ಲಾಕ್ ‌ಮೇಲ್ ಮಾಡುತ್ತಿದ್ದು ಯುವತಿ ದೂರು ದಾಖಲಿಸಿದ್ದಾಳೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ