ಚಿಕ್ಕೋಡಿ: ಎಂಟು ವರ್ಷದ ಮಗಳ ಜತೆ ತಾಯಿ ಆತ್ಮಹತ್ಯೆ

By Suvarna News  |  First Published Jun 1, 2022, 6:04 PM IST

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದಲ್ಲಿ ಎಂಟು ವರ್ಷದ ಮಗಳ ಜೊತೆ ತಾಯಿ ಆತ್ಮಹತ್ಯೆ  ಮಾಡಿಕೊಂಡಿದ್ದಾರೆ.


ಚಿಕ್ಕೋಡಿ (ಮೇ 01): ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದಲ್ಲಿ ಎಂಟು ವರ್ಷದ ಮಗಳ ಜೊತೆ ತಾಯಿ ಆತ್ಮಹತ್ಯೆ (Suicide)  ಮಾಡಿಕೊಂಡಿದ್ದಾರೆ.  ಅಮ್ಮ ಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸವಿತಾ ಮದಗೋಂಡ ಬೆಳಗಲಿ (24) ಹಾಗೂ ಪವಿತ್ರಾ ಮದಗೋಂಡ ಬೆಳಗಲಿ (8) ಮೃತ ದುರ್ದೈವಿಗಳು. ಕೌಟುಂಬಿಕ ಕಲಹಕ್ಕೆ ಬೇಸತ್ತು ಅಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಸವಿತಾಳಿಗೆ ಬುದ್ಧಿವಾದ ಹೇಳಿದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಾಲ್ಕು ದಿನಗಳ ಹಿಂದೆ ತಾಯಿಯ ಊರಿಗೆ ಹೋಗುವುದಾಗಿ ಹೇಳಿ  ಸವಿತಾ ತೆರಳಿದ್ದರು. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ. 

Tap to resize

Latest Videos

ಸವಿತಾ ಮದುವೆಯಾಗಿ 7 ವರ್ಷ ಆಗಿತ್ತು. ಆದರೆ ಸವಿತಾ ಗಂಡ ದಿನನಿತ್ಯ ಕುಡಿದು ಗಲಾಟೆ ಮಾಡುವದು ಆಕೆಗೆ ಬಡಿಯುವದು ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಸವಿತಾ ಬಳಿ ಇದ್ದ ಮೊಬೈಲ್ ಫೋನ್‌ನಿಂದ ಬೇರೆ ಅವರ ಜೊತೆ ಮಾತನಾಡ್ತೀಯಾ ಎಂದು ಗಂಡ ಅನುಮಾನ ಪಡುತ್ತಿದ್ದನಂತೆ‌. ಹೀಗಾಗಿ ಪದೇ ಪದೇ ಇಬ್ಬರ ಮಧ್ಯ ಗಲಾಟೆ ನಡೆಯುತ್ತಿತ್ತು, ಕಳೆದ ಕೆಲದಿನಗಳ ಹಿಂದೆ ಸವಿತಾ ಮನೆಯವರು ಬಂದು ರಾಜಿ ಪಂಚಾಯತ್ ಮಾಡಿಸಿದ್ದಾರೆ. ನಂತರ ನಾನು ತಾಯಿ ಮನೆಗೆ ಹೋಗಿ ಬರುತ್ತೇನೆ ಎಂದು‌ ಮಗಳ ಜೊತೆ ಹೋದವಳು ಮಗಳ ಜೊತೆ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎರಡು ದಿನ ಬಳಿಕ ಸ್ಥಳೀಯರು ಬಾವಿಯಲ್ಲಿ ಶವಗಳನ್ನು ನೋಡಿ ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಪ್ರೀತಿಸಿ ಕೈಕೊಟ್ಟ ಹುಡುಗಿ, ಪ್ರೇಯಸಿಗೆ ಖರ್ಚು ಮಾಡಿದ ಲೆಕ್ಕ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆ

ಗಂಡನ ಮಾನಸಿಕ ಹಿಂಸೆ ತಾಳದೇ ಪತ್ನಿ ಆತ್ಮಹತ್ಯೆ: ಪತಿಯ ನಿರಂತರ ಚುಚ್ಚು ಮಾತುಗಳು, ಮಾನಸಿಕ ಹಿಂಸೆ ತಾಳದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಗೆ ಸಮೀಪದ ಮರ್ಲಾನಹಳ್ಳಿಯಲ್ಲಿ ಸೋಮವಾರ ನಡೆದಿದೆ. ಘಟನೆ ಕುರಿತು ಮೃತ ಗೃಹಿಣಿಯ ತಂದೆ ಅನುಮಾನ ವ್ಯಕ್ತಪಡಿಸಿ ತಮ್ಮ ಪುತ್ರಿಗೆ ಆಕೆಯ ಗಂಡ ಕಿರುಕುಳ ನೀಡಿದ್ದು, ಸಾವು ಅನುಮಾನಸ್ಪದವಾಗಿದೆ ಎಂದು ಇಲ್ಲಿನ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮರ್ಲಾನಹಳ್ಳಿ ಗ್ರಾಮದ ರಾಘವೇಂದ್ರ ಸಿಂಗ್‌ ರಜಪೂತ ಅವರ ಪತ್ನಿ ಗಾಯಿತ್ರಿಬಾಯಿ ಮೃತಪಟ್ಟವರು. ಮೇ 21ರಂದು ಪತಿಯ ಒಪ್ಪಿಗೆ ಪಡೆದು ಲಿಂಗಸ್ಗೂರುಗೆ ವಿವಾಹಕ್ಕೆ ಬಂದಿದ್ದರೂ ಪತಿ ದೂರವಾಣಿಯಲ್ಲಿ ಚುಚ್ಚು ಮಾತುಗಳಿಂದ ಮಾನಸಿಕ ಹಿಂಸೆ ನೀಡುತ್ತಿದ್ದನು. ಮೇ 28ರಂದು ಗಂಡನ ಮನೆಗೆ ತೆರಳಿದ್ದ ಗಾಯಿತ್ರಿಬಾಯಿ, ಮೇ 30ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ದೂರವಾಣಿಯಲ್ಲಿ ತಿಳಿಸಿದರು. ಖುದ್ದಾಗಿ ತೆರಳಿದಾಗ ನೇಣು ಹಾಕಿಕೊಂಡು ಯಾವುದೇ ಸಾಕ್ಷ್ಯಗಳಿಲ್ಲ. ಮಗಳ ಈ ಸಾವಿನ ಬಗ್ಗೆ ಸಂಶಯವಿದ್ದು, ತನಿಖೆ ನಡೆಸಬೇಕು ಎಂದು ಮೃತರ ತಂದೆ ಅಮೃತ್‌ ಸಿಂಗ್‌ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ:  ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿದ ಪತ್ನಿ!

click me!