ನಾನು ಡ್ರಗ್ಸ್‌ ಸೇವಿಸಲ್ಲ : ಆರೋಪ ತಳ್ಳಿ ಹಾಕಿದ ಖ್ಯಾತ ಗಾಯಕ

Kannadaprabha News   | Asianet News
Published : Aug 30, 2020, 10:25 AM ISTUpdated : Aug 30, 2020, 10:32 AM IST
ನಾನು ಡ್ರಗ್ಸ್‌ ಸೇವಿಸಲ್ಲ : ಆರೋಪ ತಳ್ಳಿ ಹಾಕಿದ ಖ್ಯಾತ ಗಾಯಕ

ಸಾರಾಂಶ

ನಾನು ಡ್ರಗ್ ವ್ಯಸನಿಯಲ್ಲ. ನನ್ನ ಮೇಲಿನ ಆರೋಪದಲ್ಲಿ ಯಾವುದೇ ರೀತಿಯಾದ ಹುರುಳಿಲ್ಲ. ಸುಮ್ಮನೇ ಆರೋಪ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಖ್ಯಾತ ಗಾಯಕ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು (ಆ.30):  ‘ಖ್ಯಾತ ಗಾಯಕ ರಘು ದೀಕ್ಷಿತ್‌ ಡ್ರಗ್ಸ್‌ ತೆಗೆದುಕೊಳ್ಳುತ್ತಾರೆ’ ಎಂದು ಚಿತ್ರೋದ್ಯಮಿ ಪ್ರಶಾಂತ್‌ ಸಂಬರಗಿ ಗಂಭೀರವಾಗಿ ಆರೋಪ ಮಾಡಿದ್ದು, ಇದನ್ನು ರಘು ದೀಕ್ಷಿತ್‌ ಬಲವಾಗಿ ತಳ್ಳಿ ಹಾಕಿದ್ದಾರೆ.

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಸಂಬರಗಿ ಅವರು, ‘ಮಾದಕ ದ್ರವ್ಯ ಜಾಲ ಒಂದು ರೀತಿಯಲ್ಲಿ ಭಯೋತ್ಪಾದನೆ ಇದ್ದಂತೆ. ಇದಕ್ಕೆ ಕಡಿವಾಣ ಹಾಬೇಕಿದೆ. ಬೆಂಕಿ ಇಲ್ಲದೆ, ಹೊಗೆ ಆಡುವುದಿಲ್ಲ. ಚಿತ್ರರಂಗದಲ್ಲಿ ಕೆಲವರು ಮಾದಕ ವ್ಯಸನಿಗಳಾಗಿದ್ದಾರೆ’ ಎಂದು ನೇರವಾಗಿ ಆರೋಪ ಮಾಡಿ, ‘ರಘು ದೀಕ್ಷಿತ್‌ ಅವರು ಡ್ರಗ್‌ ಸೇವನೆ ಮಾಡುತ್ತಾರೆ’ ಎಂದು ಆರೋಪಿಸಿದ್ದರು.

ಡ್ರಗ್ಸ್‌ ಮಾಫಿಯಾ: ಸಂಗೀತ ನಿರ್ದೇಶಕನ ಮೇಲೆ ಚಿತ್ರೋದ್ಯಮಿಯಿಂದ ಗಂಭೀರ ಆರೋಪ

ಈ ಆರೋಪಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ದೀಕ್ಷಿತ್‌, ‘ನನಗೂ ಸಂಬರಗಿ ಅವರಿಗೂ ಯಾವುದೇ ಸಂಬಂಧ ಇಲ್ಲ. ನಾನು ಚಿಕ್ಕ ತಂತ್ರಜ್ಞ. ಹೀಗಾಗಿ ನಾನು ಈಗ ಅವರ ಆರೋಪಕ್ಕೆ ಪ್ರತಿಯಾಗಿ ದ್ವೇಷ ಕಟ್ಟಿಕೊಂಡು ಸಮರ ಮಾಡುವುದಕ್ಕೆ ಸಮಯ ಇಲ್ಲ. ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. 

ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ ಇಂದ್ರಜಿತ್ ಬಿಚ್ಚಿಟ್ಟ ರಹಸ್ಯ..!..

ನಾನು ಏನು, ನನ್ನ ವ್ಯಕ್ತಿತ್ವ ಎಂಥದ್ದು ಎಂಬುದು ನನ್ನ ಸ್ನೇಹಿತರು ಮತ್ತು ಹತ್ತಿರದವರಿಗೆ ಗೊತ್ತಿದೆ. ಆದರೆ ಆಧಾರ ರಹಿತವಾಗಿ ನನ್ನ ಹೆಸರು ಈ ಪ್ರಕರಣದಲ್ಲಿ ತೆಗೆದಿದ್ದು ಯಾಕೆ? ಯಾರ ಒತ್ತಡ ಮತ್ತು ಯಾವ ಕಾರಣಕ್ಕೆ ನನ್ನ ಹೆಸರು ಹೇಳಿದ್ದಾರೆ ಎಂಬುದನ್ನು ಪ್ರಶಾಂತ್‌ ಅವರೇ ಸ್ಪಷ್ಟನೆ ನೀಡಬೇಕು. ಅದೊಂದೇ ನನ್ನ ಬೇಡಿಕೆ. ಯಾಕೆಂದರೆ ಆರೋಪ ಮಾಡಿದವರೇ ವಿವರಣೆ ನೀಡುವ ಮೂಲಕ ವಾಸ್ತವ ತಿಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್, ದರ್ಶನ್‌ಗೆ ಜೈಲಲ್ಲೊಂದು ಶಾಕ್, ಕೋರ್ಟ್‌ನಲ್ಲೊಂದು ಆಘಾತ!
ದಂಪತಿ, ಪಾಲಿಕೆ ಅಧಿಕಾರಿಗಳ ಕಿರುಕುಳಕ್ಕೆ ಟೆಕ್ಕಿ ದುರಂತ ಸಾವು, ಡೆಟ್‌ನೋಟ್‌ನಲ್ಲಿ ಶಾಕಿಂಗ್ ಮಾಹಿತಿ!