ಆರೋಪಿ ಚಂದ್ರಮೋಹನ್ ಮೃತ ಅನುರಾಧಾ ರೆಡ್ಡಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಮತ್ತು ನಂತರ ಆಕೆಯ ದೇಹವನ್ನು ವಿಲೇವಾರಿ ಮಾಡಲು ಹಲವಾರು ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ (ಮೇ 25, 2023): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಇನ್ನೂ ಮರೆತಿಲ್ಲ. ಈಗ ಹೈದರಾಬಾದ್‌ನಲ್ಲೂ ಅದೇ ರೀತಿ ಹತ್ಯೆ ಪ್ರಕರಣ ವರದಿಯಾಗಿದೆ. ಶ್ರದ್ಧಾ ವಾಕರ್ ಹತ್ಯೆಯಂತೆಯೇ ಹೈದರಾಬಾದ್ ಪೊಲೀಸರು ಮಹಿಳೆಯನ್ನು ಕೊಂದ ವ್ಯಕ್ತಿಯನ್ನು ಬುಧವಾರ ಬಂಧಿಸಿದ್ದಾರೆ. ಆರೋಪಿಯನ್ನು ಬಿ.ಚಂದ್ರ ಮೋಹನ್ (48) ಎಂದು ಗುರುತಿಸಲಾಗಿದೆ.
ಆರೋಪಿ ಚಂದ್ರಮೋಹನ್ ಮೃತ ಅನುರಾಧಾ ರೆಡ್ಡಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಮತ್ತು ನಂತರ ಆಕೆಯ ದೇಹವನ್ನು ವಿಲೇವಾರಿ ಮಾಡಲು ಹಲವಾರು ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. "ಮೇ 17 ರಂದು, ಅಫ್ಜಲ್ ನಗರದ ಸಮುದಾಯ ಭವನದ ಎದುರು, ಮೂಸಿ ನದಿಯ ಸಮೀಪವಿರುವ ಕಸವನ್ನು ಎಸೆಯುವ ಸ್ಥಳದಲ್ಲಿ, ತೀಗಲ್‌ಗುಡ ರಸ್ತೆಯ ಪಕ್ಕದಲ್ಲಿ, ಕಪ್ಪು ಕವರ್‌ನಲ್ಲಿ ಅಪರಿಚಿತ ಮಹಿಳೆಯ ತಲೆ ಪತ್ತೆಯಾಗಿದೆ ಎಂದು ಜಿಎಚ್‌ಎಂಸಿ ಕಾರ್ಯಕರ್ತರೊಬ್ಬರು ನಮಗೆ ದೂರು ನೀಡಿದ್ದರು" ಎಂದು ಆಗ್ನೇಯ ವಲಯ ಡಿಸಿಪಿ ಸಿ.ಎಚ್ ರೂಪೇಶ್ ಎಎನ್‌ಐಗೆ ತಿಳಿಸಿದ್ದಾರೆ.
ಇದನ್ನು ಓದಿ: ಸಹೋದರಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನ ಮೇಲೆ ಚಾಕು ಹಾಕಿದ ಯುವಕ
ಅಲ್ಲದೆ, "ನಾವು (ಪೊಲೀಸರು) ಈ ವಿಷಯದ ತನಿಖೆಗಾಗಿ ಒಟ್ಟು ಎಂಟು ತಂಡಗಳನ್ನು ರಚಿಸಿದ್ದೇವೆ. ಒಂದು ವಾರದಲ್ಲಿ ವಿಷಯವನ್ನು ವಿಶ್ಲೇಷಿಸಿದ ನಂತರ ನಮಗೆ ಒಬ್ಬ ಆರೋಪಿ ಸಿಕ್ಕಿದ್ದಾನೆ. ಆರೋಪಿಯ ವಿಚಾರಣೆಯ ನಂತರ, ಮೃತಳನ್ನು ವೈ. ಅನುರಾಧಾ ರೆಡ್ಡಿ ಎಂದು ಗುರುತಿಸಲಾಗಿದೆ. ಆಕೆಯ ವಯಸ್ಸು ವಯಸ್ಸು 55 ವರ್ಷ’’ ಎಂದು ತಿಳಿಸಿದ್ದಾರೆ.
ಹಾಗೆ, ಆರೋಪಿಯು ಮೃತಳೊಂದಿಗೆ ಸಂಬಂಧವನ್ನು ಹೊಂದಿದ್ದನು. ಅಲ್ಲದೆ, ಆರೋಪಿಯು ಆಕೆಯ ಮನೆಯ ನೆಲಮಹಡಿಯಲ್ಲಿನ ಒಂದು ಫೋರ್ಷನ್‌ನಲ್ಲಿ ನೆಲೆಸಿದ್ದನು .2018 ರಿಂದ ಆರೋಪಿ ಅನುರಾಧಾ ರೆಡ್ಡಿ ಎಂಬ ಮಹಿಳೆಯಿಂದ ಸುಮಾರು ₹ 7 ಲಕ್ಷಗಳನ್ನು ತೆಗೆದುಕೊಂಡಿದ್ದು, ಆದರೆ ಆ ಹಣ ವಾಪಸ್ ಕೊಟ್ಟಿರಲಿಲ್ಲ. ಈ ಸಂಬಂಧ ಆಕೆ ಹಲವು ಬಾರಿ ಹಣ ವಾಪಸ್ ಮಾಡುವಂತೆ ಮನವಿ ಮಾಡಿದ್ರು. ಬಳಿಕ, ಆಕೆ ಒತ್ತಡ ನೀಡಲು ಆರಂಭಿಸಿದಾಗ ಆಕೆಯ ವರ್ತನೆಯಿಂದ ಜಿಗುಪ್ಸೆ ಹೊಂದಿದ ಆರೋಪಿ ಈ ಪ್ಲ್ಯಾನ್ ಮಾಡಿದ್ದಾನೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಛೀ ಪಾಪಿ: ಅಪ್ರಾಪ್ತ ಮಲಮಗಳ ಮೇಲೆ ಹಲವು ಬಾರಿ ಅತ್ಯಾಚಾರ; ಕೊನೆಗೂ ಜೈಲು ಪಾಲಾದ!
ಆ ಪ್ಲ್ಯಾನ್‌ನಂತೆ ಆರೋಪಿ ಮೇ 12 ರಂದು ಮಹಿಳೆಯನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 12ರಂದು ಮಧ್ಯಾಹ್ನ ಆರೋಪಿಯು ಆಕೆಗೆ ಹಣ ಕೊಡುವ ವಿಚಾರದಲ್ಲಿ ಜಗಳ ತೆಗೆದು ಚಾಕುವಿನಿಂದ ಹಲ್ಲೆ ನಡೆಸಿ ಆಕೆಯ ಎದೆ ಮತ್ತು ಹೊಟ್ಟೆಯ ಮೇಲೆ ಇರಿದು ಗಾಯಮಾಡಿದ್ದಾರೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯು ದೇಹವನ್ನು ವಿಲೇವಾರಿ ಮಾಡಲು ಎರಡು ಕಲ್ಲು ಕತ್ತರಿಸುವ ಯಂತ್ರಗಳನ್ನು (ಸಣ್ಣ) ಖರೀದಿಸಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ. "ಆ ನಂತರ ಆರೋಪಿಯು ದೇಹವನ್ನು ವಿಲೇವಾರಿ ಮಾಡಲು ಎರಡು ಕಲ್ಲು ಕತ್ತರಿಸುವ ಯಂತ್ರಗಳನ್ನು (ಸಣ್ಣ) ಖರೀದಿಸಿ ಮೃತದೇಹದಿಂದ ತಲೆ ಕಡಿದು ಕಪ್ಪು ಪಾಲಿಥೀನ್ ಕವರ್‌ನಲ್ಲಿ ಇರಿಸಿದ್ದ. ನಂತರ ಅವರು ಕಲ್ಲು ಕತ್ತರಿಸುವ ಯಂತ್ರದಿಂದ ಕತ್ತರಿಸುವ ಮೂಲಕ ಕಾಲುಗಳು ಮತ್ತು ಕೈಗಳನ್ನು ದೇಹದಿಂದ ಬೇರ್ಪಡಿಸಿದರು ಮತ್ತು ಕಾಲುಗಳು ಹಾಗೂ ಕೈಗಳನ್ನು ಫ್ರಿಡ್ಜ್‌ನಲ್ಲಿ ಸಂರಕ್ಷಿಸಿದ. ಮತ್ತು ದೇಹವನ್ನು ವಿಲೇವಾರಿ ಮಾಡಲು ಸೂಟ್‌ಕೇಸ್‌ನಲ್ಲಿ ಇರಿಸಿದರು’’ ಎಂದೂ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಉನ್ನಾವೋ ಗ್ಯಾಂಗ್‌ರೇಪ್ ಕೇಸ್ ಆರೋಪಿಗಳಿಗೆ ಜಾಮೀನು: ಸಂತ್ರಸ್ತೆ ಮನೆಗೆ ಬೆಂಕಿ ಹಚ್ಚಿ ಆಕ್ರೋಶ
‘‘ಮೇ 15ರಂದು ಆರೋಪಿ ಮೃತ ಮಹಿಳೆಯ ಕಡಿದ ತಲೆಯನ್ನು ಕಸ ತಂದು ಬಿಸಾಡುವ ಜಾಗದಲ್ಲಿ ಎಸೆದು ಹೋಗಿದ್ದ. ಬಳಿಕ ಆರೋಪಿ ಫಿನೈಲ್, ಡೆಟಾಲ್, ಪರ್ಫ್ಯೂಮ್ ಅಗರಬತ್ತಿ, ಕರ್ಪೂರ ಹಾಗೂ ಸುಗಂಧ ದ್ರವ್ಯ ಸ್ಪ್ರೇ ಬಾಟಲಿಗಳನ್ನು ತಂದು ದೇಹಕ್ಕೆ ನಿತ್ಯ ಹಚ್ಚುತ್ತಿದ್ದರು. ಅಲ್ಲದೆ, ಆಸುಪಾಸಿನಲ್ಲಿ ದುರ್ವಾಸನೆ ಹರಡದಂತೆ ಮೃತಳ ದೇಹದ ಭಾಗಗಳನ್ನು ಪತ್ತೆ ಹಚ್ಚಿದ ಆರೋಪಿ ಮೃತಳ ಸೆಲ್ ಫೋನ್ ತೆಗೆದುಕೊಂಡು ಆಕೆಯ ಪರಿಚಿತ ವ್ಯಕ್ತಿಗಳಿಗೆ ಸಂದೇಶ ರವಾನಿಸಿ ಆಕೆ ಬದುಕಿದ್ದು ಎಲ್ಲೋ ಇದ್ದಾಳೆ ಎಂದು ನಂಬಿಸಿದ್ದಾರೆ ಎಂದೂ ಪೊಲೀಸರು ಹೇಳಿಕೊಂಡಿದ್ದಾರೆ.
ದೆಹಲಿಯಲ್ಲಿ ಇದೇ ರೀತಿಯ ಘಟನೆಯಲ್ಲಿ, ಮೃತ ಶ್ರದ್ಧಾ ವಾಕರ್‌ಳನ್ನು ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಕೊಲೆ ಮಾಡಿ ನಂತರ 35 ತುಂಡುಗಳಾಗಿ ಕತ್ತರಿಸಿದ್ದ. ಶ್ರದ್ಧಾಳನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ನಂತರ, ಅವನು ಮೊದಲು ಬೇಗನೆ ದುರ್ವಾಸನೆ ಬೀರುವ ಭಾಗಗಳನ್ನು ವಿಲೇವಾರಿ ಮಾಡಿದ್ದಾಗಿ ಅಫ್ತಾಬ್ ಪೂನಾವಾಲ ತನ್ನ ವಿಚಾರಣೆಯ ಸಮಯದಲ್ಲಿ ಪೊಲೀಸರಿಗೆ ತಿಳಿಸಿದ್ದ.
ಇದನ್ನೂ ಓದಿ: Crime: ಮೃಗದಂತೆ ಹೆತ್ತ ತಾಯಿ ಮೇಲೆ ಅತ್ಯಾಚಾರ ಮಾಡಿದ ಪಾಪಿ: ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತೆ