ವಿವಾಹಿತೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನು ಮಾತುಕತೆಗೆ ಕರೆಸಿದ್ದ ಮಹಿಳೆಯ ಸಂಬಂಧಿಕರು ರಾತ್ರೋ ರಾತ್ರಿ ಕೊಲೆ ಮಾಡಿ ಬೀಸಾಡಿದ್ದಾರೆ.
ಬೆಂಗಳೂರು (ಮೇ 25): ಹೆಂಡತಿಯೊಂದಿಗೆ ಗಂಡನೇ ಬಲವಂತವಾಗಿ ಸಂಬಂಧ ಬೆಳೆಸುವಂತಿಲ್ಲ. ಆದರೆ, ಇಲ್ಲೊಬ್ಬ ಯುವಕ ವಿವಾಹಿತೆ ಮಹಿಳೆಯೊಂದಿಗೆ ಬೇಡ ಬೇಡವೆಂದರೂ ಅನೈತಿಕ ಸಂಬಂಧವನ್ನು ಮುಂದುವರೆಸಿದ್ದನು. ಈ ವಿಚಾರವಾಗಿ ಮಾತನಾಡುವುದಾಗಿ ಯುವಕನನ್ನು ಕರೆಸಿದ್ದ ಮಹಿಳೆಯ ಸಂಬಂಧಿಕರು ರಾತ್ರೋ ರಾತ್ರಿ ಬರ್ಬರವಾಗಿ ಕೊಲೆ ಮಾಡಿ ಬೀಸಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಿಂಗ್ರಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ. ಅನೈತಿಕ ಸಂಬಂಧದ ವಿಚಾರಕ್ಕೆ ಬರ್ಬರ ಕೊಲೆಯಾದ ಯುವಕನನ್ನು ಪ್ರದೀಪ್ (27) ಎಂದು ಗುರುತಿಸಲಾಗಿದೆ. ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಯುವಕನಿಗೆ ಈಗಾಗಲೇ ಹಲವು ಬಾರಿ ಮನೆಯವರು ಬುದ್ಧಿವಾದ ಹೇಳಿದ್ದರು. ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿ ಠಾಣೆಯಲ್ಲಿಯೇ 2 ಬಾರಿ ವಿವಾಹಿತ ಮಹಿಳೆ ಹಾಗೂ ಯುವಕನ ನಡುವೆ ಅನೈತಿಕ ಸಂಬಂಧ ಮುಂದುವರೆಸದಂತೆ ರಾಜಿ ಪಂಚಾಯಿತಿ ಮಾಡಲಾಗಿತ್ತು. ಆದರೂ, ಹಠಕ್ಕೆ ಬಿದ್ದು ವಿವಾಹಿತ ಆಂಟಿಯೊಂದಿಗೆ ಸಂಬಂಧವನ್ನು ಬೆಳೆಸಿದ್ದ ಆಂಟಿ ಲವರ್ ಈಗ ಬೀದಿ ಹೆಣವಾಗಿ ಬಿದ್ದಿದ್ದಾನೆ.
Bengaluru: ಸಾಯ್ತೀನಿ ಅಂತ ನಾಟಕ ಮಾಡ್ತಿದ್ದ ಪ್ರೇಯಸಿಯನ್ನು ಕೊಲೆಗೈದ ಆಂಟಿ ಲವರ್
ಮಾತುಕತೆಗೆ ಕರೆಸಿ ಕೊಲೆ: ಇನ್ನು ಮಹಿಳೆಗೆ ಬುದ್ಧಿ ಹೇಳಿದರೂ ಯುವಕನೊಂದಿಗೆ ಕದ್ದು ಮುಚಚಿ ಕರೆ ಮಾಡಿ ಸಂಬಂಧ ಬೆಳೆಸುತ್ತಿದ್ದಳು. ಮನೆಯಲ್ಲಿ ಮಹಿಳೆ ಸಂಬಂಧ ಕಡಿದುಕೊಳ್ಳಲು ಒಪ್ಪಿದರೂ ಯುವಕನಿಂದ ವೀಡಿಯೋ ಇಟ್ಟುಕೊಂಡು ಬೆದರಿಕೆ ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯುವಕನನ್ನು ಮಹಿಳೆಯ ಸಂಬಂಧಿಕರು ಮತ್ತೊಮ್ಮೆ ಮಾತುಕತೆ ನಡೆಸುವುದಕ್ಕೆ ಸಿಂಗ್ರಹಳ್ಳಿ ಗ್ರಾಮದ ಹೊರ ವಲಯದಲ್ಲಿ ಕರೆಸಿಕೊಂಡಿದ್ದಾರೆ. ಯುವಕ ಬಂದಾಗ ಆತನ ಕೈಕಾಲು ಕಟ್ಟಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ಬೀಸಾಡಿ ಹೋಗಿದ್ದಾರೆ.
ವಾರ್ನಿಂಗ್ ನೀಡಿದರೂ ಕದ್ದು ಮುಚ್ಚಿ ಚಕ್ಕಂದ: ಸಿಂಗ್ರಹಳ್ಳಿ ಗ್ರಾಮದ ವಿವಾಹಿತ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವಕನಿಗೆ ಮಹಿಳೆಯ ಗಂಡ ವೆಂಕಟೇಶ್ ಹಾಗೂ ಮನೆಯವರು ಹಲ್ಲೆ ಮಾಡಿ ಬುದ್ಧಿ ಹೇಳಿದ್ದರು. ಜೊತೆಗೆ, ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ, ಪೊಲೀಸರು ಯುವಕನನ್ನು ಕರೆಸಿ ಬುದ್ಧಿ ಹೇಳಿದ್ದರು. ಆದರೂ ಸಂಬಂಧ ಮುಂದುವರೆಸಿದ್ದರಿಂದ ಆತನನ್ನು ಕರೆಸಿ ಪೊಲೀಸ್ ಶೈಲಿಯಲ್ಲಿ ಬುದ್ಧಿ ಕಲಿಸಿ, ಎರಡೂ ಕಡೆಯವರಿಂದ ರಾಜಿ ಮಾಡಿಸಿದ್ದರು. ಆಗ ಅನೈತಿಕ ಸಂಬಂಧ ಒಟ್ಟುಕೊಳ್ಳುವುದು, ಹಲ್ಲೆ ಮಾಡುವುದು ಮಾಡದಂತೆ ಸೂಚನೆ ನೀಡಲಾಗಿತ್ತು.
ಮಚ್ಚಿನಿಂದ ಹೊಡೆದರೂ 1 ಕಿ.ಮೀ ಓಡಿಬಂದ: ಇನ್ನು ಸಿಂಗ್ರಹಳ್ಳಿ ಗ್ರಾಮದ ಹೊರವಲಯದ ಖಾಸಗಿ ಬಡಾವಣೆಯಲ್ಲಿ ಮಾತುಕತೆಗೆ ಕರೆಸಿದ್ದ ವೇಳೆ ಆತನಿಗೆ ಮಚ್ಚು ಬೀಸಲಾಗಿದೆ. ಮಚ್ಚಿನೇಟು ತಿಂದ ಯುವಕ ಬಡಾವಣೆಯಿಂದ ಸುಮಾರು 1 ಕಿ.ಮೀ. ದೂರದಷ್ಟು ಗ್ರಾಮದ ಕಡೆಗೆ ಓಡಿ ಬಂದಿದ್ದಾನೆ. ಆದರೆ, ಅಟ್ಟಾಡಿಸಿಕೊಂಡು ಬಂದ ರೌಡಿಗಳು ನಂತರ ಆತನ ಕೈಕಾಲು ಕಟ್ಟಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ಆರೋಪಿಗಳನ್ನು ಮಹಿಳೆಯ ಗಂಡ ವೆಂಕಟೇಶ್ ಹಾಗೂ ಆತನ ಸ್ನೇಹಿತ ಕೋಳಿ ನಾಗೇಶ್ ಎಂದು ಗುರುತಿಸಲಾಗಿದೆ. ಈ ಕೊಲೆಯನ್ನು ಕಂಡ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಅಯ್ಯೋ.. ನನ್ನ ಮದುವೆಯಾಗಲಿಲ್ಲ ಅಂತ ವಿಷ ಕುಡಿದು ಸತ್ತೇ ಹೋದ ಯುವಕ!
ಕೆಲವೇ ಗಂಟೆಗಳಲ್ಲಿ ಆರೋಪಿಗಳ ಸೆರೆ: ಗ್ರಾಮದಲ್ಲಿ ಯುವಕನ ಬರ್ಬರ ಕೊಲೆ ಆಗಿರುವುದನ್ನು ನೋಡಿದ ಗ್ರಾಮಸ್ಥರು ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ನಂತರ ಕೊಲೆಯಾದ ಯುವಕನ ಮೊಬೈಲ್ ಕರೆ ಮಾಹಿತಿ ಹಾಗೂ ಕೊನೆಯದಾಗಿ ಯಾರೊಂದಿಗೆ ಹೋಗಿದ್ದ ಎಂಬುದನ್ನು ತಿಳಿದುಕೊಂಡಿದ್ದಾರೆ. ಜೊತೆಗೆ, ಯುವಕನ ಮೇಲೆ ದ್ವೇಷ ಇರುವುದು ಮಹಿಳೆಯ ಗಂಡನಿಂದ ಎಂಬುದು ಕೂಡ ಗೊತ್ತಿತ್ತು. ಈ ಸುಳಿವು ಸಿಕ್ಕ ಬೆನ್ನಲ್ಲೇ ವಿಶ್ವನಾಥಪುರ ಠಾಣೆ ಪೊಲೀಸರು ವೆಂಕಟೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ಈ ಘಟನೆ ಕುರಿತಂತೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.