15 ವರ್ಷದ ಪ್ರೀತಿ ಕ್ಷಣದಲ್ಲೇ ಸಮಾಧಿ; ಅತ್ತಿಗೆ ಜೊತೆ ಗಂಡನ ಚಕ್ಕಂದ, ಆತ್ಮಹತ್ಯೆ ಮಾಡಿಕೊಂಡ ಯುವತಿ!

Published : Apr 26, 2023, 01:12 PM ISTUpdated : Apr 26, 2023, 01:27 PM IST
15 ವರ್ಷದ ಪ್ರೀತಿ ಕ್ಷಣದಲ್ಲೇ ಸಮಾಧಿ; ಅತ್ತಿಗೆ ಜೊತೆ ಗಂಡನ ಚಕ್ಕಂದ, ಆತ್ಮಹತ್ಯೆ ಮಾಡಿಕೊಂಡ ಯುವತಿ!

ಸಾರಾಂಶ

ಪ್ರೀತಿ ಮಾಡಿ, ಮದುವೆಯಾಗದೆ ಮೋಸ ಮಾಡ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಪ್ರೀತಿ ಮಾಡಿ, ಮದುವೆಯಾಗಿ ಅದರ ಜೊತೆ ಜೊತೆಯಲ್ಲೇ ಹೆಂಡ್ತಿಗೆ ಮೋಸ ಮಾಡಿದ್ದಾನೆ. ಅತ್ತಿಗೆಯ ಜೊತೆಗಿನ ಗಂಡನ ಸಂಬಂಧದ ಬಗ್ಗೆ ತಿಳಿದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 15 ವರ್ಷದ ಪ್ರೀತಿ ಕ್ಷಣದಲ್ಲೇ ಸಮಾಧಿಯಾಗಿದೆ. 

22 ವರ್ಷದ ಸ್ನೇಹಕ್ಕೆ, 15 ವರ್ಷದ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿ ಇನ್ನು 5 ತಿಂಗಳು ಆಗಿದೆ ಅಷ್ಟೆ. ಅಷ್ಟರಲ್ಲಿ ಎಲ್ಲಾ ನುಚ್ಚು ನೂರಾಗಿ ಹೋಗಿದೆ. ಈಕೆಯ ಹೆಸರು ಕೌಶಲ್ಯ. ಈತನ ಹೆಸರು ಸುಖೇಶ್. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಈಕೆ ಹೆಸರಿಗೆ ತಕ್ಕಂತೆ ಕೌಶಲ್ಯವತಿ. ತನ್ನ ಸ್ನೇಹಿತನೊಂದಿಗೆ ಬಿಕಾಂ ವರೆಗೂ ಓದಿದ ಈಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಒಳ್ಳೆ ಉದ್ಯೋಗ ಪಡೆದಿದ್ದಳು. ಕೆಲಸದಲ್ಲಿ ಅದೆಷ್ಟು ಅಚ್ಚುಕಟ್ಟುತನವಿತ್ತು ಅಂದ್ರೆ ಕಚೇರಿಯಲ್ಲಿ ಈಕೆ ಹಾಗೂ ಈಕೆಯ ಕೆಲಸ ಎಲ್ಲರಿಗೂ ಇಷ್ಟವಾಗಿತ್ತು. 

ಮದುವೆಯಾದ ಬಳಿಕ ಗಂಡನ ಜೊತೆ ಜೊತೆಯಲ್ಲೇ ಇರಬೇಕು ಅಂತ ಇತ್ತೀಚೆಗೆ ಮೂಡಬಿದ್ರೆಯಿಂದ ಉಜಿರೆಗೆ ವರ್ಗಾವಣೆ ಪಡೆದುಕೊಂಡಿದ್ದಳು. ಈ ವೇಳೆ ಸಹೋದ್ಯೋಗಿಗಳು (Collegues) ಈಕೆಗೆ ಅಕ್ಕರೆಯ ಬೀಳ್ಕೊಡುಗೆ ಕೊಟ್ಟಿದ್ದರು. ಈಕೆಗೆ ಅರಿಶಿಣ ಕುಂಕುಮ ಕೊಟ್ಟು ಮಡಿಲು ತುಂಬಿ ಕಳುಹಿಸಿದ್ದರು. ಇವರೆಲ್ಲರ ಪ್ರೀತಿಗೆ ಈಕೆ ಕಣ್ಣೀರಾಗಿದ್ದಳು. ಅಷ್ಟೊಂದು ಪ್ರೀತಿಯಿಂದ ಬಂದ ಕೌಶಲ್ಯಳನ್ನು ಪ್ರತಿನಿತ್ಯ ತನ್ನ ಗಂಡ ಸುಕೇಶನೇ ಕೆಲಸಕ್ಕೆ ಬಿಟ್ಟುಬರುತ್ತಿದ್ದ.

8 ವರ್ಷ ಅಣ್ಣಾ ಎಂದು ಕರೆದವನನ್ನೇ ಮದ್ವೆಯಾದ್ಲು, ವೀಡಿಯೋ ನೋಡಿ ನೆಟ್ಟಿಗರು ಶಾಕ್‌!

ಮೊನ್ನೆ 20ನೇ ತಾರೀಕು. ಉಜಿರೆಯ ಎಸ್.ಕೆ.ಡಿ.ಆರ್.ಡಿ.ಪಿ ಕಚೇರಿಗೆ ಹೋಗುತ್ತೇನೆ ಅಂತಾ ಹೇಳಿ ಹೋದವಳು ಸೀದಾ ಫರ್ಟಿಲೈಜರ್ ಶಾಪ್‌ಗೆ ಹೋಗಿದ್ದಳು. ಅಲ್ಲಿ ಕಳೆನಾಶಕವನ್ನು ಖರೀದಿ ಮಾಡಿದ್ದಳು. ದಾರಿಯಲ್ಲಿ ಬರುತ್ತಾ ಅದನ್ನು ಕುಡಿದಿದ್ದಳು. ಕುಡಿದವಳೇ ಸೀದಾ ತನ್ನ ಅಮ್ಮನ ಮನೆಗೆ ಬಂದು ತಾನು ವಿಷ ಕುಡಿದಿರೋದಾಗಿ ಹೇಳಿದ್ದಾಳೆ. ತಂದೆ ಇಲ್ಲದ ಮಗಳು ಅಂತಾ ಕೌಶಲ್ಯಳನ್ನು ತನ್ನ ಕಣ್ಣಲ್ಲಿ ಕಣ್ಣಿಟ್ಟು ಆಕೆಯ ಅಮ್ಮ ಸಾಕಿದ್ದರು. ಇಂತಹ ಮಗಳು ವಿಷ (Poison) ಕುಡಿದಿರೋದಾಗಿ ಹೇಳಿದನ್ನು ಕೇಳಿ ತಾಯಿ ಒಮ್ಮೆ ದಿಗ್ಭಾಂತರಾದರು. ತಕ್ಷಣ ಕೌಶಲ್ಯ ಅಮ್ಮ ಹಾಗೂ ಮನೆಯವರು ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು. ಮೂರು ದಿನಗಳ ಕಾಲ ಚಿಕಿತ್ಸೆಯನ್ನು (Treatment) ನೀಡಿದ್ರು ಅದು ಫಲಿಸದೇ ಕೌಶಲ್ಯ ನಿನ್ನೆ ಕೊನೆಯುಸಿರೆಳೆದಿದ್ದಾಳೆ.

ಅಕ್ರಮ ಸಂಬಂಧಕ್ಕೆ ಅಮಾಯಕಿ ಬಲಿ
ಕೌಶಲ್ಯ ಸಾವನ್ನಪ್ಪಿದ ತಕ್ಷಣ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೋದ ಆಕೆಯ ಸಂಬಂಧಿಕರು ಕೌಶಲ್ಯ ಪತಿ ಸುಕೇಶ್, ಸುಕೇಶ್ ನ ತಂದೆ ಹಾಗೂ ಸುಕೇಶ್ ನ ದೊಡ್ಡಪ್ಪನ ಮಗನ ಹೆಂಡತಿ ಅಂದ್ರೆ ಸುಕೇಶ್ ನ ಅತ್ತಿಗೆ ಆಸ್ತಿಕಾ ಮೇಲೆ ದೂರುನ್ನು ನೀಡಿದ್ರು. ಸುಕೇಶ್ ಗೂ, ಆತನ ದೊಡ್ಡಪ್ಪನ ಮಗನ ಹೆಂಡತಿ ಆಸ್ತಿಕಾಗೂ ಅಕ್ರಮ ಸಂಬಂಧ (Extramarital affair) ಇದೆ ಅಂತಾ ದೂರು (Complaint) ನೀಡಿದ್ದಾರೆ. 

22 ವರ್ಷದ ಸ್ನೇಹ. 15 ವರ್ಷದ ಪ್ರೀತಿ
ಕೌಶಲ್ಯ ಮನೆಯಲ್ಲಿ ಬಡತನವಿತ್ತು. ಆದ್ರೆ ಆಕೆಯ ಶ್ರೀಮಂತ ಪ್ರೀತಿ (Love)ಯನ್ನು ಜೋಪಾನ ಮಾಡಿ ಸುಕೇಶನಿಗಾಗೆ ಮುಡಿಪಾಗಿಟ್ಟದ್ದಳು. ಇವರ ಪ್ರೀತಿಗೆ ಯಾವುದೇ ಅಡೆತಡೆಗಳಿರಲಿಲ್ಲ. ಒಂದೇ ಜಾತಿ. ಒಂದೇ ಊರು. ಪರಸ್ಪರ ಪರಿಚಯಸ್ಥ ಕುಟುಂಬ. ಇಬ್ಬ ಪ್ರೀತಿ ಲೋಕಕ್ಕೆ ಗೊತ್ತಿತ್ತು. ಇವರಿಬ್ಬರನ್ನು ಮದುವೆ ಮಾಡಬೇಕು ಅಂತಾ ದೊಡ್ಡವರು ಕೂಡ ನಿರ್ಧರಿಸಿದ್ದರು. ಅದ್ರಂತೆ ಇವರು ಕೂಡ ಮನೆಯವನ್ನು ಕೇಳಿದ ತಕ್ಷಣ ಮದುವೆ ಸಂಭ್ರಮ ಮನೆಮಾಡಿತ್ತು. ಕಳೆದ 5 ತಿಂಗಳ ಹಿಂದೆ ತನ್ನ ಜೀವನದ ಹೊಸ ಅಧ್ಯಾಯವನ್ನು ಅದೇ ಗೆಳೆಯ, ಪ್ರಿಯಕರನೊಂದಿಗೆ (Lover) ಹೊಸದಾಗಿ ಆರಂಭಿಸಿದ್ದಳು. 

ಮಗಳ Boyfriend ಜೊತೆ ತಾಯಿಯ ಚೆಲ್ಲಾಟ, ಅಡುಗೆ ಮನೆಯಲ್ಲಿ ನಡೆದಿತ್ತು ಪ್ರೀತಿಯ ಆಟ

ಹನಿಮೂನ್ ಮೆಸೇಜ್‌ನಿಂದ ಅಸಲಿಯತ್ತು ಬಯಲು
ಮದುವೆಯಾಗಿ ಸ್ವಲ್ಪ ದಿನ ಮನೆಯಲ್ಲಿದ್ರು. ಬಳಿಕ ಹನಿಮೂನ್ ಗಾಗಿ ದೂರದೂರಿಗೆ ಪ್ರಯಾಣ ಬೆಳೆಸಿದ್ರು. ಹನಿಮೂನ್ ನಲ್ಲಿ ತಮ್ಮ 22 ವರ್ಷದ ಸ್ನೇಹ ಮತ್ತು 15 ವರ್ಷದ ಪ್ರೀತಿಯನ್ನು ಯಶಸ್ವಿಯಾಗಿ ಗೆದ್ದ ಖುಷಿಯಲ್ಲಿದ್ರು. ಇನ್ನೇನು ಸ್ವರ್ಗಕ್ಕೆ ಮೂರು ಗೇಣಾಗಿತ್ತು ಇಬ್ಬರ ಜೀವನ. ಹನಿಮೂನ್ ಖುಷಿಯಲ್ಲಿ ತೇಲಾಡುತ್ತಿದ್ದಾಗ ಬಂದ ಅದೊಂದು ಮೆಸೇಜ್ ಗೆ ಇಡೀ ಪ್ರೀತಿಯನ್ನೇ ಬುಡಮೇಲು ಮಾಡುವ ಶಕ್ತಿಯಿತ್ತು. ಆ ಮೆಸೇಜ್ ಬಂದಿದ್ದು ಸುಕೇಶ್ ನ ಮೊಬೈಲ್ ಗೆ. ಹೌದು ಆಸ್ತಿ ಅತ್ತಿಗೆ ಅನ್ನೊ ನಂಬರ್ ನಿಂದ ಬಂದ ಮೆಸೇಜ್ ಅದಾಗಿತ್ತು.

ಅತ್ತಿಗೆ ಜೊತೆ ಅಕ್ರಮ ಸಂಬಂಧ
ಸುಕೇಶಾ ಹುಟ್ಟು ಶ್ರೀಮಂತ. ಕೋಟಿಗೆ ಬಾಳುವ ಕುಟುಂಬ. ಆತನ ಮೈಯೆಲ್ಲಾ ಸುಖವನ್ನು ಬಯಸುತ್ತಿತ್ತು. ಆತ ಶ್ರೀಮಂತನಾಗಿದ್ರು ಆತನ ಪ್ರೀತಿ ಕಿತ್ತು ಕೆರಹಿಡಿಯೋವಷ್ಟು ಬಡವಾಗಿತ್ತು. ತಾಯಿ ಸಮಾನಳಾದ ಅತ್ತಿಗೆ (Sister-in-law)ಯೊಂದಿಗೆ ಆತ ಅಕ್ರಮ ಸಂಬಂಧವನ್ನು ಹೊಂದಿದ್ದು. ಬಹಳ ವರ್ಷಗಳಿಂದ ಅತ್ತಿಗೆ ಆಸ್ತಿಕಾಳ ಜೊತೆ ಕುಚು ಕುಚು ನಡೆಸಿದ್ದ. ಈ ಕುಚು ಕುಚುಗೆ ಕೌಶಲ್ಯಳ ಜೊತೆ ನಡೆದ ಮದುವೆ ಅಡ್ಡವಾಗಿತ್ತು. ಹನಿಮೂನ್ ನಲ್ಲಿ ಬಂದ ಮೆಸೇಜ್ ಕೂಡ ಅದೇ ಆಗಿತ್ತು. ಈಗ ನಿಂಗೆ ನನ್ನ ಅವಶ್ಯಕತೆ ಇಲ್ಲ ಅಲ್ವಾ. ನಂಗೆ ಪ್ರೀತಿ ಕೊಡಲು ಆಗಲ್ಲ ಅಲ್ವಾ. ಬಿಟ್ಟು ಬಿಡು ನನ್ನ ಅಂತಾ ಮೆಸೇಜ್. ಇದನ್ನ ನೋಡಿ ಕೌಶಲ್ಯಳಿಗೆ ಆಕಾಶ ಕಳಚಿ ಬಿದ್ದಂತಾಗಿತ್ತು. ಅಲ್ಲಿಂದ ಊರಿಗೆ ಬಂದ್ರು. ಅಲ್ಲಿಂದ ಕೌಶಲ್ಯಳು ತನ್ನ ಪತ್ತೇದಾರಿ ಕೆಲಸ ಆರಂಭಿಸಿದ್ಲು. ಒಂದು ಕಡೆ 15 ವರ್ಷದಿಂದ ಕೌಶಲ್ಯಳ ಜೊತೆ ಪ್ರೀತಿ. ಇನ್ನೊಂದು ಕಡೆ ತಾಯಿ ಸಮಾನಳಾದ ಅತ್ತಿಗೆ ಜೊತೆ ಪ್ರಣಯ. ಸುಖಪುರುಷನಾಗಿದ್ದ ಸುಕೇಶಾ ಕುಟುಂಬಕ್ಕೆ ಕಳ್ಳಬೆಕ್ಕಾಗಿದ್ದ. 

ಸುಕೇಶನ ಬ್ಯಾಕಪ್ ಕೌಶಲ್ಯಳ ಮೊಬೈಲ್‌ಗೆ..!
ಗಂಡನ ಮೇಲೆ ಅನುಮಾನ ಬಂದು ಅವನ ಮೊಬೈಲ್ ವಾಟ್ಸಾಪ್ ಬ್ಯಾಕ್ ಅಪ್ ನ್ನು ಕೌಶಲ್ಯ ತನ್ನ ಮೊಬೈಲ್ ಗೆ ಬರುವಂತೆ ಮಾಡಿಕೊಂಡಿದ್ದಳು. ಹೀಗೆ ಮಾಡಿ ಗಂಡನನ್ನು ಫ್ರೀಯಾಗಿ ಬಿಟ್ಟಿದ್ದಳು. ಆಗ ಆತನ ಮೋಸದಾಟ ಬಯಲಾಗಿ ಬ್ಯಾಕಪ್ ನಲ್ಲಿ ಬಿದ್ದಿತ್ತು. ಹೀಗೆ ಅವರ ಅಸಲಿಯತ್ತು ಬಯಲಾಗಿತ್ತು. ಇನ್ನೊಂದು ಅರಗಿಸಿಕೊಳ್ಳಲಾರದ ವಿಷಯ ಅತ್ತಿಗೆ-ಮೈದುನನ ಮದ್ಯೆ ಆಗಿ ಹೋಗಿತ್ತು. ಅಕ್ರಮ ಸಂಬಂಧವನ್ನು ಸರಿ ಮಾಡಿದ್ರು ಅದನ್ನು ಸರಿ ಮಾಡಲು ಸಾದ್ಯವಿಲ್ಲ ಅನ್ನೊದು ಕೌಶಲ್ಯಳಿಗೆ ಗೊತ್ತಾಗಿಹೋಗಿತ್ತು. ಇದೇ ವಿಚಾರವನ್ನು ತನ್ನ ಮಾವನ ಮನೆಯಲ್ಲಿ ಹೇಳಿದ್ದಾಳೆ. ಮಾವ ತನ್ನ ಮಗನದ್ದೇನು ತಪ್ಪಿಲ್ಲ. ನೀನು ಬಂದಾಗಿನಿಂದ ಈ ಸಮಸ್ಯೆ ಅಂತಾ ಕೌಶಲ್ಯಳ ಮೇಲೆ ಗೂಬೆ ಕೂರಿಸಿದ್ದಾರೆ. ಇನ್ನು ತವರು ಮನೆಯಲ್ಲಿ ಹೇಳಿದ್ರು, ಅವರು ಹೇಗೊ ಸಂಸಾರ ಸಾಗಿಸು. ಎಲ್ಲವನ್ನು ಸರಿ ಮಾಡೊಣ ಅಂತಾ ಹೇಳಿದ್ದಾರೆ. ಆದ್ರೆ ಕೌಶಲ್ಯ ಸಾಯೋ ನಿರ್ಧಾರ ಮಾಡಿದ್ದಳು. ಅದ್ರಂತ ತನ್ನದಲ್ಲದ ತಪ್ಪಿಗೆ ತನಗೆ ತಾನೆ ಶಿಕ್ಷೆ ಕೊಟ್ಟಿಕೊಂಡಿದ್ದಾಳೆ.

ಅಲ್ಲಿಗೆ 22 ವರ್ಷದ ಸ್ನೇಹ, 15 ವರ್ಷದ ಪ್ರೀತಿ ಸಮಾಧಿಯಾಗಿದೆ. ಇತ್ತ ಆರೋಪಿ ಗಂಡ ಕೌಶಲ್ಯ ಸತ್ತು ಹೋಗುತ್ತಿದ್ದಂತೆ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗೆ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಅನ್ನೊದು ಕೌಶಲ್ಯ ತವರು ಮನೆಯವರ ಅಳಲು. ಕೌಶಲ್ಯಳಿಗೆ ಸಣ್ಣ ವಯಸ್ಸು. ತನ್ನ ಪ್ರೀತಿ ಪಡೆಯಲು ಅರ್ಹತೆ ಇಲ್ಲದವನಿಗೋಸ್ಕಾರ ಪ್ರಾಣ ಬಿಡೋ ಅವಶ್ಯಕತೆ ಇರಲಿಲ್ಲ. ತನಗೆ ಆದ ಅನ್ಯಾಯ, ಪ್ರೀತಿಗೆ ಆದ ಮೋಸಕ್ಕೆ ಕಾನೂನು ಪ್ರಕಾರವಾಗಿ ಶಿಕ್ಷೆ ಕೊಡಬಹುದಿತ್ತು. ತನ್ನ ಜೀವನವನ್ನು ಮತ್ತೆ ಸುಂದರವಾಗಿಸುವ ನೂರು ದಾರಿಗಳಿದ್ದವು. ಆದ್ರೆ ಒಂದು ದುಡುಕಿನ ನಿರ್ಧಾರದಿಂದ ಕೌಶಲ್ಯ ತವರು ಬಡವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಪ್ಪಳ: ಕುಕನೂರು ಬಳಿ ಕಾಲುವೆಯಲ್ಲಿ ಎರಡು ಸುಟ್ಟ ಮೃತದೇಹ ಪತ್ತೆ, ಹತ್ಯೆ ಮಾಡಿರುವ ಶಂಕೆ!
9 ವರ್ಷದ ಮಗನನ್ನು ವ್ಯಾನ್‌ನಲ್ಲಿ ಕೂಡಿಹಾಕಿದ್ದ ತಂದೆ! ಮಲ-ಮೂತ್ರ, ಕಸದ ರಾಶಿಯ ನಡುವೆ ಬಾಲಕನ ನರಕಯಾತನೆ!