ವಿಜಯಪುರ: ಪ್ರಿಯಕರನ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ವಿವಾಹಿತ ಮಹಿಳೆ ಲೈವ್ ಸೊಸೈಡ್..!

By Girish Goudar  |  First Published Apr 26, 2023, 12:20 PM IST

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ನಡೆದ ಘಟನೆ. 


ವಿಜಯಪುರ(ಏ.26): ಪ್ರಿಯಕರನ ಬ್ಲ್ಯಾಕ್‌ಮೇಲ್‌ಗೆ ವಿವಾಹಿತ ಮಹಿಳೆಯೊಬ್ಬಳು ಮೊಬೈಲ್ ವಿಡಿಯೋ ಆನ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ನಡೆದಿದೆ. ಸುಹಾನ್ ಸೋನಾರ್ (21)  ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದಾಳೆ. 

ನನ್ನೊಂದಿಗಿರುವ ಫೋಟೋ ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಪ್ರಿಯಕರ ಅಲ್ತಾಫ್ ಸುಲೆಮಾನ್ ವಿವಾಹಿತೆ ಮಹಿಳೆಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದನಂತೆ. ಮರ್ಯಾದೆಗೆ ಹೆದರಿ ಸುಹಾನಾ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

Tap to resize

Latest Videos

ಮನೆಯಲ್ಲಿ ಮಕ್ಕಳು ಸರ್ಕಾರಿ ಹುದ್ದೆ ಸೇರದ್ದಕ್ಕೆ ಮನನೊಂದ ತಂದೆ; ಸಾಯೋದಾಗಿ ವಾಟ್ಸಪ್ ಸ್ಟೇಟಸ್ ಇಟ್ಟು ಆತ್ಮಹತ್ಯೆ!

ಏಪ್ರಿಲ್ 15ರಂದು ವಿವಾಹಿತೆ ಸುಹಾನಾ ಆತ್ಮಹತ್ಯೆಗೆ ಕಾರಣ ತಿಳಿಸಿ ಮೊಬೈಲ್ ವಿಡಿಯೋ ಆನ್ ಮಾಡಿ ನೇಣಿಗೆ ಶರಣಾಗಿದ್ದಾಳೆ. ಉಪ್ಪಲದಿನ್ನಿ ಗ್ರಾಮದ ಅಲ್ತಾಫ್ ಸುಲೆಮಾನ್ 1 ವರ್ಷದ ಹಿಂದೆ ಸುಹಾನಾ ಸಲುಗೆ ಬೆಳೆಯಿಸಿ ಪ್ರೀತಿಸುತ್ತಿದ್ದ. ಈ ವಿಷಯ ಸುಹಾನಾ ಪೋಷಕರಿಗೆ ಗೊತ್ತಾಗಿ ಹಿರಿಯರ ಸಮ್ಮುಖದಲ್ಲಿ ಅಲ್ತಾಫ್‌ಗೆ ತಾಕೀತು ಮಾಡಲಾಗಿತ್ತು. ಬಳಿಕ ಸುಹಾನಾ ಹೊಕ್ಕುಂಡಿ ಗ್ರಾಮದ ಷರೀಫ್ ಸೋನಾರ್ ಜೊತೆಗೆ ಇತ್ತೀಚೆಗೆ ಮದುವೆ ಮಾಡಕೊಡಲಾಗಿತ್ತು. 

ಇನ್ನೂಸ್ ಪಾರ್ಥನಲ್ಲಿ ಹಾಗೂ ದಸ್ತಗಿರಸಾಬ ಮುಳವಾಡ ಜೊತೆಗೆ ವಿವಾಹಿತೆ ತಂದೆ ಅಸ್ಲಂ ಮುಲ್ಲಾ ರಾಜಕೀಯ ದ್ವೇಷ ಇತ್ತು. ದಸ್ತಗಿರಸಾಬ ಮುಳವಾಡ ಮಗಳ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿದ್ದಕ್ಕೆ ಅಸ್ಲಂ ಮುಲ್ಲಾ ಕಾರಣವೆಂದು ಸಿಟ್ಟಾಗಿದ್ದರು. ಹೀಗಾಗಿ ಮೂವರು ಸೇರಿ ಸುಹಾನಾ ಬೆನ್ನುಹತ್ತಿ ಕಿರುಕುಳ ಕೊಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ಗಂಡನನ್ನು ಬಿಟ್ಟು ಬಾ ಇಲ್ಲವಾದರೆ ನನ್ನೊಂದಿಗಿರುವ ಫೋಟೋ ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಸುಹಾನಾಳಿಗೆ ಅಲ್ತಾಫ್ ಸುಲೆಮಾನ್ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದನು. ಈ ಮೂವರು ಹೆಸರು ಹೇಳಿ ಸುಹಾನಾ ಆತ್ಮಹತ್ಯೆಗೆ ಶರಣಾಗಿದ್ದಳು. ಮೃತ ಸುಹಾನಾ ತಂದೆ ಅಸ್ಲಂ ಮುಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!