
ಹೊಸಕೋಟೆ(ಏ.11): ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಹೆಂಡತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಮೂರು ದಿನಗಳ ಬಳಿಕ ಹೊಸಕೋಟೆಯ ಪೊಲೀಸ್ ಠಾಣೆಯಲ್ಲಿ ಬುಧವಾರ ಶರಣಾಗಿದ್ದಾನೆ.
ಮೃತಳ ಪತಿ ಹಾಗೂ ಕೊಲೆ ಆರೋಪಿ ಆಂಧ್ರಪ್ರದೇಶದ ಹರೀಶ್(35) ಪೊಲೀಸರಿಗೆ ಶರಣಾದ ವ್ಯಕ್ತಿ. ಹೂ ವ್ಯಾಪಾರಿಯಾದ ಈತ ಮೊದಲ ಪತ್ನಿಯ ಜತೆ ಹೊಸಕೋಟೆಯಲ್ಲಿ ವಾಸವಾಗಿದ್ದ. ಆಂಧ್ರಪ್ರದೇಶದ ರೆಡ್ಡಿಲಕ್ಷ್ಮಿ(30) ಕೊಲೆಯಾದ ಮಹಿಳೆ. ಆರೋಪಿ ಹರೀಶ್ ಮೊದಲ ಹೆಂಡತಿ ಜೊತೆ ಹೊಸಕೋಟೆಯಲ್ಲಿ ನೆಲೆಸಿ ಹೂವಿನ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ.
ಬೆಂಗ್ಳೂರಲ್ಲಿ ಖೋಟಾ ನೋಟು ನೀಡಿ ವಂಚಿಸುತ್ತಿದ್ದ ವೈದ್ಯನ ಬಂಧನ
ಕುಟುಂಬ ಕಲಹಗಳಿಂದ ಮೊದಲ ಪತ್ನಿಗೆ ವಿಚ್ಚೇದನ ನೀಡಿರುವುದಾಗಿ ಸುಳ್ಳು ಹೇಳಿ ಆಂಧ್ರಪ್ರದೇಶದ ರೆಡ್ಡಿಲಕ್ಷ್ಮಿ(30) ಎಂಬುವಳನ್ನು ಕಳೆದ 2022 ಮದುವೆಯಾಗಿ, ಆಕೆಯೊಂದಿಗೆ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಕಳೆದ ಮೂರು ದಿನಗಳ ಹಿಂದೆ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ.
ಪೊಲೀಸರು ಆರೋಪಿಯನ್ನು ಚಿಂತಾಮಣಿ ಟೌನ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೃತಳ ಕುಟುಂಬಸ್ಥರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ