ತನ್ನ ಹೆಂಡತಿ ನೋಡೋಕೆ ಸುಂದರವಾಗಿದ್ದಾಳೆ ಅಂತ ಗಂಡನೇ ವರದಕ್ಷಿಣೆ ಕಿರುಕುಳ ಕೊಟ್ಟು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ (ನ.22): ತನ್ನ ಹೆಂಡತಿ ನೋಡೋಕೆ ಸುಂದರವಾಗಿದ್ದಾಳೆ ಅಂತ ನಿನ್ನಷ್ಟೇ ಸುಂದರವಾದ ಆಭರಣ ಹಾಗೂ ಹಣವನ್ನು ನಿನ್ನ ತವರು ಮನೆಯಿಂದ ತರಬೇಕು ಎಂದು ವರದಕ್ಷಿಣೆ ಕಿರುಕುಳ ಕೊಟ್ಟ ಗಂಡ, ತನ್ನ ಮುದ್ದಾದ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ.
ಪತ್ನಿಯ ಕತ್ತು ಹಿಸುಕಿ ಪತ್ನಿಯೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮೃತ ಮಹಿಳೆಯ ಕುಟುಂಬಸ್ಥರಿಂದ ಆಕೆಯ ಗಂಡನ ಮೇಲೆ ಆರೋಪ ಮಾಡಲಾಗಿದೆ. ಕೋಲಾರದ ಮಿಲ್ಲತ್ ನಗರದಲ್ಲಿ ಘಟನೆ ನಡೆದಿದೆ. ಮಿಲ್ಲತ್ ನಗರದ ಮಾಹೇನೂರ್ ( 22) ಮೃತ ಮಹಿಳೆಯಾಗಿದ್ದಾಳೆ. ಗಂಡ ಸಯ್ಯದ್ ಶುಹೇಬ್ ಕೊಲೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ಮದುವೆ ಮಾಡಿಕೊಟ್ಟ ನಂತರ ವರದಕ್ಷಿಣೆ ಕಿರುಕುಳ ಕೊಟ್ಟು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಮಹಿಳೆ ಮನೆಯವರು ದೂರು ನೀಡಿದ್ದಾರೆ.
ಚಿತ್ರದುರ್ಗವನ್ನೇ ಬೆಚ್ಚಿಬೀಳಿಸಿದ ಮಚ್ಚಿನೇಟು: ಬಸ್ ನಿಲ್ದಾಣದಲ್ಲಿ ಪತ್ನಿಯನ್ನು ಕೊಚ್ಚಿ ಹಾಕಿದ ಸೈಕೋ ಪತಿ
ಕಳೆದ ಎರಡು ವರ್ಷಗಳ ಹಿಂದೆ ಮದುವೆ ಮಾಹೇನೂರ್ ಹಾಗೂ ಸಯ್ಯದ್ ಶುಹೇಬ್‌ಗೂ ಮದುವೆಯಾಗಿತ್ತು. ಆರಂಭದಲ್ಲಿ ಹೆಂಡತಿಯೊಂದಿಗೆ ಚೆನ್ನಾಗಿಯೇ ಇದ್ದ ಪತಿ ಕೆಲವೇ ದಿನಗಳಲ್ಲಿ ತನ್ನ ವರಸೆಯನ್ನು ಬದಲಿಸಿದ್ದಾನೆ. ನೀನು ಸುಂದರವಾಗಿದ್ದೀಯ, ಆದರೆ ಹಣವನ್ನು ತಂದಿಲ್ಲ. ನೀನು ನಿನ್ನ ತವರು ಮನೆಯಿಂದ ಹಣ ಹಾಗೂ ಆಭರಣ ತರಬೇಕು ಎಂದು ನಿರಂತರವಾಗಿ ಕಿರುಕುಳ ನೀಡುತ್ತಿದ್ದನಂತೆ. ಈಗ ಇದೇ ವರದಕ್ಷಿಣೆ ವಿಚಾರವಾಗಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಘಟನೆ ಕೋಲಾರ ನಗರದ ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಂಡ್ತಿ ಮೇಲೆ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಹಾಕಿದ ಗಂಡ:
ಚಿತ್ರದುರ್ಗ (ನ.22): ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎನ್ನುವ ಮಾತೊಂದಿದೆ. ಆದ್ರೆ ಚಳ್ಳಕೆರೆ ನಗರದ ನಡು ರಸ್ತೆಯಲ್ಲಿಯೇ ತನ್ನ ಪತ್ನಿಯನ್ನ ಗಂಡ ಮಚ್ಚಿನಿಂದ ಮನಸೋ ಇಚ್ಚೆ ಮಾರಣಾಂತಿಕ ಹಲ್ಲೆ ನಡೆಸಿರೋ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಬುಧವಾರ ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲಿ ತೀವ್ರ ರಕ್ತಸ್ರಾವದಿಂದ ನರಳಾಡ್ತಿರೋ ಮಹಿಳೆ. ಮತ್ತೊಂದೆಡೆ ಸ್ಥಳೀಯರಿಂದ ಗೂಸ ತಿಂತಿರೋ ಕಿರಾತರ ಯುವಕ. ಈ ದೃಶ್ಯಗಳು ಕಂಡು ಬಂದಿದೆ. ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರು ಗ್ರಾಮದ ಆಶಾ ಹಾಗೂ ಆರೋಪಿ ಕುಮಾರಸ್ವಾಮಿಗೆ ಕಳೆದ ನಾಲ್ಕು ವರ್ಷಗಳ ಹಿಂದಷ್ಟೇ ಮದುವೆ ಆಗಿರುತ್ತದೆ. ಮದುವೆ ಆಗಿ ಮೊದಲೆರಡು ವರ್ಷ ಸಂಸಾರವನ್ನು ಚೆನ್ನಾಗಿಯೇ ನಡೆಸಿದ್ದ ಪಾಪಿ ಪತಿರಾಯ, ಎರಡು ವರ್ಷ ಕಳೆದ ಬಳಿಕ ತನ್ನ ಪತ್ನಿಗೆ ಸುಖಾ ಸುಮ್ಮನೇ ಹಲ್ಲೆ ನಡೆಸಲು ಮುಂದಾಗಿದ್ದಾನೆ.
'ಕುಮಾರ್‌ಸೋಮಿ ಕರೆಂಟ್ ಕಳ್ಳ' ಪೋಸ್ಟರ್ ಅಂಟಿಸಿದವ ಸಿಕ್ಬಿಟ್ಟ: ಪೆನ್‌ಡ್ರೈವ್‌ನಲ್ಲಿ ಸಾಕ್ಷಿ ಕೊಟ್ಟ ಜೆಡಿಎಸ್ ಮುಖಂಡರು
ಸಾವು ಬದುಕಿನ ನಡುವೆ ಪತ್ನಿಯ ಹೋರಾಟ: ಎಷ್ಟೇ ಆಗ್ಲಿ ಗಂಡ ಆದವನು ಇಂದಲ್ಲ ನಾಳೆ ಸರಿ ಹೋಗ್ತಾನೆ ಎಂದು ಹೆಂಡತಿ ಕೂಡ ಸಹಿಸಿಕೊಂಡು ಬಂದಿದ್ದಾಳೆ. ನಿತ್ಯ ಆರೋಪಿ ಕುಡಿದು ಮನೆಗೆ ಬಂದು ಪತ್ನಿ ಆಶಾಳಿಗೆ ಮಾನಸಿಕ ಹಿಂಸೆ ಕೊಟ್ಟು, ನಿತ್ಯ ಜಗಳ ಆಡ್ತಿದ್ದನಂತೆ. ಇದ್ರಿಂದ ಬೇಸತ್ತ ಆಶಾ ಇವನ ಸಹವಾಸವೇ ಬೇಡ ಎಂದು ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾಳೆ. ಅದರಂತೆ ಕಳೆದ ಒಂದು ವರ್ಷದಿಂದಲೂ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿತ್ತು. ಆದ್ರೆ ಇಂದು ಕೊನೆಯ ದಿನ ಆದೇಶ ಬರುವ ದಿನವಾಗಿತ್ತು. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಆರೋಪಿ ಕುಮಾರಸ್ವಾಮಿ, ಪತ್ನಿ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಏಕಾಏಕಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದ್ರಿಂದಾಗಿ ಮಹಿಳೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾಳೆ. ಇಂತಹ ಪಾಪಿಗೆ ಕಠಿಣ ಶಿಕ್ಷೆಯೇ ವಿಧಿಸಬೇಕು ಎಂದು ಗಾಯಾಳು ತಂದೆ ಆಗ್ರಹಿಸಿದ್ದಾರೆ.