Cyber Crime;ಫಾಲೋವರ್ಸ್ ಹೆಚ್ಚಿಸಲು ಪತ್ನಿ ಸ್ನಾನದ ವಿಡಿಯೋ ಫೇಸ್‌ಬುಕ್‌ನಲ್ಲಿ ಪೋಸ್ಟ್, ಪತಿ ವಿರುದ್ಧ ಕೇಸ್!

Published : Sep 03, 2022, 04:22 PM ISTUpdated : Sep 03, 2022, 04:50 PM IST
Cyber Crime;ಫಾಲೋವರ್ಸ್ ಹೆಚ್ಚಿಸಲು ಪತ್ನಿ ಸ್ನಾನದ ವಿಡಿಯೋ ಫೇಸ್‌ಬುಕ್‌ನಲ್ಲಿ ಪೋಸ್ಟ್, ಪತಿ ವಿರುದ್ಧ ಕೇಸ್!

ಸಾರಾಂಶ

ಸಾಮಾಜಿಕ ಜಾಲತಾಣದ ಗೀಳು ತಲೆಗೆ ಹತ್ತಿದರೆ ಯಾವೆಲ್ಲಾ ಅನಾಹುತಗಳಾಗಬಹುದು ಅನ್ನೋದಕ್ಕೆ ಇಲ್ಲೊಂದು ಊದಾಹರಣೆ ಇದೆ. ತನ್ನ ಫೇಸ್‌ಬುಕ್ ಫಾಲೋವರ್ಸ್ ಹೆಚ್ಚಿಸಲು ಪತಿ, ತನ್ನ ಪತ್ನಿಯ ಸ್ನಾನದ ವಿಡಿಯೋವನ್ನೇ ಪೋಸ್ಟ್ ಮಾಡಿದ್ದಾನೆ.   

ಫಿರೋಜಾಬಾದ್(ಸೆ.03):  ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್, ಲೈಕ್ಸ್, ಕಮೆಂಟ್ ಹೆಚ್ಚಾಗಬೇಕು ಎಂದು ಹಲವರು ಭಯಾನಕ, ನಿಯಮ ಬಾಹಿರ ಕಸರತ್ತು ಮಾಡುತ್ತಾರೆ. ಹೀಗೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಲವು ವಿವಾದಗಳನ್ನು ಸೃಷ್ಟಿಸಿದ್ದಾರೆ. ಇದೀಗ ಉತ್ತರ ಪ್ರದೇಶದ ಫಿರೋಜಾಬಾದ್‌ನ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಫಾಲೋವರ್ಸ್ ಹಾಗೂ ಲೈಕ್ಸ್ ಹೆಚ್ಚಿಸಲು ತನ್ನ ಪತ್ನಿಯ ಸ್ನಾನದ ವಿಡಿಯೋವನ್ನೇ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ಬಳಿಕ ತನ್ನ ಗೆಳೆಯರು, ವ್ಯಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಮತ್ತಷ್ಟು ರೋಚಕ ಹಾಗೂ ರಹಸ್ಯ ವಿಡಿಯೋಗಳಿಗೆ ತನ್ನ ಫೇಸ್‌ಬುಕ್ ಖಾತೆ ಫಾಲೋ ಮಾಡುವಂತೆ ಕೇಳಿಕೊಂಡಿದ್ದಾನೆ. ಪತಿಯ ಸೋಶಿಯಲ್ ಮೀಡಿಯಾ ಗೀಳಿನಿಂದ ಪತ್ನಿಯ ಮಾನ ಹರಜಾಗಿದೆ. ಹೊರಗಡೆ ತಲೆ ಎತ್ತಿ ನಡೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಆಕ್ರೋಶಗೊಂಡಿರುವ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಪತಿ ವಿರುದ್ಧ ಕ್ರಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾಳೆ.

ಪತಿ ದೆಹಲಿಯ ಉತ್ತಮನಗರದಲ್ಲಿ ಕೆಲಸ ಮಾಡುತ್ತಿದ್ದಾನೆ. ತಿಂಗಳಿಗೊಮ್ಮೆ ಫಿರೋಜಾಬಾದ್‌ನಲ್ಲಿರುವ ಮನೆಗೆ ಬಂದು ಪತ್ನಿ(Wife) ಕುಟುಂಬವನ್ನು ಭೇಟಿ ಮಾಡಿಕೊಂಡು ಹೋಗುತ್ತಿದ್ದ. ಆದರೆ ಆತನಿಗೆ ಫೇಸ್‌ಬುಕ್ ಗೀಳು(Facebook) ತಲೆಗೆ ಹತ್ತಿಕೊಂಡಿತ್ತು. ಫೇಸ್‌ಬುಕ್‌ನಲ್ಲಿ ಫಾಲೋವರ್ಸ್(Fallowers) ಹೆಚ್ಚಿಸಬೇಕು, ಲೈಕ್ಸ್, ಕಮೆಂಟ್ (Likes and Comments)ಬರಬೇಕು ಅನ್ನೋ ಮಹದಾಸೆ. ಇದಕ್ಕಾಗಿ ಈಗಾಗಲೇ ಹಲವು ಕಸರತ್ತುಗಳನ್ನು ಈತ ಮಾಡಿದ್ದ. ಈತನ ಕಸರತ್ತುಗಳು ಫೇಸ್‌ಬುಕ್‌ನಲ್ಲಿ(Social Media Craze) ಯಾರ ಕಣ್ಣಿಗೂ ಬಿದ್ದಿಲ್ಲ. ಇಷ್ಟೇ ಅಲ್ಲ ಫಾರೋವರ್ಸ್, ಲೈಕ್ಸ್ ಸಂಖ್ಯೆಯೂ ಜಾಸ್ತಿಯಾಗಿಲ್ಲ. ಇದಕ್ಕಾಗಿ ಈತ ದೆಹಲಿಯಿಂದ 26 ವರ್ಷದ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾನೆ.

Viral News: ಗಗನಚುಂಬಿ ಕಟ್ಟಡದ ತುತ್ತತುದಿಯಲ್ಲಿ ದಂಪತಿಗಳ ಸೆಕ್ಸ್, ಒದ್ದು ಒಳಗೆ ಹಾಕಿ ಅಂದ್ರು ಜನ!

ಪತ್ನಿ ಸ್ನಾನ ಮಾಡಲು ಹೋಗುವ ಸಂದರ್ಭದಲ್ಲಿ ಈ ವಿಡಿಯೋ ಕಾಲ್(Video Call) ಬಂದಿದೆ. ಬಳಿಕ ಮಾಡುವಂತೆ ಪತ್ನಿ ಹೇಳಿದ್ದಾಳೆ. ಇದಕ್ಕೆ ತನಗೆ ಹೆಚ್ಚಿನ ಕೆಲಸವಿರುವುದರಿಂದ ಈಗಲೇ ಮಾತನಾಡುತ್ತೇನೆ. ಬಾಥ್‌ರೂಂಗೆ(Bathroom) ಫೋನ್ ಕೊಂಡೊಯ್ಯುವಂತೆ ಸೂಚಿಸಿದ್ದಾನೆ. ಪತಿಯ ಬೇಡಿಕೆಯನ್ನು ಒಪ್ಪಿದ ಪತ್ನಿ ಸ್ನಾನ ಮಾಡುವಾಗ ವಿಡಿಯೋ ಕಾಲ್‌ನಲ್ಲೇ ಇದ್ದಳು. ಆದರೆ ಚಾಲಾಕಿ ಗಂಡ, ಈ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ.

15 ನಿಮಿಷಕ್ಕೂ ಹೆಚ್ಚು ಕಾಲದ ಸ್ನಾನದ ವಿಡಿಯೋವನ್ನು ಪತಿ ನೇರವಾಗಿ ಫೇಸ್‌ಬುಕ್‌ಗೆ(Facebook Video) ಅಪ್ಲೋಡ್ ಮಾಡಿದ್ದಾನೆ. ಈ ವಿಜಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ವಿಡಿಯೋ ವೀಕ್ಷಣೆ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗಿದೆ. ಫಾಲೋವರ್ಸ್ ಸಂಖ್ಯೆ ದುಪ್ಪಟ್ಟಾಗಿದೆ. ಕಮೆಂಟ್ಸ್ ಲೈಕ್ಸ್‌ನಿಂದ ತುಂಬಿ ತುಳುಕಿದೆ. ಈ ಒಂದು ವಿಡಿಯೋದಿಂದ ಪತಿ ಹಿರಿ ಹಿರಿ ಹಿಗ್ಗಿದ್ದಾನೆ. ಆದರೆ ಅತ್ತ ಸ್ನಾನ ಮುಗಿಸಿ ಬಂದ ಪತ್ನಿಗೆ ಶಾಕ್ ಆಗಿದೆ. ಪತ್ನಿಗೆ ಹಲವರು ಕರೆ ಮಾಡಿ ಪೇಸ್‌ಬುಕ್‌ನಲ್ಲಿ ಸ್ನಾನದ ವಿಡಿಯೋ ಅಪ್ಲೋಡ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ತಕ್ಷಣವೇ ಪರಿಶೀಲಿಸಿದ ಪತ್ನಿಗೆ ಆಘಾತವಾಗಿದೆ. ತನ್ನ ಪತಿಯ ಫೇಸ್‌ಬುಕ್ ಖಾತೆಯಲ್ಲಿ ತನ್ನ ಸ್ನಾನದ ವಿಡಿಯೋ ಪೋಸ್ಟ್ ಆಗಿತ್ತು. ಕೂಡಲೇ ಡಿಲೀಟ್ ಮಾಡುವಂತೆ ಸೂಚಿಸಿದ್ದಾಳೆ.

Dowry Blackmail: ಶಿವಮೊಗ್ಗ, ವರದಕ್ಷಿಣೆ ಹಣ ತರದಿದ್ರೆ ಬೆತ್ತಲೆ ವಿಡಿಯೋ ಅಪ್  ಮಾಡ್ತೆನೆ..ಎಂಥಾ ಗಂಡ!

ಆದರೆ  ಇದೇ ವಿಡಿಯೋದಿಂದ ಫಾಲೋವರ್ಸ್, ಲೈಕ್ಸ್, ಕಮೆಂಟ್ ಹೆಚ್ಚಾಗಿರುವ ಕಾರಣ ವಿಡಿಯೋ ಡಿಲೀಟ್ ಮಾಡಲು ಪತಿ ನಿರಾಕರಿಸಿದ್ದಾನೆ. ಇದರಿಂದ ಪತ್ನಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಹೊರಗಡೆ ಇಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಟುಂಬಸ್ಥರ ನೆರವಿನಿಂದ ಪೊಲೀಸ್(Police) ಠಾಣೆಗೆ ತೆರಳಿದ ಪತ್ನಿ, ಪತಿ ವಿರುದ್ಧ ದೂರು ನೀಡಿದ್ದಾಳೆ. ಪ್ರಕಣ ದಾಖಲಿಸಿಕೊಂಡ ಫಿರೋಜಾಬಾದ್(uttar pradesh firozabad) ಸೈಬರ್ ಪೊಲೀಸರು, ಫೇಸ್‌ಬುಕ್ ಲಿಂಕ್ ಪಡೆದು ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಇದೀಗ ಪತಿಯನ್ನು ಬಂಧಿಸಲು ಪೊಲೀಸರು ಸಜ್ಜಾಗಿದ್ದಾರೆ.  ತನ್ನ ಪತಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು ಎಂದು ಪತ್ನಿ ಆಗ್ರಹಿಸಿದ್ದಾಳೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!