
ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಮೇ.15): ಆ ದಂಪತಿಗಳು ಪರಸ್ಪರ ಪ್ರಿತಿಯಿಂದ ಇದ್ದರೆ ಮದುವೆ ವಾರ್ಷಿಕೋತ್ಸವ (Wedding Anniversary) ಆಚರಣೆ ಮಾಡಿಕೊಂಡು ಖುಷಿಯಾಗಿ ಇರುತ್ತಿದ್ದರು. ಆದ್ರೆ, ಮದುವೆ ವಾರ್ಷಿಕೋತ್ಸವ ದಿನವೇ ದಂಪತಿಗಳಲ್ಲಿ ಕಲಹ ಶುರುವಾಗಿದ್ದು, ಮದುವೆ ವಾರ್ಷಿಕೋತ್ಸವದ ಸಂಭ್ರಮದ ದಿನವೇ ಪಾಪಿ ಪತಿ ಪತ್ನಿಯನ್ನು ಕೊಲೆ (Murder) ಮಾಡಿದ್ದಾನೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗೋಪಾಳಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಪತ್ನಿಗೆ ನೇಣು ಹಾಕಿ ಕೊಲೆ ಮಾಡಿ ಪಾಪಿ ಪತಿರಾಯ ಭೀಮರಾಯ ಎಸ್ಕೆಪ್ ಆಗಿದ್ದಾನೆ.
ಅಡುಗೆ ಹಾಗೂ ಮನೆಗೆಲಸದ ವಿಚಾರಕ್ಕೆ ಜಗಳ: ಇಬ್ಬರು ಗಂಡ-ಹೆಂಡತಿ ಪರಸ್ಪರ ಪ್ರಿತಿಯಿಂದ ಬಾಳಿ ಬದುಕಬೇಕಾಗಿತ್ತು. ಆದ್ರೆ ಈ ಇಬ್ಬರು ದಂಪತಿಗಳ ನಡುವೆ ಆಗಾಗ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ ನಡಿತಾ ಇತ್ತಂತೆ. ಆದ್ರೆ ಈಗ ಪತ್ನಿಯನ್ನು ಕೊಲೆ ಮಾಡಿರುವ ಪತಿರಾಯ ಕೇವಲ ಅಡುಗೆ ಹಾಗೂ ಮನೆ ಕೆಲಸ ಮಾಡುವ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಸೌರಾಷ್ಟ್ರಹಳ್ಳಿಯ ಪಾರ್ವತಿ ಹಾಗೂ ಗೋಪಾಳಪುರ ಗ್ರಾಮದ ಭೀಮರಾಯ ನಡುವೆ ಕಳೆದ ವರ್ಷ ಮೇ 13 ರಂದು ಗೋಪಾಳಪುರ ಗ್ರಾಮದಲ್ಲಿ ವಿವಾಹವಾಗಿತ್ತು. ಭೀಮರಾಯ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ದಂಪತಿಗಳು ಆರಂಭದ ಕೆಲ ತಿಂಗಳ ಕಾಲ ಪರಸ್ಪರ ಪ್ರೀತಿಯಿಂದ ಇದ್ದರು. ಆದರೆ, ಅಡುಗೆ ಹಾಗೂ ಮನೆ ಕೆಲಸ ವಿಚಾರವಾಗಿ ಗಂಡ ಭೀಮರಾಯ ಹೆಂಡತಿ ಪಾರ್ವತಿ ಜೊತೆ ಜಗಳ ಮಾಡುತ್ತಿದ್ದನಂತೆ. ಈ ವಿಚಾರವಾಗಿ ಇಬ್ಬರ ನಡುವೆ ನಿರಂತರವಾಗಿ ಜಗಳ ನಡೆಯುತಿತ್ತು.
ಸರ್ಕಾರಿ ನೌಕರಿ ಕೊಡಿಸುವುದಾಗಿ ಮಹಿಳೆ ವಂಚನೆ: ರಾಜೂಗೌಡ ಹೆಸರು ಪ್ರಸ್ತಾಪ
ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ಕೆಟ್ಟ ಪತಿರಾಯ: ಗಂಡತಿ-ಹೆಂಡತಿ ಸುಖ ಸಂಸಾರ ಮಾಡಿಕೊಂಡು ದೂರದ ಬೆಂಗಳೂರಿನಲ್ಲಿ ಹೊಟ್ಟೆ ಪಾಡಿಗಾಗಿ ಜೀವನ ಸಾಗಿಸ್ತಾ ಇದ್ರು, ಈಗ ಲೈಪ್ ಪಾರ್ಟನರ್ ಆದ ಹೆಂತಿಯನ್ನು ಕೊಲೆಗೈದು ಪತಿ ಪರಾರಿಯಾಗಿದ್ದಾನೆ. ಮದುವೆಯಾಗಿ ಹೆಂಡತಿ ಜೊತೆ ಖುಷಿಯಿಂದ ಜೀವನ ನಡೆಸಬೇಕಾದ ಪತಿರಾಯ ಸಿಟ್ಟಿನ ಕೈಯಲ್ಲಿ ಬುದ್ದಿ ಕೊಟ್ಟು ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಜಾತ್ರೆಗೆ ಬಂದಾಗ ಬಿತ್ತು ಹೆಂಡತಿಯ ಹೆಣ: ಯಲ್ಹೇರಿ ಗ್ರಾಮದ ಜಾತ್ರೆ ಹಿನ್ನೆಲೆ ಬೆಂಗಳೂರಿನಿಂದ ದಂಪತಿಗಳು ಗೋಪಾಳಪುರ ಗ್ರಾಮಕ್ಕೆ ಆಗಮಿಸಿ ಮನೆಯಲ್ಲಿ ವಾಸವಾಗಿದ್ದರು. ಮೇ 13ರಂದು ಮದುವೆ ವಾರ್ಷಿಕೋತ್ಸವದ ದಿನ, ಇಬ್ಬರ ನಡುವೆ ಅಡುಗೆ ಹಾಗೂ ಮನೆ ಕೆಲಸ ವಿಚಾರವಾಗಿ ಜಗಳ ಶುರುವಾಗಿದ್ದು, ತಡರಾತ್ರಿ ಭೀಮರಾಯ ಪತ್ನಿ ಪಾರ್ವತಿಗೆ ಮನೆಯಲ್ಲಿ ನೇಣು ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪತಿರಾಯ ಭೀಮರಾಯ ಪಾರ್ವತಿಗೆ ಕೊಲೆ ಮಾಡಿದ್ದಾನೆಂದು ಗುರುಮಠಕಲ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Yadgir ಆರೋಗ್ಯ ಇಲಾಖೆಯಲ್ಲಿ ಸತ್ತವರಿಗೂ ಕೋವಿಡ್ ಲಸಿಕೆ!
ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರು ಮಾತನಾಡಿ, ಗೋಪಾಳಪುರದ ಭೀಮರಾಯನ ಮನೆಯಲ್ಲಿ ಪತಿರಾಯ ಭೀಮರಾಯ, ಹೆಂಡತಿ ಜೊತೆ ಜಗಳವಾಡಿದ್ದಾನೆ. ಪದೇ ಪದೇ ದಂಪತಿಗಳ ನಡುವೆ ಅಡುಗೆ ಹಾಗೂ ಮನೆ ಕೆಲಸ ವಿಚಾರವಾಗಿ ಜಗಳ ನಡೆಯುತಿತ್ತು. ಗಂಡನಿಂದಲೇ ಹೆಂಡತಿ ಪಾರ್ವತಿ ಯನ್ನು ಗಂಡ ಕೊಲೆ ಮಾಡಿದ್ದಾನೆಂದು ದೂರು ನೀಡಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ಪೊಲೀಸರು ಮಾಡಲಿದ್ದಾರೆಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ