
ರಾಯಚೂರು, (ಮೇ.15): ಓರ್ವ ಮಹಿಳೆಗಾಗಿ ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯಕಂಡಿದೆ. ಈ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿ ಜವಳಗೇರಾ ಸಮೀಪ ನಡೆದಿದೆ.
ಒಬ್ಬಳು ಮಹಿಳೆ ಜೊತೆ ಗೆಳೆಯರು ಅನೈತಿಕ ಸಂಬಂಧ ಹೊಂದಿದ್ದು, ಇದೇ ಕಾರಣಕ್ಕೆ ಸ್ನೇಹಿತನ್ನು ಕೊಲೆ ಮಾಡಿ ಬಳಿಕ ಮುಖಕ್ಕೆ ಬೆಂಕಿ ಹಚ್ಚಿದ್ದಾನೆ. ಬಸವರಾಜ್ (35)ಕೊಲೆಯಾಗಿದ್ದ ವ್ಯಕ್ತಿ.
ಜವಳಗೇರಾ ಮೂಲದ ಜಗದೀಶ್ ಹಚ್ಚೋಳ್ಳಿ ಎನ್ನುವಾತ ತಲೆಖಾನ್ ಮೂಲದ ಬಸವರಾಜ್ ಈ ಇಬ್ಬರು ಓರ್ವ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಜಗದೀಶ್ ಆ ಮಹಿಳೆ ಜೊತೆ ಕಳೆದ ಮೂರು ವರ್ಷಗಳಿಂದ ಸಂಬಂಧ ಇಟ್ಟುಕೊಂಡಿದ್ದ. ಇದರ ಮಧ್ಯೆ ಬಸವರಾಜ್ ಎಂಬಾತ ಎಂಟ್ರಿಯಾಗಿದ್ದಾನೆ.
Hubballi ಊಟ ಮಾಡಿ ಮನೆಯಿಂದ ಹೊರ ಹೋದವ ಸಿಕ್ಕಿದ್ದು ಹೆಣವಾಗಿ!
ಇದು ಇಬ್ಬರ ನಡುವಿನ ದ್ವೇಷಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಬಸವರಾಜ್ನನ್ನು ಕೊಲ್ಲಬೇಕು ಅಂತ ಜಗದೀಶ್, ಜಗದೀಶ್ನನ್ನ ಕೊಲ್ಲಬೇಕು ಅಂತ ಮೃತ ಬಸವರಾಜ್ ಪ್ಲಾನ್ ಮಾಡಿದ್ದ.
ಇದರ ಮಧ್ಯೆ ಬಸವರಾಜಗೆ ಹಣದ ಅವಶ್ಯಕತೆ ಇತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಜಗದೀಶ್, ಸಾಲ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ. ಜವಳಗೇರಾ ಹಾಗೂ ದಿದ್ದಿಗಿ ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ಬೈಕ್ ಓಡಿಸುತ್ತಿದ್ದ ಬಸವರಾಜ್ ಕುತ್ತಿಗೆಯನ್ನು ಶೇವಿಂಗ್ ಮಾಡೋ ಕತ್ತಿಯಿಂದ ಕುಯ್ದಿದ್ದಾನೆ. ಬಳಿಕ ಬೈಕ್ನಲ್ಲಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಬಳಿಕ ಹೆಣ ಬಿದ್ದಿರುವುದನ್ನು ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಬಳಗಾನೂರು ಪೊಲೀಸ್ರು ಪರಿಶೀಲನೆ ನಡೆಸಿ, ಬಳಿಕ ಮೃತನ ಬೆರಳಿನಲ್ಲಿದ್ದ ಉಂಗುರಗಳು, ಚಪ್ಪಲಿ ಆಧಾರದಲ್ಲಿ ಕೇಸ್ ಪತ್ತೆ ಮಾಡಿದ್ದಾರೆ. ನಂತರ ಮೃತನ ಮೊಬೈಲ್ ಫೋನ್ ಟ್ರೇಸ್ ಮಾಡಿ ಆರೋಪಿ ಜಗದೀಶ್ ಹಚ್ಚೋಳ್ಳಿ ಎನ್ನುವಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದು, ನಾನು ಒಬ್ಬನೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈಗಾಗಲೇ ಪೊಲೀಸ್ರು ಆರೋಪಿಯನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದು, ಈ ಪ್ರಕರಣದ ಹಿಂದೆ ಬೇರೆ ಕೈಗಳು ಇದ್ದಾವೆಯೇ ಎನ್ನುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ