Bizarre News: ಮಗ ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದಾನೆ ಎಂಬ ಕಾರಣಕ್ಕೆ ಹೆಂಡತಿ ಮತ್ತು ಮಗುವನ್ನು ಮನೆಯಿಂದ ಗಂಡ ಆಚೆ ಹಾಕಿದ್ದಾನೆ. ವಿಚಿತ್ರ ನಂಬಿಕೆಗಳನ್ನು ಇಟ್ಟುಕೊಂಡಿರುವ ಮುಟ್ಟಾಳ ಗಂಡ ಈಗ ಹತ್ತು ಲಕ್ಷ ವರದಕ್ಷಿಣೆ ಕೊಡುವಂತೆಯೂ ಕಿರುಕುಳ ನೀಡುತ್ತಿದ್ದಾನೆ.
ರಾಮನಗರ: ಮೂಡ ನಂಬಿಕೆಗೆ ಜೋತುಬಿದ್ದು ಕಟ್ಟಿಕೊಂಡ ಹೆಂಡತಿ ಮತ್ತು ಮುದ್ದಾದ ಮಗನನ್ನು ಗಂಡ ಮನೆಯಿಂದ ಹೊರಹಾಕಿದ ಘಟನೆ ರಾಜಧಾನಿಯ ಪಕ್ಕದ ರಾಮನಗರದಲ್ಲಿ ನಡೆದಿದೆ. ನೊಂದ ಮಹಿಳೆ ಗಂಡನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೂಲಾ ನಕ್ಷತ್ರದ ಮಗು ಹುಟ್ಟಿರೋದ್ರಿಂದ ಮನೆಗೆ ತೊಂದರೆ ಆಗುತ್ತದೆಂದು ಹೊರಹಾಕಿದ್ದಾರೆಂದು ಆರೋಪ ಮಾಡಲಾಗಿದೆ. ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಆರಂಭವಾಗಿದೆ. ಅಪ್ಪ, ಅಮ್ಮ ಮಾತು ಕೇಳಿಕೊಂಡು ಹೆಂಡತಿ ಮಗುವನ್ನು ದೂರ ಮಾಡಿದ್ದಾರೆಂಬ ಆರೋಪವನ್ನು ಮಹಿಳೆ ಮಾಡಿದ್ದಾರೆ.
ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಕಳೆದ ಎರಡು ವರ್ಷದಿಂದ ಇಲ್ಲ ಸಲ್ಲದ ಕಿರುಕುಳ ನೀಡಿದ್ದಾನೆ ಎಂದು ಮಹಿಲೆ ಆರೋಪ ಮಾಡಿದ್ದಾಳೆ. ಚನ್ನಪಟ್ಟಣದ ಮಂಜುನಾಥ ಬಡವಾಣೆ ನಿವಾಸಿ ನವೀನ್ ಹಾಗೂ ಕುಟುಂಬಸ್ಥರ ವಿರುದ್ದ ಶೃತಿ ಆರೋಪ ಮಾಡಿದ್ದಾರೆ. ಹಿಂದಿನಿಂದಲೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ. ದೈಹಿಕವಾಗಿ ಹಲ್ಲೆ ನಡೆಸಿದಿದ್ದಾರೆ. ಮೂಲಾ ನಕ್ಷತ್ರದಲ್ಲಿ ಹುಟ್ಟಿರುವ ಮಗುವನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಡುವಂತೆ ಅತ್ತೆ, ಅತ್ತಿಗೆ ಹೇಳಿದ್ದಾರೆ.
ಇದನ್ನೂ ಓದಿ: ನಡು ರಸ್ತೆಯಲ್ಲೇ ತಾಯಿ-ಮಗುವನ್ನು ಕೂರಿಸಿ ದಂಡ ವಸೂಲಿ, ಮಾನವೀಯತೆ ಮರೆತ ಸಂಚಾರಿ ಪೊಲೀಸರು!
ಮದುವೆ ಆಗಿ ಮೂರುವರೆ ವರ್ಷ ಆಗಿದೆ. ಯತ್ವಿಕ್ ಎರಡೂ ಮುಕ್ಕಾಲು ವರ್ಷದ ಮಗು. 22.01-2020 ಮಧ್ಯಾಹ್ನ 12.42 ಮೂಲ ನಕ್ಷದಲ್ಲಿ ಮಗು ಜನನವಾಗಿತ್ತು. ಹುಟ್ಟಿದಾಗಿಲಿನಿಂದ ಮಗು ಬಗ್ಗೆ ನಿರ್ಲಕ್ಷ್ಯ ಮಾಡಿದ್ದಾರೆಂದು ಶೃತಿ ಆರೋಪಿಸಿದ್ದಾರೆ. ಜತೆಗೆ ಮನೆಯಿಂದ ಹೊರಹಾಕಿದ ನಂತರ ಹತ್ತು ಲಕ್ಷ ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆ ಎಂದು ಶೃತಿ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ರೇಣುಕಾಚಾರ್ಯ ಅಣ್ಣನ ಮಗ ನಾಪತ್ತೆ ಪ್ರಕರಣ: ಚಂದ್ರು ಕಾರು ಕಾಲುವೆಯಲ್ಲಿ ಬಿದ್ದಿರುವ ಶಂಕೆ
ಮುದ್ದಾದ ಹೆಂಡತಿ ಮಗುವಿನ ಜೊತೆ ಉತ್ತಮ ಸಂಸಾರ ನಡೆಸುವ ಬದಲು ಮೂಢನಂಬಿಕೆಗಳಿಗೆ ಅಂಟಿಕೊಂಡಿರುವ ನವೀನ್‌ದು ವಿಚಿತ್ರ ವ್ಯಕ್ತಿತ್ವವೇ ಸರಿ. ಆತನ ಕುಟುಂಬ ಮಗನಿಗೆ ಬುದ್ಧಿ ಹೇಳುವುದನ್ನು ಬಿಟ್ಟು ಸೊಸೆ ಮತ್ತು ಮೊಮ್ಮಗನಿಗೆ ಅವರೂ ಕಾಟ ನೀಡಿರುವುದು ವಿಪರ್ಯಾಸ. ಇಂತಾ ಮೌಢ್ಯಾಚರಣೆಗಳು ಇಪ್ಪತ್ತೊಂದನೇ ಶತಮಾನದಲ್ಲೂ ಇದೆ ಎಂಬುದೇ ಅಚ್ಚರಿಯ ಸಂಗತಿ. ಒಂದೆಡೆ ತಂತ್ರಜ್ಞಾನ, ಹೊಸ ಆವಿಷ್ಕಾರಗಳು ಗಗನಕ್ಕೇರಿದ್ದರೆ ಈ ರೀತಿಯ ಮೌಢ್ಯಾಚರಣೆಗಳು, ಕಟ್ಟುಪಾಡುಗಳು ನಮ್ಮನ್ನು ಇನ್ನಷ್ಟು ಹಿಂದೆ ಹೋಗುವಂತೆ ಮಾಡುತ್ತಿದೆ.