ಗೃಹಲಕ್ಷ್ಮಿ ಹಣಕ್ಕಾಗಿ ಪತ್ನಿಯನ್ನೇ ಕೊಂದ ಪತಿ! ದಾವಣಗೆರೆಯಲ್ಲೊಂದು ದಾರುಣ ಘಟನೆ

By Gowthami K  |  First Published Oct 23, 2024, 5:25 PM IST

ದಾವಣಗೆರೆಯಲ್ಲಿ ಗೃಹಲಕ್ಷ್ಮಿ ಹಣ ನೀಡದ್ದಕ್ಕೆ ಪತ್ನಿಯನ್ನು ಕೊಂದ ಪತಿ. ಕುಡಿತದ ಚಟ ಹೊಂದಿದ್ದ ಪತಿ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ಆರೋಪ.


ದಾವಣಗೆರೆ (ಅ.23): ಗೃಹಲಕ್ಷೀ ಹಣ ಕೊಡದಿದ್ದಕ್ಕೆ ಹೆಂಡತಿಯನ್ನೇ ಗಂಡ ಕೊಲೆ ಮಾಡಿದ ದಾರುಣ ಘಟನೆ ನಡೆದಿದೆ.  ಜಗಳೂರು ತಾಲೂಕಿನ ಉಜ್ಜಪ್ಪರವಡೇರ ಹಳ್ಳಿಯಲ್ಲಿ ಈ ಘಟನೆ ನಡಿದಿದ್ದು, ಸತ್ಯಮ್ಮ ( 40) ಕೊಲೆಯಾದ ಮಹಿಳೆಯಾಗಿದ್ದಾಳೆ. 

ಪತ್ನಿಯನ್ನೇ ಕೊಲೆ ಮಾಡಿದ ಪಾಪಿ ಪತಿ ಅಣ್ಣಪ್ಪ ಎಂದು ಗುರುತಿಸಲಾಗಿದೆ. ಕುಡಿತದ ಚಟ ಇದ್ದ ಅಣ್ಣಪ್ಪ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

Tap to resize

Latest Videos

undefined

ಬೆಂಗಳೂರು: ಬೆಡ್‌ಶಿಟ್‌ ವಿಚಾರದಲ್ಲಿ ಅಕ್ಕನ ಜೊತೆಗೆ ಗಲಾಟೆ, 19 ವರ್ಷದ ತಂಗಿ ಆತ್ಮಹತ್ಯೆ!

ಇವರ ಕೌಟುಂಬಿಕ ಕಲಹದ ಹಿನ್ನೆಲೆ ಎರಡು ಬಾರಿ ಬಿಳಚೋಡು ಪೊಲೀಸ್ ಠಾಣೆಯಲ್ಲಿ ರಾಜೀ ಸಂಧಾನ ಕೂಡ ನಡೆಸಲಾಗಿತ್ತು. ಆದರೆ ಕುಡಿಯಲು ಗೃಹಲಕ್ಷ್ಮೀ ಹಣ ಬಿಡಿಸಿ ಕೊಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಪ್ರತಿ ತಿಂಗಳು ಗೃಹಲಕ್ಷ್ಮೀ ಹಣ ಬರುವುದನ್ನು ಕಾದು ಪೋನ್ ಪೇ ಗೂಗಲ್ ಪೇ ಮೂಲಕ ತಾನೇ ಹಾಕಿಸಿಕೊಂಡು ಅಣ್ಣಪ್ಪ ಕುಡಿಯುತ್ತಿದ್ದ.

ನಿನ್ನೆ ಸತ್ಯಮ್ಮ ಅಸಗೋಡು ಬ್ಯಾಂಕ್ ನಲ್ಲಿ ಗೃಹ ಲಕ್ಷ್ಮಿ ಹಣ ಬಿಡಿಸಲು ಹೋಗಿದ್ದಳು. ಆಗ ಹಣಕ್ಕಾಗಿ ಪೀಡಿಸಿ ಬ್ಯಾಂಕ್ ನಲ್ಲೇ ಅಣ್ಣಪ್ಪ ಹಲ್ಲೇ ನಡೆಸಿದ್ದ. ಮಾತ್ರವಲ್ಲ ಹಣ ಕೊಡದಿದ್ದಕ್ಕೆ ಹಲ್ಲೆ ನಡೆಸಿ ಕೊಲೆ ಮಾಡಿ  ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ ಪಾಪಿ.

ವಿಮಾನಗಳಿಗೆ ಬಾಂಬ್ ಬೆದರಿಕೆಯಿಂದ 300 ಕೋಟಿ ನಷ್ಟ, ಏರ್ ಇಂಡಿಯಾದಲ್ಲಿ ಪ್ರಯಾಣಿಸದಂತೆ ಉಗ್ರ ಪನ್ನು ಎಚ್ಚರಿಕೆ

ಬಳಿಕ ಪತ್ನಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾಳೆ ಎಂದು ಕಥೆ ಕಟ್ಟಿದ್ದ. ಮೃತದೇಹವನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಅಣ್ಣಪ್ಪ ಹಾಗೂ ಆತನ ಕುಟುಂಬಸ್ಥರು ತಲೆಮರಸಿಕೊಂಡಿದ್ದಾರೆ. ಬಿಳಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿಗೆ ಬಲೆ ಬೀಸಿದ್ದಾರೆ.

click me!