ಹಾಸನದಲ್ಲೂ ಮೂರು ಅಕ್ರಮ ಬಾಂಗ್ಲಾದೇಶಿ ವಲಸಿಗರ ಬಂಧನ

By Kannadaprabha News  |  First Published Oct 23, 2024, 6:30 AM IST

ಕಳೆದ 3-5 ವರ್ಷಗಳಲ್ಲಿ ಬಾಂಗ್ಲಾದೇಶದಿಂದ ಸುಮಾರು 25,000 ಮಂದಿ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಾರೆ ಎಂದು ಉಡುಪಿಯಲ್ಲಿ ಬಂಧಿತರಾದವರು ತಿಳಿಸಿದ್ದರು. ಪೊಲೀಸರ ಪ್ರಕಾರ ಕರ್ನಾಟಕದಲ್ಲಿರುವ ಒಟ್ಟು ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಒಂದು ಲಕ್ಷ ಮೀರಬಹುದು.

ಹಾಸನ(ಅ.23): ಉಡುಪಿ, ಶಿವಮೊಗ್ಗ ಬಳಿಕ ಇದೀಗ ನಕಲಿ ಆಧಾರ್‌ಕಾರ್ಡ್ ಬಳಸಿ ನಗರದಲ್ಲಿ ವಾಸವಿದ್ದ ಮೂವರು ಬಾಂಗ್ಲಾ ಪ್ರಜೆಗಳನ್ನು ಜಿಲ್ಲಾ ಅಪರಾಧ ಪತ್ತೆ ದಳ ವಿಭಾಗದ ಪೊಲೀಸರು ಬಂಧಿಸಿದ್ದಾರೆ. 

ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಟಲ್ ಅಕ್ಕು ಬಂಧಿತರು. ಇವರು ಹಾಸನ ನಗರದ 80 ಅಡಿ ರಸ್ತೆಯ, ಗದ್ದೆಹಳ್ಳದ ನಾಲ್ಕನೇ ಅಡ್ಡ ರಸ್ತೆಯ ಜುಬೇರ್‌ಎಂಬುವವರಮನೆಯಲ್ಲಿ ವಾಸವಿದ್ದರು. ಜುಬೇರ್‌ನಿರ್ಮಿಸುತ್ತಿರುವ ಕಟ್ಟಡದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. 

Latest Videos

undefined

ಹಾಸನ: ಮಲಗಿದ ವೇಳೆ ಕಚ್ಚಿದ ನಾಗರ ಹಾವು, ಆಟೋ ಚಾಲಕನ ಸಾವು

ಪಶ್ಚಿಮ ಬಂಗಾಳದಲ್ಲಿ ನಕಲಿ ಆಧಾರ್ ಕಾರ್ಡ್ ಪಡೆದಿದ್ದ ಈ ಮೂವರು ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿ ಬಂದಿದ್ದರು. ಇವರ ಬಳಿ ಇರುವ ಆಧಾರ್ ಕಾರ್ಡ್‌ಗಳು ನಕಲಿ ಎನ್ನುವುದು ಖಾತ್ರಿಯಾದ ನಂತರ ಮೂವರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪೆನ್ನನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!