ಬೆಂಗಳೂರು: ಏರ್‌ಪೋರ್ಟ್‌ ಲಾಂಜ್ ಪ್ರವೇಶಕ್ಕೆ ಹೊರಟ ಮಹಿಳೆಗೆ 87,000 ರೂ. ಆನ್‌ಲೈನ್ ವಂಚನೆ

By Kannadaprabha News  |  First Published Oct 23, 2024, 12:27 PM IST

ಮೊದ ಮೊದಲು ನೆಟ್‌ವರ್ಕ್ ಸಮಸ್ಯೆ ಇರಬಹುದು ಎಂದುಕೊಂಡರೂ, ನಂತರ ಅಪರಿಚಿತರು ಕರೆಗಳನ್ನು ಸ್ವೀಕರಿಸುತ್ತಿದ್ದುದು ಆಕೆಯ ಗಮನಕ್ಕೆ ಬಂದಿದೆ. ಸಾಲದ್ದಕ್ಕೆ, ಆಕೆಯ ಕ್ರೆಡಿಟ್ ಕಾರ್ಡ್‌ನಿಂದ ₹87,000 ಅನ್ನು ಅಜ್ಞಾತ ಫೋನ್ ಪೇ ಖಾತೆಗೆ ವರ್ಗಾಯಿಸಲಾಗಿದೆ.


ನವದೆಹಲಿ(ಅ.23):  ಬೆಂಗಳೂರು ವಿಮಾನ ನಿಲ್ದಾಣದ ಲಾಂಜ್‌ನಲ್ಲಿ (ವಿಶೇಷ ಪ್ರವೇಶದೊಂದಿಗೆ ಪ್ರಯಾಣಿಕರು ಕಾಯುವ ಸ್ಥಳ) ಲಾಂಜ್ ಪಾಸ್ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಭಾರ್ಗವಿ ಮಣಿ ಎಂಬ ಮಹಿಳೆಯೊಬ್ಬರಿಗೆ, ಅವರ ಫೋನ್ ಹ್ಯಾಕ್ ಮಾಡಿ ₹87,000 ವಂಚಿಸಲಾಗಿದೆ. 

ಲಾಂಜ್ ಪ್ರವೇಶಿಸುವ ಮುನ್ನ ಭದ್ರತೆಯ ಉದ್ದೇಶಕ್ಕಾಗಿ 'ಲಾಂಜ್ ಪಾಸ್' ಎಂಬ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿ ಮುಖ ಸ್ಕ್ಯಾನ್ ಮಾಡುವಂತೆ ಅಲ್ಲಿನ ಸಿಬ್ಬಂದಿ ಸೂಚಿಸಿದ್ದು, ಆಕೆ ಅಂತೆಯೇ ಮಾಡಿದ್ದಾರೆ. ಆದರೆ ಬಳಿಕ ಅವರು ಲಾಂಜ್ ಬಳಸಲೇ ಇಲ್ಲ. ಕೇವಲ ಸ್ಟಾರ್ ಬಕ್ಸ್ ಗೆ ಹೋಗಿ ಕಾಫಿ ಮಾತ್ರ ಕುಡಿದಿದ್ದಾರೆ. ಅದಾದ ಕೆಲ ಹೊತ್ತಿನ ಬಳಿಕ ಭಾರ್ಗವಿಗೆ ಯಾವುದೇ ಫೋನ್ ಕರೆಗಳನ್ನು ಸ್ವೀಕರಿಸಲು ಆಗಲಿಲ್ಲ. ಮೊದ ಮೊದಲು ನೆಟ್‌ವರ್ಕ್ ಸಮಸ್ಯೆ ಇರಬಹುದು ಎಂದುಕೊಂಡರೂ, ನಂತರ ಅಪರಿಚಿತರು ಕರೆಗಳನ್ನು ಸ್ವೀಕರಿಸುತ್ತಿದ್ದುದು ಆಕೆಯ ಗಮನಕ್ಕೆ ಬಂದಿದೆ. ಸಾಲದ್ದಕ್ಕೆ, ಆಕೆಯ ಕ್ರೆಡಿಟ್ ಕಾರ್ಡ್‌ನಿಂದ ₹87,000 ಅನ್ನು ಅಜ್ಞಾತ ಫೋನ್ ಪೇ ಖಾತೆಗೆ ವರ್ಗಾಯಿಸಲಾಗಿದೆ.

Latest Videos

undefined

ಬೆಂಗಳೂರು: ವೇಶ್ಯಾವಾಟಿಕೆ ದೂಡಲ್ಪಟ್ಟ 12 ಅಪ್ರಾಪ್ತೆಯರ ರಕ್ಷಣೆ

ಕೂಡಲೇ ಸೈಬರ್‌ಅಪರಾಧ ಇಲಾಖೆಯನ್ನು ಸಂಪರ್ಕಿಸಿದ ಭಾರ್ಗವಿ ಮಣಿ, ಲಾಂಜ್ ಪಾಸ್ ಆ್ಯಪ್ ಡೌನ್‌ಲೋಡ್ ಬಳಿಕ ತನ್ನ ಫೋನ್ ಅನ್ನು ಸೈಬರ್ ಅಪರಾಧಿಗಳು ಹ್ಯಾಕ್ ಮಾಡಿದ್ದಾರೆ. ಅದರಿಂದಲೇ ಕಾಲ್‌ಗಳನ್ನು ಬೇರೆಡೆ ವರ್ಗಾಯಿಸಿ ಹಾಗೂ ಒಟಿಪಿ ಬಳಸಿ ಹಣ ಲಪಟಾಯಿಸಿದ್ದಾರೆ ಎಂದು ದೂರಿದ್ದಾರೆ.

click me!