
ಬೆಂಗಳೂರು(ಜೂ.03): ಪತ್ನಿಯನ್ನ ಕೊಲೆ ಮಾಡಿ ಪತ್ನಿ ಮಾತನಾಡ್ತಿಲ್ಲ ಅಂತ ಪತಿ ಗೋಳಾಡುತ್ತ ಆಸ್ಪತ್ರೆಗೆ ಹೊತ್ತು ತಂದ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಗಂಡನ ಗೋಳಾಟ ಕಂಡು ಮೊದಲು ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿದ್ದರು. ಚೆಕಪ್ ಮಾಡಿದಾಗ ಮಹಿಳೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಪತ್ನಿ ಸಾವಿನ ವಿಚಾರ ತಿಳಿದು ಗಂಡ ಭಾರೀ ಜೋರಾಗಿ ಗೋಳಾಡಿದ್ದಾನೆ. ಶರತ್ ಎಂಬಾತನೇ ಪತ್ನಿ ಪ್ರಿಯಾಳನ್ನ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಈ ಬಗ್ಗೆ ಅನುಮಾನಾಸ್ಪದ ಸಾವು ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಪೊಲೀಸರ ತನಿಖೆ ವೇಳೆ ಗಂಡನ ಅಸಲಿ ಕಥೆ ಬಯಲಾಗಿದೆ. ಪತ್ನಿ ಪ್ರಿಯಾಳನ್ನ ಕೊಲೆ ಮಾಡಿ ಶರತ್ ಭಾರೀ ಹೈಡ್ರಾಮವನ್ನೇ ಸೃಷ್ಟಿ ಮಾಡಿದ್ದ.
ಮೊದಲ ಪತ್ನಿ ಇದ್ದರೂ ಶರತ್ ಪ್ರಿಯಾಳೊಂದಿಗೆ ಎರಡನೇ ಮದುವೆಯಾಗಿದ್ದನಂತೆ. ಮೊದಲ ಪತ್ನಿ ಬಳಿ ಹೋಗ್ತಿಯಾ ಅಂತಾ ಪ್ರಿಯಾ ಪದೇ ಪದೇ ಜಗಳವಾಡುತ್ತಿದ್ದಳು. ಕೆಲ ದಿನಗಳಿಂದ ಇಬ್ಬರ ನಡುವೆ ಇದೇ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಎರಡು ದಿನಗಳ ಹಿಂದೆ ಕೂಡ ಶರತ್ ಮತ್ತು ಪ್ರಿಯಾ ಜಗಳವಾಡಿಕೊಂಡಿದ್ದರು. ಈ ವೇಳೆ ಪತ್ನಿ ಪ್ರಿಯಾಗೆ ಶರತ್ ಥಳಿಸಿದ್ದನು. ಹೊಡೆತದ ರಭಸಕ್ಕೆ ಪ್ರಿಯಾ ಕೆಳಗೆ ಬಿದ್ದು ಸಾವನ್ನಪ್ಪಿದ್ದಳು.
ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡನನ್ನೇ ಕೊಲ್ಲಿಸಿದ ಪತ್ನಿ: ಜಾನಪದ ಕಲಾವಿದನ ಮಕ್ಕಳು ಅನಾಥ
ಗಾಬರಿಯಿಂದ ಘಟನೆ ಮುಚ್ಚಿಡಲು ಶರತ್ ಪ್ರಯತ್ನಿಸಿದ್ದಾನೆ. ಎರಡು ದಿನಗಳ ಬಳಿಕ ಅಸಲಿ ಸಂಗತಿ ಬಯಲಿಗೆ ಬಂದಿದೆ. ಶರತ್‌ನ ಹೈಡ್ರಾಮ ನೋಡಿದ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಶವವನ್ನ ವೈದ್ಯರಿಂದ ಪರಿಶೀಲನೆ ನಡೆಸಿದಾಗ ಕುತ್ತಿಗೆಯ ಬಳಿ ಇರುವ ಪಕ್ಕೆಲುಬು ಮುರಿದಿತ್ತು. ಪ್ರಿಯಾ ಮೇಲೆ ಹಲ್ಲೆ ನಡೆದಿರುವ ಬಗ್ಗೆ ವೈದ್ಯರಿಂದ ಮಾಹಿತಿ ಸಿಕ್ಕಿತ್ತು.
ಸದ್ಯ ಅಸಹಜ ಸಾವು ಪ್ರಕರಣವನ್ನ ಕೊಲೆ ಕೇಸ್ ಆಗಿ ಬದಲಾವಣೆ ಮಾಡಲಾಗಿದೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶರತ್ ನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ