ಶೀಲ ಶಂಕಿಸಿ ಪತ್ನಿ ಕೊಂದು ಪತಿ ಪರಾರಿ

By Kannadaprabha News  |  First Published Sep 23, 2021, 7:38 AM IST

*   ಮೃತಳ ಪತಿ ಪತ್ತೆಗೆ ಹುಡುಕಾಟ ಆರಂಭಿಸಿದ ಪೊಲೀಸರು
*   ಹತ್ತು ವರ್ಷಗಳ ವಿವಾಹವಾಗಿದ್ದ ಹಿಂದೆ ರೂಪಾ ಹಾಗೂ ಕಾಂತರಾಜು 
*   ಪತ್ನಿ ನಡವಳಿಕೆ ಮೇಲೆ ಗುಮಾನಿಗೊಂಡಿದ್ದ ಗಂಡ


ಬೆಂಗಳೂರು(ಸೆ.23): ಶೀಲ ಶಂಕಿಸಿ ತನ್ನ ಪತ್ನಿಯ ಕುತ್ತಿಗೆ ಕೊಯ್ದು ಕೊಂದು(Murder) ರಿಯಲ್‌ ಎಸ್ಟೇಟ್‌ ಏಜೆಂಟ್‌ವೊಬ್ಬ ಪರಾರಿಯಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೆಲ್ತ್‌ ಲೇಔಟ್‌ನಲ್ಲಿ ಬುಧವಾರ ನಡೆದಿದೆ.

ಹೆಲ್ತ್‌ ಲೇಔಟ್‌ ನಿವಾಸಿ ರೂಪಾ (34) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿ ತಪ್ಪಿಸಿಕೊಂಡಿರುವ ಮೃತಳ ಪತಿ ಕಾಂತರಾಜು ಪತ್ತೆಗೆ ಪೊಲೀಸರು(Police) ಹುಡುಕಾಟ ನಡೆಸಿದ್ದಾರೆ. ಕೌಟುಂಬಿಕ ವಿಚಾರವಾಗಿ ಸಂಜೆ ದಂಪತಿ ಮಧ್ಯೆ ಜಗಳವಾಗಿದೆ. ಈ ಹಂತದಲ್ಲಿ ಕೆರಳಿದ ಆತ, ಪತ್ನಿಯ ಕತ್ತು ಕೊಯ್ದು ಪರಾರಿಯಾಗಿದ್ದಾನೆ. ಚೀರಾಟ ಶಬ್ಧ ಕೇಳಿ ನೆರೆಹೊರೆಯವರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

Tap to resize

Latest Videos

ಬೆಳಗಾವಿ ಕೊಳವೆಬಾವಿ ದುರಂತಕ್ಕೆ ಟ್ವಿಸ್ಟ್‌: ಮಗನನ್ನೇ ಕೊಂದು ಬೋರ್‌ವೆಲ್‌ಗೆ ಎಸೆದ ಪಾಪಿ ತಂದೆ

ಹತ್ತು ವರ್ಷಗಳ ಹಿಂದೆ ರೂಪಾ ಹಾಗೂ ಕಾಂತರಾಜು ವಿವಾಹವಾಗಿದ್ದು, ಈ ದಂಪತಿಗೆ ಗಂಡು ಮಗುವಿದೆ. ಕೆಲ ದಿನಗಳಿಂದ ಪತ್ನಿ ನಡವಳಿಕೆ ಮೇಲೆ ಗುಮಾನಿಗೊಂಡಿದ್ದ ಕಾಂತರಾಜು, ಇದೇ ವಿಚಾರವಾಗಿ ಸದಾ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಅಂತೆಯೇ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಸಹ ಸತಿ-ಪತಿ ಮಧ್ಯೆ ಉಂಟಾದ ಜಗಳವು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

click me!