* ಹಾವೇರಿ ಜಿಲ್ಲೆಯ ರಾಣಿಬೆನ್ನೂರು ನಗರದಲ್ಲಿ ನಡೆದ ಘಟನೆ
* ವೈಯಕ್ತಿಕ ಲಾಭಕ್ಕಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಂಧಿತ ಮಹಿಳೆ
* ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ರಾಣಿಬೆನ್ನೂರು(ಸೆ.22): ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹಾವೇರಿ(Haveri)ಜಿಲ್ಲೆಯ ರಾಣಿಬೆನ್ನೂರು(Ranebennur) ಗ್ರಾಮೀಣ ಠಾಣೆ ಪೊಲೀಸರು ನಗರದ ಹೊರವಲಯದ ನೇಕಾರ ಕಾಲನಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯನ್ನು ಸೋಮವಾರ ಬಂಧಿಸಿದ್ದಾರೆ.
ತಾಲೂಕಿನ ಚನ್ನಾಪುರ ತಾಂಡಾ ನಿವಾಸಿ ಕಮಲವ್ವ ರುದ್ರಪ್ಪ ಲಮಾಣಿ ಬಂಧಿತ ಆರೋಪಿಯಾಗಿದ್ದಾಳೆ.
ತುಮಕೂರು: ವೇಶ್ಯಾವಾಟಿಕೆಗೆ ಲಾಡ್ಜ್‌ನಲ್ಲೇ ಸುರಂಗ..!
ಈಕೆಯು ತನ್ನ ವೈಯಕ್ತಿಕ ಲಾಭಕ್ಕಾಗಿ ವೇಶ್ಯಾವಾಟಿಕೆ(Prostitute) ನಡೆಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್(Police)ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.