ಅನೈತಿಕ ಸಂಬಂಧ ಶಂಕೆ: ಹಂಡತಿ ಕೊಲೆಗೈದ ಗಂಡ

Suvarna News   | Asianet News
Published : Dec 26, 2020, 11:56 AM ISTUpdated : Dec 26, 2020, 11:58 AM IST
ಅನೈತಿಕ ಸಂಬಂಧ ಶಂಕೆ: ಹಂಡತಿ ಕೊಲೆಗೈದ ಗಂಡ

ಸಾರಾಂಶ

ಕುರಿ ಕಾಯಲು ತೆರಳಿದ್ದ ವೇಳೆಯಲ್ಲಿ ಪತ್ನಿ ಕೊಲೆಗೈದ ಪತಿ| ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದ ಘಟನೆ| ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು| 

ಗದಗ(ಡಿ.26): ಅನೈತಿಕ ಸಂಬಂಧದ ಶಂಕೆಯ ಹಿನ್ನಲೆಯಲ್ಲಿ ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. ರೇಖಾ ಹಳ್ಳಿಕೇರಿ ಎಂಬಾಕೆಯೇ ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದಾಳೆ. 

ಪರಶುರಾಮ ಹಳ್ಳಿಕೇರಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಲಕ್ಕುಂಡಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಕುರಿ ಕಾಯಲು ತೆರಳಿದ್ದ ವೇಳೆಯಲ್ಲಿ ಪತ್ನಿ ರೇಖಾ ಹಳ್ಳಿಕೇರಿ ಮೇಲೆ ಪತಿ ಪರಶುರಾಮ ಹಳ್ಳಿಕೇರಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.

ಪತಿ-ಪತ್ನಿ ಕಲಹ: ಅಳಿಯನ ಕೊಲೆಯಲ್ಲಿ ಅಂತ್ಯ

ಪತಿ ಹಲ್ಲೆ ಮಾಡಿದ್ದರಿಂದ ಪತ್ನಿ ರೇಖಾ ಹಳ್ಳಿಕೇರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಪರಶುರಾಮ ಹಾಗೂ ರೇಖಾ ದಂಪತಿಗಳಿಗೆ ಎರಡು ಸಣ್ಣ ಮಕ್ಕಳು ಇವೆ ಎಂದು ತಿಳಿದು ಬಂದಿದೆ. ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!