ಹಣ ಪಡೆದು ವಂಚನೆ: ನಿರ್ಮಾಪಕ ಕೆ. ಮಂಜು ಸೇರಿ ನಾಲ್ವರ ಮೇಲೆ ಎಫ್‌ಐಆರ್‌

Kannadaprabha News   | Asianet News
Published : Dec 26, 2020, 09:29 AM IST
ಹಣ ಪಡೆದು ವಂಚನೆ: ನಿರ್ಮಾಪಕ ಕೆ. ಮಂಜು ಸೇರಿ ನಾಲ್ವರ ಮೇಲೆ ಎಫ್‌ಐಆರ್‌

ಸಾರಾಂಶ

‘ಹೆಬ್ಬಟ್ಟು ರಾಮಕ್ಕ’ ಸಿನಿಮಾ ನಿರ್ಮಾಪಕ ಪುಟ್ಟರಾಜು ಎಂಬುವರು ಕೊಟ್ಟ ದೂರಿನ ಮೇರೆಗೆ ಎಫ್‌ಐಆರ್‌ ದಾಖಲು| ಆರೋಪಿಗಳಿಗೆ ನೋಟಿಸ್‌ ನೀಡಿ ವಿಚಾರಣೆ| ಕೆ.ಮಂಜು, ಬಿ.ಎಂ.ರಾಜ್‌ಗೋಪಾಲ್‌, ರಮೇಶ್‌ ಬಾಬು ಹಾಗೂ ವಿಜಯಲಕ್ಷ್ಮಿ ಎಂಬುವರ ವಿರುದ್ಧ ಪ್ರಕರಣ ದಾಖಲು| 

ಬೆಂಗಳೂರು(ಡಿ.26): ಹಣ ಪಡೆದು ವಂಚಿಸಿದ ಆರೋಪದಡಿ ನಿರ್ಮಾಪಕ ಕೆ.ಮಂಜು ಸೇರಿ ನಾಲ್ವರ ವಿರುದ್ಧ ಮಹದೇವಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆ.ಮಂಜು, ಬಿ.ಎಂ.ರಾಜ್‌ಗೋಪಾಲ್‌, ರಮೇಶ್‌ ಬಾಬು ಹಾಗೂ ವಿಜಯಲಕ್ಷ್ಮಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ‘ಹೆಬ್ಬಟ್ಟು ರಾಮಕ್ಕ’ ಸಿನಿಮಾ ನಿರ್ಮಾಪಕ ಪುಟ್ಟರಾಜು ಎಂಬುವರು ಕೊಟ್ಟ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕೆ.ಮಂಜು ಪುತ್ರನ ಜೊತೆ ಕಣ್ಸನ್ನೆ ಹುಡುಗಿ ರೊಮ್ಯಾನ್ಸ್‌!

ಹೊಸಕೋಟೆ ತಾಲೂಕಿನ ಸೊಣ್ಣೇನಹಳ್ಳಿ ಬಳಿ ಇರುವ ತಮ್ಮ ಜಮೀನನ್ನು ರಾಜ್‌ಗೋಪಾಲ್‌ ಎಂಬುವರು ಮಾರಾಟ ಮಾಡಿದ್ದರು. ಅದನ್ನು ಖರೀದಿಸಿದ್ದ ಪುಟ್ಟರಾಜು, ಆರ್‌ಟಿಜಿಎಸ್‌ ಮೂಲಕ ಮುಂಗಡವಾಗಿ ಹಣ ನೀಡಿದ್ದರು. ಅದೇ ಜಮೀನು ಖರೀದಿಸಲು ಮುಂದಾಗಿದ್ದ ಕೆ.ಮಂಜು, ರಾಜ್‌ಗೋಪಾಲ್‌ ಜೊತೆಯಲ್ಲಿ ಒಪ್ಪಂದ ಸಹ ಮಾಡಿಕೊಂಡಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಪುಟ್ಟರಾಜು ಪ್ರಶ್ನಿಸಿದ್ದರು. 

ಪುಟ್ಟರಾಜು ಹೆಸರಿಗೆ ಜಮೀನು ನೋಂದಣಿ ಮಾಡಿಸುವುದಾಗಿ ಹೇಳಿ ಆರೋಪಿಗಳು ಮತ್ತಷ್ಟು ಹಣ ಪಡೆದಿದ್ದರೆಂದು ದೂರಲಾಗಿದೆ. ಆರೋಪಿಗಳು ಜಮೀನು ನೋಂದಣಿ ಮಾಡಿಸಿರಲಿಲ್ಲ. ಹಣವನ್ನೂ ವಾಪಸು ಕೊಟ್ಟಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಜೀವ ಬೆದರಿಕೆ ಹಾಕಿದ್ದರು ಎಂದು ಪುಟ್ಟರಾಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿವ್ಯಾಂಗ ಯುವತಿ ಮೇಲೆ ಬಲಾತ್ಕಾರ: ಯಾರಿಗೂ ಹೇಳದಂತೆ ಬೆದರಿಕೆ!
ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬೆಂಗಳೂರು ಮನೆಯಿಂದ ಡೆಲಿವರಿ ಬಾಯ್ಸ್ ಕಳ್ಳತನ!