ದಂಪತಿಗೆ 10 ತಿಂಗಳ ಹೆಣ್ಣು ಮಗುವಿದ್ದು, ಹಣಕಾಸಿನ ವಿಚಾರವಾಗಿ ರಾತ್ರಿ ಜಗಳ ಆಗಿತ್ತು. ಕೋಪದಲ್ಲಿ ಗಂಡ ಆಯುಧದಿಂದ ಹೆಂಡತಿಯ ತಲೆಗೆ ಹೊಡೆದಿದ್ದಾನೆ.
ಚಾಮರಾಜನಗರ(ಅ.24): ಹಣಕಾಸಿನ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳ ನಡೆದು ಹೆಂಡತಿಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಮಂಗಲ ಹೊಸೂರು ಗ್ರಾಮದಲ್ಲಿ ನಡೆದಿದೆ.
ತಮಿಳುನಾಡು ಮೂಲದ ರಾಧಿಕಾ (22) ಮೃತ ಪಟ್ಟಿದ್ದಾಳೆ. ಪತಿ ಕಾರ್ತಿಕ್ ಬಲವಾದ ಆಯುಧದಿಂದ ತಲೆಗೆ ಹೊಡೆದು ಹೆಂಡತಿಯನ್ನು ಕೊಂದಿದ್ದಾನೆ. ಇವರು ಮಂಗಲ ಹೊಸೂರು ಗ್ರಾಮದಲ್ಲಿ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತಿದ್ದರು. ದಂಪತಿಗೆ 10 ತಿಂಗಳ ಹೆಣ್ಣು ಮಗುವಿದ್ದು, ಹಣಕಾಸಿನ ವಿಚಾರವಾಗಿ ರಾತ್ರಿ ಜಗಳ ಆಗಿತ್ತು. ಕೋಪದಲ್ಲಿ ಗಂಡ ಆಯುಧದಿಂದ ಹೆಂಡತಿಯ ತಲೆಗೆ ಹೊಡೆದಿದ್ದಾನೆ.
undefined
ಉತ್ತರ ಕನ್ನಡ: ಮದುವೆಯಾಗಿ ಮಕ್ಕಳಿದ್ರೂ ಬಿಡದ ಆ ಒಂದು ಚಟ, ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ ಗಂಡ
ಆರೋಪಿ ಕಾರ್ತಿಕ್ ನನ್ನು ವಶಕ್ಕೆ ಪಡೆದಿರುವ ಸಂತೇಮರಹಳ್ಳಿ ಪೊಲೀಸರು ಡಿವೈಎಸ್ಪಿ ಲಕ್ಷ್ಮಯ್ಯ, ಸರ್ಕಲ್ ಇನ್ಸ್‌ಪೆಕ್ಟರ್ ಬಸವರಾಜ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.